ದೇಶದ ಅರ್ಥಿಕ ಪರಿಸ್ಥಿತಿ ಕುಸಿದಿರುವಾಗ ಅನ್ಯ ದೇಶಕ್ಕೆ ಸಾಲ ನೀಡುವ ಕೇಂದ್ರದ ನಡೆ ಹಾಸ್ಯಾಸ್ಪದ: ವೆಲ್ಪೇರ್

ಲೋಕದರ್ಶನ ವರದಿ

ಕೊಪ್ಪಳ  07: ದೇಶ ಹಿಂದೆಂದು ಕಂಡರಿಯದ ಆರ್ಥಿಕ ಹಿನ್ನಡೆ ನಿರುದ್ಯೋಗ, ಬಡತನ, ಸಣ್ಣ ಹಾಗೂ ಬೃಹತ್ ಮಟ್ಟದ ಉದ್ಯಮಗಳು ದಿವಾಳಿತನ ಎದುರಿಸುತ್ತಿದ್ದರು ಅದನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಅನ್ಯ ರಾಷ್ಟ್ರಗಳಿಗೆ ಸಾಲದ ರೂಪದಲ್ಲಿ ಹಣ ಸಂದಾಯ ಮಾಡುತ್ತಿರುವದು ಹಾಸ್ಯಸ್ಪದವಾಗಿದೆ ಎಂದು ವೆಲ್ಪೇರ್ ಪಾರ್ಟಿಯ ರಾಜ್ಯಾಧ್ಯಕ್ಷ ನ್ಯಾಯವಾದಿ ತಾಹೇರ್ ಹುಸೇನ್ ಹೇಳಿದರು. 

ಶನಿವಾರದಂದು ಅವರು ಇಲ್ಲಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 

ಕೇಂದ್ರದ ಶೇ 1.8 ರಷ್ಟು ಜಿಎಸ್ಟಿ ಹಾಗೂ ಸತತ ಹಣದುಬ್ಬರ ಕುಸಿತದಿಂದ ರಾಜ್ಯದ ಪ್ರತಿಷ್ಟಿತ ಕೈಗಾರಿಕಾ ಪ್ರದೇಶ ಹಾಗೂ  ಅತೀ ಹೆಚ್ಚು ಕಾಮರ್ಿಕರಿಗೆ ಉದ್ಯೋಗ ನೀಡಿದ್ದ ಪಿಣ್ಯ ಕೈಗಾರಿಕಾ ಪ್ರದೇಶದ ಹಲವಾರು ಕಾರ್ಖಾನೆಗಳು ದಿವಾಳಿ ಅಂಚಿಗೆ ತಲುಪಿ ಲಕ್ಷಾಂತದ ಕಾಮರ್ಿಕಗಳ ಉದ್ಯೋಗವಿಲ್ಲದ ಇತ್ತ ತಮ್ಮ ಜೀವನ ನಡೆಸಲಾಗದೆ ಆತ್ಮಹತ್ಯೆ ಯಂತಹ ಹೆಯ್ಯ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. ಸಂವಿಧಾನಾತ್ಮಕ ಹಾಗೂ ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಲೆಕ್ಕಿಸದ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರಾಜಕಾರಣ ಮಾಡುತ್ತಿರುವದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರವಾಗಿದೆ, ಈಗಿನ ಸಕರ್ಾರಗಳ ನಡೆ ಭ್ರಷ್ಟಾಚಾರದ ವಿರುದ್ಧವೇನ್ನುವದಾದರೆ, ರಾಜ್ಯದಲ್ಲಿ ಬಹು ಕೋಟಿ ವಂಚನೆ ಪ್ರಕರಣಗಳು ಮತ್ತು ಬಳ್ಳಾರಿಯ ಗಣಿ ಮಾಫಿಯಾ ಹೀಗೆ ಹಲವಾರು ಪ್ರಕರಣಗಳು ಸುಪ್ರೀಮ್ ಕೋರ್ಟ, ಹೈಕೋರ್ಟ ಹಾಗೂ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಾವಿರಾರು ಪ್ರಕರಣಗಳು ಶೀಘ್ರ ತನಿಖೆ ಮಾಡಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸುವದು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ತಮ್ಮ ತಪ್ಪುಗಳನ್ನು ಸಮಾಜಕ್ಕೆ ಎತ್ತಿ ತೋರಿಸಿ ದೇಶದ ಒಳಿತಿಗಾಗಿ ಹೋರಾಟ ಮಾಡುವ ಸಾಮಾಜಿಕ ಹೋರಾಟಗಾರರನ್ನು ಮತ್ತು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಅವರನ್ನು ಅಕ್ರಮವಾಗಿ ಬಂದಿಸಿವೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಮಾಧ್ಯದದ ಮೇಲೆ ಹರಿದ ನಿರ್ಭಂದ,  ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಹಾಗೂ  ದೇಶದಲ್ಲಿ ಪದೇ ಪದೇ ಮಾಧ್ಯಮದವರ ಮೇಲೆ ನಡೆಯುತ್ತಿರುವ ಹಲ್ಲೆಗಳು, ತನಿಖಾ ಸಂಸ್ಥೆಗಳನ್ನು ಬಿಟ್ಟು ಎದರಿಸುವ ತಂತ್ರವನ್ನು ಮಾಡಿ ಮಾಧ್ಯಮ ಕ್ಷೇತ್ರವನ್ನು ನಿಷ್ಕ್ರಿಯಗೊಳಿಸಲು ಕೇಂದ್ರ ಸರ್ಕಾರ  ಹುನ್ನಾರ ನಡೆಸುತ್ತಿದೆ ಇದು ತೀವ್ರ ಖಂಡನಾರ್ಹವಾಗಿದೆ ಎಂದು ಅವರು ಹೇಳಿದರು. ಜಿಲ್ಲಾಧ್ಯಕ್ಷ  ಆದಿಲ್ ಪಟೇಲ್,  ಮೊಹಮ್ಮದ್ ಅಲಿಮುದ್ದೀನ್ ಜಿಲ್ಲಾ ಕಾರ್ಯದರ್ಶಿ, ಸಬಿಹಾ ಪಟೇಲ್, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.