ಶ್ರೀಪಾದಂಗಳವರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನಾ ಸಮಾರಂಭ
What should one not ask for when doing a good deed
ಜಮಖಂಡಿ 14: ಸತ್ಕಾರ್ಯ ಮಾಡಿದಾಗ ಯಾವುದನ್ನು ಬೇಡಬಾರದು ಎಂಬುವದನ್ನು ಶಾಸ್ರ್ತವೇ ತಿಳಿಸಿಕೊಡುತ್ತದೆ. ಏನಾದರೂ ಬೇಡಲು ಹೋಗಿ ಅಲ್ಪ್ಪ ಬುದ್ದಿಯಿಂದ ಮತ್ತೇನು ಕೇಳಬಾರದೆಂದು ಶ್ರೂಮ ದಯತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಅಮೃತೋಪ ದೇಶದಲ್ಲಿ ಹೇಳಿದರು.
ನಗರದ ಅನಂತರಾವ ಸಾಬಡೆ ಮೈದಾನದಲ್ಲಿ ವಿಶ್ವ ಮಧ್ವ ಪರಿಷತ, ರಘೂತ್ತಮರಾಯರ ಜೀರ್ಣೋದಾರ ಸಮಿತಿ, ತಾಲೂಕಾ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ನಡೆದ ರಘೂತತ್ಮರಾಯರ ಮಠದಲ್ಲಿ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನಾ ಸಮಾರಂಭದಲ್ಲಿ ಅಮೃತೋಪ ದೇಶವನ್ನು ನೀಡಿದರು.ಸಾಧನೆಯನ್ನು ಮಾಡದೇ ಸಂಬಳ ಕೇಳಿದಂತಾಗ ಬಾರದು. ಮೋಕ್ಷ ನೀಡುವ ಪರಮಾತ್ಮನ ಹತ್ತಿರ ಮೋಕ್ಷಕ್ಕೂ ಮೊದಲು ಮೋಕ್ಷ ಸಾಧನೆಯನ್ನು ಕೇಳಬೇಕು. ಧಾರ್ಮಿಕನಾಗಿದ್ದವ ಭಕ್ತ ಅಂತ ಹೇಳಲು ಸಾಧ್ತವಿಲ್ಲ. ಆದೇ ಭಕ್ತನಲ್ಲನೆಂದು ಹೇಳಲಾಗುವದಿಲ್ಲ. ಅಂಧ ಭಕ್ತಿ ಬೇಕಾಗಿಲ್ಲ. ಪರಮಾತ್ಮನಲ್ಲಿ ಮೂಲ ಭೂತವಾದ ಭಕ್ತಿ ಇರಬೇಕು. ಪ್ರಿತಿ ಇರಬೇಕು. ಆಗ ಮಾತ್ರ ಭಕ್ತಿಯಾಗುತ್ತದೆ ಎಂದರು.ಪ್ರತಿಯೊಂದು ಜನ್ಮದಲ್ಲಿ ಭಕ್ತಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. ದೇವರು ಸವಂರ್ತರ್ಯಾಮಿ ಸರ್ವಕರ್ತನಾಗಿದ್ದಾನೆ. ಆ ಭಗವಂತನಲ್ಲಿ ಭಕ್ತಿ ಬರುವಂತೆ ಮಾಡಿಕೊಳ್ಳಬೇಕು. ಪ್ರತಿಯೊಂದು ಹಂತದಲ್ಲಿ ಭಕ್ತಿ ಬರುವಂತಿರಬೇಕು. ನಮ್ಮ ಪಂಚಜ್ಞಾನೇಂದ್ರಿಯಗಳಿಗೆ ವ್ಯವಸ್ಥೆ ಮಾಡಿದ್ದೇ ಭಗವಂತ ಇದು ಸಹಜವಾಗಿ ಆಗಿದ್ದಲ್ಲ. ಎಲ್ಲವನ್ನೂ ಭಗವಂತ ಮಾಡಿದ್ದು ಎಂದು ಎಂದಿಗೂ ಮರೆಯಬಾರದು. ನಮ್ಮಲ್ಲಿ ಜ್ಞಾಪಕ ಶಕ್ತಿಕೊಟ್ದ್ದನ್ನು ನೆನಸಿಕೊಂಡಾಗ ಜಾಗೃತವಾಗಿರುತ್ತದೆ. ಮನಸ್ಸು ಯಾವಾಗಲೂ ಕ್ರೀಯಾಶಿಲವಾಗಿದ್ದು ಮಲಗಿದಾಗ ಮಾತ್ರ ತಾನೇ ಕಾರ್ಯ ನಿಲ್ಲಿಸುತ್ತದೆ. ಪ್ರತಿಯೊಂದು ಹಂತದಲ್ಲಿ ಅವನ ಸ್ಮರಣೆ ಮಾಡಬೇಕು ಎಂದರು.
ಬಾಗಲಕೋಟೆಯ ಪಂಡಿತ ಬಿಂದುಮಾಧವಾಚಾರ್ಯ ನಾಗಸಂಪಗಿ, ಸ್ಥಳೀಯ ಮಠಾಧಿಕಾರಿ ಪಂಡಿತ ರಂಗಾಚಾರ್ಯ ಜೋಶಿ ಪ್ರವಚನ ನೀಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 