ವೀಲಚೇರ ಬಾಸ್ಕೆಟ್ ಬಾಲ್ ಕ್ರೀಡೆ: ರಾಜ್ಯಕ್ಕೆ ಪ್ರಥಮ
Wheelchair Basketball: A first for the state
ಲೋಕದರ್ಶನ ವರದಿ
ವೀಲಚೇರ ಬಾಸ್ಕೆಟ್ ಬಾಲ್ ಕ್ರೀಡೆ: ರಾಜ್ಯಕ್ಕೆ ಪ್ರಥಮ
ತಾಳಿಕೋಟಿ 12: ಅಂತರಾಷ್ಟ್ರೀಯ ಪರ್ಪಲ ಪೆಸ್ಟ್ ಗೋವಾ 2025 ರ ಅಂಗವಾಗಿ ಅಕ್ಟೋಬರ್ 9ರಿಂದ 12ರ ವರೆಗೆ ಪಣಜಿಯ ಡಾನ್ ಬಾಸ್ಕೋ ಶಾಲೆಯ ಬಾಸ್ಕೆಟ್ ಬಾಲ್ ಅಂಕಣದಲ್ಲಿ ಜರುಗಿದ ವೀಲ್ ಚೇರ್ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಕರ್ನಾಟಕ ತಂಡ ಅದ್ಬುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿತು. ಈ ಪಂದ್ಯಾವಳಿಯಲ್ಲಿ ತಮಿಳುನಾಡು, ಪಾಂಡಿಚೇರಿ, ದೆಹಲಿ ಹಾಗೂ ಕರ್ನಾಟಕ ತಂಡ ಭಾಗವಹಿಸಿದ್ದವು. ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ತಂಡ ಪಾಂಡಿಚೇರಿ ಮತ್ತು ತಮಿಳುನಾಡು ತಂಡಗಳನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಪಡೆದುಕೊಂಡಿತ್ತು. ಫೈನಲ್ (ಅಂತಿಮ)ಪಂದ್ಯದಲ್ಲಿ ದೆಹಲಿ ತಂಡದೊಂದಿಗೆ ತೀವ್ರ ಪೈಪೋಟಿ ಏರ್ಪಟಟು ಸೆಣಸಾಟ ನಡೆಸಿ ಕೊನೆಯಲ್ಲಿ 33:30 ಅಂಕಗಳಿಂದ ದೆಹಲಿ ತಂಡವನ್ನು ಸೋಲಿಸಿ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ತಂಡಕ್ಕೆ ರೂ.44.000/ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ಪರ್ಪಲ ಪೆಸ್ಟ್ ವತಿಯಿಂದ ನೀಡಲಾಯಿತು. ಈ ಸಮಯದಲ್ಲಿ ಕರ್ನಾಟಕ ರಾಜ್ಯ ವೀಲ್ ಚೇರ್ ಬಾಸ್ಕೆಟ್ ಬಾಲ್ ಕಾರ್ಯದರ್ಶಿ ಸಂಜೀವ್ ಹಜೇರಿ, ತಂಡದ ಕ್ರೀಡಾಪಟುಗಳಾದ ಸಿದ್ದಪ್ಪ ಪಟಗುಂದಿ, ಫಕೀರ್ಪ ಕರವಿನಕೊಪ್ಪ, ರವಿ ಚೌಹಾನ್ ಮಾರುತಿ ಕೊಪ್ಪದ, ಸೋಮಶೇಖರ, ಗಂಗರಾಜು ಪ್ರಕಾಶ, ಕೊಟ್ರೇಶ ಹಾಗೂ ಲಕ್ಷ್ಮಣ ಎಂ.ಇದ್ದರು
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 