ವಾಷಿಂಗ್ಟನ್, ಅ 03 : ನೆರೆಯ ದೇಶ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ನೋಡಲು ಬಯಸುವುದಾಗಿ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿಯಲ್ಲಿ ಬುಧವಾರ ಈ ಕುರಿತು ಪ್ರಸ್ತಾಪಿಸಿರುವ ಜೈ ಶಂಕರ್, ಪ್ರಸ್ತುತ ಅಮೆರಿಕ ದೇಶವು ಅಫ್ಘಾನಿಸ್ತಾನದ ಕಡೆಗೆ ವಾಲಿದೆ. ಈ ವಿಚಾರ ಪ್ರತಿಯೊಬ್ಬರ ಗಮನಕ್ಕೂ ಬಂದಿರಬಹುದು. ಆದರೆ ಬದಲಾವಣೆಯು ನಿಖರವಾಗಿ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಭಾರತವು ಅಫ್ಘಾನಿಸ್ತಾನದೊಡನೆ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕಾಭಿವೃದ್ಧಿ ಮತ್ತು ರಾಜಕೀಯ ಬಾಂಧವ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. "ಇದು ಬಹಳ ಬಹುಸಂಖ್ಯಾತ ರಾಜಕೀಯ ಎಂದು ನಮಗೆ ತಿಳಿದಿದೆ. ಒಟ್ಟಾರೆಯಾಗಿ, ಯಾವುದೇ ದೇಶದಲ್ಲಿ, ಆ ದೇಶದ ಜನರು, ಆ ದೇಶದ ಚುನಾಯಿತ ಪ್ರತಿನಿಧಿಗಳು, ಇವರೆಲ್ಲರೂ ಆ ಸಮಾಜದಲ್ಲಿನ ಘಟನೆಗಳು ಸ್ಪಷ್ಟವಾಗಿ ನಿರ್ದೇಶನದ ಬಗ್ಗೆ ಪ್ರಮುಖ ಧ್ವನಿಯನ್ನು ಹೊಂದಿರಬೇಕು ಎಂದು ನಾವು ನಂಬುತ್ತೇವೆ "ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ 18 ವರ್ಷಗಳಿಂದ ಅಫ್ಘಾನಿಸ್ತಾನಕ್ಕಾಗಿ ಪಾಕಿಸ್ತಾನ ಏನು ಮಾಡಿದೆ? ಬಹುಶಃ ಈ ಪ್ರಶ್ನೆಗೆ ಅಫ್ಘಾನಿಸ್ತಾನದಿಂದ ಬಂದ ಸಾಕಷ್ಟು ನಿರಾಶ್ರಿತರಿಗೆ ಆತಿಥ್ಯ ನೀಡಿದ್ದೇವೆ ಎಂಬ ಉತ್ತರ ಸಿಗಬಹುದು. ಆದರೆ ಆಶ್ರಯಕ್ಕಾಗಿ ಮಾಡಿರುವುದೇನು ಎಂಬ ಪ್ರಶ್ನೆ ಮತ್ತೆ ಮೂಡುತ್ತದೆ ಎಂದಿದ್ದಾರೆ. ಕಳೆದ ತಿಂಗಳು, ಅಫ್ಘಾನಿಸ್ತಾನದಲ್ಲಿ ಅಮೆರಿಕದ ಉನ್ನತ ಅಧಿಕಾರಿಗಳನ್ನು ಭೇಟಿಯಾದ ನಂತರ ಡಾ. ಜೈಶಂಕರ್ "ಅಮೆರಿಕವು ಅಫ್ಘಾನಿಸ್ತಾನದಲ್ಲಿ 18 ವರ್ಷಗಳ ಮಿಲಿಟರಿ ಬದ್ಧತೆಯನ್ನು ಹೊಂದಿತ್ತು. ಮತ್ತು ಸ್ಪಷ್ಟವಾಗಿ ಹೇಳುವುದಾದರೆ ಬೇರೆ ಯಾವುದೇ ದೇಶವು ಅಂತಹ ಬದ್ಧತೆಗೆ ಸಮರ್ಥವಾಗಿದೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದ್ದರು. ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದಲ್ಲಿದ್ದಾಗ, ಡಾ.ಜೈಶಂಕರ್ ಅವರು ಅಫ್ಘಾನಿಸ್ತಾನ ಶಾಂತಿಗಾಗಿ ಅಮೆರಿಕದ ರಾಯಭಾರಿ ಜಲ್ಮೇ ಖಲೀಲ್ಜಾದ್ ಅವರನ್ನು ಭೇಟಿಯಾಗಿ ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನದ ಇತ್ತೀಚಿನ ಪರಿಸ್ಥಿತಿಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಯುಎನ್ಐ ಎಸ್ಎ ವಿಎನ್ 1321 ಅಫ್ಘಾನಿಸ್ತಾನ ಅಭಿವೃದ್ಧಿಗೆ ನೀಡಿರುವ ಕೊಡುಗೆಯೇನು? ಪಾಕಿಸ್ತಾನಕ್ಕೆ ಜೈ ಶಂಕರ್ ಸವಾಲು ವಾಷಿಂಗ್ಟನ್, ಅ 03 (ಯುಎನ್ಐ) ನೆರೆಯ ದೇಶ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ನೋಡಲು ಬಯಸುವುದಾಗಿ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿಯಲ್ಲಿ ಬುಧವಾರ ಈ ಕುರಿತು ಪ್ರಸ್ತಾಪಿಸಿರುವ ಜೈ ಶಂಕರ್, ಪ್ರಸ್ತುತ ಅಮೆರಿಕ ದೇಶವು ಅಫ್ಘಾನಿಸ್ತಾನದ ಕಡೆಗೆ ವಾಲಿದೆ. ಈ ವಿಚಾರ ಪ್ರತಿಯೊಬ್ಬರ ಗಮನಕ್ಕೂ ಬಂದಿರಬಹುದು. ಆದರೆ ಬದಲಾವಣೆಯು ನಿಖರವಾಗಿ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಭಾರತವು ಅಫ್ಘಾನಿಸ್ತಾನದೊಡನೆ ಐತಿಹಾಸಿಕ, ಸಾಂಸ್ಕೃತಿಕ, ಆಥರ್ಿಕಾಭಿವೃದ್ಧಿ ಮತ್ತು ರಾಜಕೀಯ ಬಾಂಧವ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. "ಇದು ಬಹಳ ಬಹುಸಂಖ್ಯಾತ ರಾಜಕೀಯ ಎಂದು ನಮಗೆ ತಿಳಿದಿದೆ. ಒಟ್ಟಾರೆಯಾಗಿ, ಯಾವುದೇ ದೇಶದಲ್ಲಿ, ಆ ದೇಶದ ಜನರು, ಆ ದೇಶದ ಚುನಾಯಿತ ಪ್ರತಿನಿಧಿಗಳು, ಇವರೆಲ್ಲರೂ ಆ ಸಮಾಜದಲ್ಲಿನ ಘಟನೆಗಳು ಸ್ಪಷ್ಟವಾಗಿ ನಿರ್ದೇಶನದ ಬಗ್ಗೆ ಪ್ರಮುಖ ಧ್ವನಿಯನ್ನು ಹೊಂದಿರಬೇಕು ಎಂದು ನಾವು ನಂಬುತ್ತೇವೆ "ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ 18 ವರ್ಷಗಳಿಂದ ಅಫ್ಘಾನಿಸ್ತಾನಕ್ಕಾಗಿ ಪಾಕಿಸ್ತಾನ ಏನು ಮಾಡಿದೆ? ಬಹುಶಃ ಈ ಪ್ರಶ್ನೆಗೆ ಅಫ್ಘಾನಿಸ್ತಾನದಿಂದ ಬಂದ ಸಾಕಷ್ಟು ನಿರಾಶ್ರಿತರಿಗೆ ಆತಿಥ್ಯ ನೀಡಿದ್ದೇವೆ ಎಂಬ ಉತ್ತರ ಸಿಗಬಹುದು. ಆದರೆ ಆಶ್ರಯಕ್ಕಾಗಿ ಮಾಡಿರುವುದೇನು ಎಂಬ ಪ್ರಶ್ನೆ ಮತ್ತೆ ಮೂಡುತ್ತದೆ ಎಂದಿದ್ದಾರೆ. ಕಳೆದ ತಿಂಗಳು, ಅಫ್ಘಾನಿಸ್ತಾನದಲ್ಲಿ ಅಮೆರಿಕದ ಉನ್ನತ ಅಧಿಕಾರಿಗಳನ್ನು ಭೇಟಿಯಾದ ನಂತರ ಡಾ. ಜೈಶಂಕರ್ "ಅಮೆರಿಕವು ಅಫ್ಘಾನಿಸ್ತಾನದಲ್ಲಿ 18 ವರ್ಷಗಳ ಮಿಲಿಟರಿ ಬದ್ಧತೆಯನ್ನು ಹೊಂದಿತ್ತು. ಮತ್ತು ಸ್ಪಷ್ಟವಾಗಿ ಹೇಳುವುದಾದರೆ ಬೇರೆ ಯಾವುದೇ ದೇಶವು ಅಂತಹ ಬದ್ಧತೆಗೆ ಸಮರ್ಥವಾಗಿದೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದ್ದರು. ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದಲ್ಲಿದ್ದಾಗ, ಡಾ.ಜೈಶಂಕರ್ ಅವರು ಅಫ್ಘಾನಿಸ್ತಾನ ಶಾಂತಿಗಾಗಿ ಅಮೆರಿಕದ ರಾಯಭಾರಿ ಜಲ್ಮೇ ಖಲೀಲ್ಜಾದ್ ಅವರನ್ನು ಭೇಟಿಯಾಗಿ ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನದ ಇತ್ತೀಚಿನ ಪರಿಸ್ಥಿತಿಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.