ಮಹನೀಯರ ಜೀವನ ಸಾಧನೆಗಳ ಕುರಿತು ನಮ್ಮ ಯುವ ಜನಾಂಗ ಅರಿತಾಗ, ಅದು ತಮ್ಮ ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯವಾಗಲಿದೆ
When our younger generation learns about the life achievements of great individuals, it will serve a
ಧಾರವಾಡ 09: ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರಂತಹ ಮಹನೀಯರ ಜೀವನ ಸಾಧನೆಗಳ ಕುರಿತು ನಮ್ಮ ಯುವ ಜನಾಂಗ ಅರಿತಾಗ, ಅದು ತಮ್ಮ ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಎಂದು ಜೆಎಸ್‌ಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎನ್.ಭಾವಿ ಅವರು ಹೇಳಿದರು.
ಅವರು ನಿನ್ನೆ (ಜು.08) ಮೃತ್ಯುಂಜಯನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಪಿಯು ಕಾಲೇಜಿನ ಸಭಾಂಗಣದಲ್ಲಿ ಭಾರತ ಸರ್ಕಾರದ ಮೇರಾ ಯುವ ಭಾರತ ಧಾರವಾಡ, ಶ್ರೀ ವಾಯುಪುತ್ರ ಸಾಂಸ್ಕೃತಿಕ ಕಲಾ ಕ್ರೀಡಾ ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿ ಯುವ ಸಂಘ ಇವರ ಸಹಯೋಗದಲ್ಲಿ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ 126 ನೇ ಜಯಂತಿ ನಿಮಿತ್ತ ಏರಿ್ಡಸಿದ್ದ ದೇಶಭಕ್ತಿ ಗೀತೆ ನೃತ್ಯ ಹಾಗೂ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರು ತ್ಯಾಗ ಬಲಿದಾನದ ಫಲವಾಗಿಯೇ ನಾವಿಂದು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಅವರ ಆಶಯದಂತೆ ನಾವಿಂದು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದರು.
ಹಾಸ್ಯ ಕಲಾವಿದ ಬಸವರಾಜ ಗುಡ್ಡಪ್ಪನವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿ ಗುರುವೇ ದೈವ, ಜೀವನದಲ್ಲಿ ಗುರುಗಳ ಸ್ಥಾನ ಬಹಳ ದೊಡ್ಡದು, ಭಾರತದಲ್ಲಿ ಗುರುವಿಗೆ ಅತ್ಯುಚ್ಚವಾದ ಸ್ಥಾನವಿದೆ. ಗುರುಗಳು ತಮ್ಮ ಶಿಷ್ಯರು ಜೀವನದಲ್ಲಿ ಎಲ್ಲ ರಂಗದಲ್ಲೂ ಯಶಸ್ಸುಗಳಿಸಲಿ ಎಂದು ಬಯಸುತ್ತಾರೆ ಎಂದು ಹೇಳಿದರು.
ಮೇರಾ ಯುವ ಭಾರತ ಕೇಂದ್ರದ ಸಂಚಾಲಕ ಶಿವಾಜಿ ಎನ್. ಕೆ. ಮಾತನಾಡಿ, ಯುವ ಅಭಿವೃದ್ಧಿ ಮತ್ತು ಯುವ ನೇತೃತ್ವದ ಅಭಿವೃದ್ಧಿ ಎಂಬ ಧ್ಯೇಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಒಂದು ಹೊಸ ಇಲಾಖೆಯನ್ನು ಸ್ಥಾಪಿಸಿದೆ. ಅದುವೇ ಮೇರಾ ಯುವ ಭಾರತ ಆಗಿದೆ ಹಾಗೂ ಇಲಾಖೆಯ ಕಾರ್ಯ ಚಟುವಟಿಕೆ ಬಗ್ಗೆ ತಿಳಿಸಿದರು.
ಡಾ. ಶ್ಯಾಮ ಪ್ರಸಾದ ಮುಖರ್ಜಿ ಕುರಿತು ಏರಿ್ಡಸಿದ್ದ ದೇಶಭಕ್ತಿ ಗೀತೆ ನೃತ್ಯ ಹಾಗೂ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಮಾಡಿದರು. ಕಾಲೇಜಿನ ಉಪನ್ಯಾಸಕರುಗಳಾದ ನಾಗರಾಜ ತೋಟಗೇರ, ಟಿ. ಕಿರಣಕುಮಾರ, ರೇಣುಕಾ ಶೆಟ್ಟಿ, ಲತಾ ಹಿರೇಮಠ, ಲೀಲಾವತಿ ಪಾಟೀಲ, ಐಶ್ವರ್ಯ ಎಚ್. ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭವ್ಯ ನಿರೂಪಿಸಿ, ವಂದಿಸಿದರು.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 