ಮನುಷ್ಯನನ್ನು ಇತರ ಜೀವಿಗಳಿಗಿಂತ ಭಿನ್ನವಾಗಿದ್ದಾನೆ: ಕೆ ಐ ಶೇಖ
What makes man different from other creatures: KI Sheikh
ಗದಗ 20: ಸಮಾಜದ ಒಳಿತು ಕೆಡಕಿನ ನಿರ್ಮೂಲನೆಗಾಗಿ ಮನುಷ್ಯನು ಒಬ್ಬ ಸಾಮೂಹಿಕ ಜೀವಿಯಾಗಿದ್ದಾನೆ. ಮನುಷ್ಯನನ್ನು ಇತರ ಜೀವಿಗಳಿಗಿಂತ ಭಿನ್ನವಾಗಿಸಿರುವುದು ಅವನಲ್ಲಿ ಇರುವ ಈ ಸಾಮಾಜಿಕ ಪ್ರಜ್ಞೆಯಾಗಿದೆ. ತನ್ನ ಜೊತೆಗಿರುವ ಜನರೊಂದಿಗೆ, ಪರಿಸರದೊಂದಿಗೆ, ಇತರ ಸಹ ಜೀವಿಗಳೊಂದಿಗೆ ಅವನಿಗೆ ಹಲವಾರು ಹೊಣೆಗಾರಿಕೆಗಳಿವೆ. ಒಟ್ಟಿನಲ್ಲಿ ಎಲ್ಲಾ ಮಾನವರ ಬದುಕಿನ ಅಡಿಪಾಯ ’ಸಂಬಂಧ ಸಂಬಂಧಗಳಲ್ಲಿ ಅತ್ಯಂತ ಮಹತ್ವದ ಸಂಬಂಧ ನೆರಹೊರೆಯವರ ಸಂಬಂಧವಾಗಿದೆ ಎಂದು ಜಮಾತ ಎ ಇಸ್ಲಾಂ ನ ಗದಗ ಜಿಲ್ಲಾಧ್ಯಕ್ಷ ಕೆ ಐ ಶೇಖ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇದೊಂದು ಅಪೂರ್ವ ಮತ್ತು ಪ್ರಬಲವಾದ ಸಂಬಂಧವಾಗಿದೆ, ಮಾನವನು ಒಂಟಿ ಮನೆಯಲ್ಲಿ ಇರುವುದರ ಬದಲು ಮಾನವರು ನೆಲೆಸಿರುವ ಗ್ರಾಮ ಅಥವಾ ಪಟ್ಟಣಗಳಲ್ಲಿ ನಡೆಸುವುದನ್ನು ಇಷ್ಟಪಡುತ್ತಾನೆ. ನೆರೆಕರೆಯವರ ಕುಟುಂಬ ಬೇರೆಯಾಗಿರಬಹುದು, ಅವರ ಭಾಷೆ, ಕುಲ, ಗೋತ್ರ ಮತ್ತು ಧರ್ಮ ಎಲ್ಲವೂ ಪರಸ್ಪರ ಭಿನ್ನವಾಗಿರಬಹುದು; ಅದಾಗಿಯೂ ಕೇವಲ ನೆರೆಕರೆಯ ಸಂಬಂಧವೆನ್ನುವುದು ಬಹಳ ನಿಕಟ ಸಂಬಂಧವಾಗಿ ಬಿಡುತ್ತದೆ. ಈ ಸಂಬಂಧದಲ್ಲಿ ಬಹಳ ಅನ್ನೋನ್ಯತೆ ಮತ್ತು ಪರಸ್ಪರ ವಿಜ್ಞಾನ ಕಂಡು ಬರುತ್ತದೆ ನೆರೆಹೊರೆಯ ಸಂಬಂಧ ಆರೋಗ್ಯಕರವಾಗಿದ್ದರೆ, ಆ ಸಮಾಜವು ಆರೋಗ್ಯಕರವಾಗಿರುವುದು.
ನೆರೆಹೊರೆಯವರು ಪ್ರೀತಿ-ವಿಶ್ವಾಸ, ಸಹಕಾರ, ಸೌಹಾರ್ಧ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ, ಸಹಕಾರಗಳು ನಲೆಗೊಳ್ಳುತ್ತದೆ. ನೆರೆಹೊರೆಯವರೊಂದಿಗೆ ಕೋಪ ದ್ವೇಷದಿಂದ ಇರುವುದೆಂದರೆ ಆ ಸಮಾಜದಲ್ಲಿ ಎಂದೂ ಶಾಂತಿ, ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ಖಾಸಗೀತನಕ್ಕೆ ಸಿಕ್ಕಿರುವ ಅತಿಯಾದ ಮಹತ್ವದ ಕಾರಣದಿಂದಾಗಿ ನೆರೆಹೊರೆಯವರು ಮತ್ತು ಅವರ ಹಕ್ಕುಗಳ ಬಗ್ಗೆ ತೀವ್ರ ನಿರ್ಲಕ್ಷವನ್ನು ತೋರಲಾಗುತ್ತಿದೆ. ಇದರಿಂದ ಈ ವಿಷಯದಲ್ಲಿ ಜನರ ಮಧ್ಯೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ಈ ಸಂಬಂಧ ಭಲಿಷ್ಠವಾಗಬೇಕಾದರೆ ನಮ್ಮ ಮಧ್ಯ ಇರುವ ಅಡ್ಡ ಗೋಡೆಗಳನ್ನು ಒಡೆದರೆ ಮಾತ್ರ ಸಾಧ್ಯವಾಗುತ್ತದೆ. ಅದರೆ ಇಂದು ಈ ಮಾನವೀಯ ಸಂಬಂಧಗಳು ನಿಧಾನವಾಗಿ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತಾನು, ತನ್ನದು ಎಂಬ ಸಂಕುಚಿತ ಭಾವ ಬೆಳಸಿಕೊಂಡು, ತನ್ನಲ್ಲೇ ಕೇಂದ್ರೀಕೃತವಾಗುತ್ತಿದ್ದಾನೆ. ಇಸ್ಲಾಮಿನಲ್ಲಿ ನೆರೆಹೊರೆಯವರ ಹಕ್ಕುಗಳಿಗೆ ಬಹಳ ಪ್ರಾಧಾನ್ಯತೆ ಇದೆ ಪವಿತ್ರ ಕುರಾನಿನಲ್ಲಿ ಸ್ಪಷ್ಟವಾಗಿ ಹೀಗೆ ಅದೇಶಿಸಲಾಗಿದೆ. ಆಪ್ತರಾದ ನರೆಹೊರೆಯವರೊಂದಿಗೂ ಅಪರಿಚಿತ ನರೆಹೊರೆಯವರೊಂದಿಗೂ ಉತ್ತಮ ರೀತಿಯಿಂದ ವರ್ತಿಸಿರಿ.( ಅನ್ನಿಸಾ 36) ಪ್ರವಾದಿ ವಚನಗಳಲ್ಲಿ ನೆರೆಹೊರೆಯವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸುವುದು ವಿಶ್ವಾಸದ ಕಡ್ಡಾಯ ಭಾಗವಾಗಿದೆ ಎನ್ನಲಾಗಿದೆ. ಖಂಡಿತವಾಗಿಯೂ ಅವನು ಸತ್ಯ ವಿಶ್ವಾಸಿಯಲ್ಲ ಎಂದು ಪ್ರವಾದಿ(ಸ)ಮರು ಹೇಳಿದರು. ಆಗ ಯಾರು ಪ್ರವಾದಿವರ್ಯರೇ ?ಎಂದು ಪ್ರಶ್ನಿಸಲಾಯಿತು,
ಯಾರ ಕಾರಣದಿಂದಾಗಿ ನೆರೆಹೊರೆಯ ವ್ಯಕ್ತಿಯು ಸುರಕ್ಷಿತನಲ್ಲವೋ ಅಂತಹ ವ್ಯಕ್ತಿ ಸತ್ಯ ವಿಶ್ವಾಸಿಯಲ್ಲ ಎಂದು ಅವರು ಉತ್ತರಿಸಿದರು.( ಬುಖಾರಿ) ಸಮಾಜದ ಮುಂದೆ ನೆರಹೊರೆಯವರ ಹಕ್ಕುಗಳ ಅತ್ಯುತ್ತಮ ಮಾದರಿಯನ್ನು ಪ್ರಸ್ತುತಪಡಿಸುವುದು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು, ನೆರೆಹೊರೆಯವರ ಮಧ್ಯೆ ಇರುವ ಅಂತರವನ್ನು ನೀಗಿಸಿ ಅವರ ಮಧ್ಯೆ ಸೌಹಾರ್ದ ಸಂಬಂಧ ಬೆಳೆಯುವಂತೆ ಮಾಡುವುದು ಹಾಗೂ ದಾರಿಹೋಕರು, ಸಹೋದ್ಯೋಗಿಗಳು, ಪ್ರಾಯಾಣಿಕರು, ರಸ್ತೆಯ ನಿಯಮಗಳು, ವಾಹನ ಸಂಚಾರದ ನಿಯಮಗಳ ಬಗ್ಗೆ ಕಾಳಜಿ ಉಳ್ಳವರಾಗಿ ಮಾಡುವುದು ಮುಂತಾದ ಮಹೋನ್ನತ ಉದ್ದೇಶಗಳನ್ನು ಮುಂದಿಟ್ಟು ಜಮಾತೆ ಇಸ್ಲಾಮೀ ಹಿಂದ್ ಮಾದರಿ ನೆರೆಹೊರೆ, ಮಾದರಿ ಸಮಾಜ’ ಎಂಬ ಶೀರ್ಷಿಕೆ ಅಡಿಯಲ್ಲಿ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ನವೆಂಬರ್ 21, 2025 ರಿಂದ 30ರವರೆಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೂಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿ ಯುವಕರ ರಾಲಿ, ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಿಮ್ಮ ಸುತ್ತಲಿನ 4 ಮನೆಗಳು ನಮ್ಮ ಕುಟುಂಬ ಗಳಿದ್ದಂತೆ ಒಂದೇ ತಾಯಿಯ ಮಕ್ಕಳಂತೆ ನಾವು ಇಲ್ಲಿ ಬಾಳಬೇಕು ಈ ಅಭಿಯಾನವು ರಾಷ್ಟ್ರ ಮಟ್ಟದಲ್ಲಿ 10 ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಶಸ್ವಿಗೊಳಿಸಯವಂತೆ ಸಾರ್ವಜನಿಕರಲ್ಲಿ ಕೆ ಐ ಶೇಖ ವಿನಂತಿಸಿದರು. ಗೋಷ್ಠಿ ವೇಳೆ ಖಜಾಹುಸೇನ ಬಿಲ್ಲಿವಾಲೆ, ಮಹಮ್ಮದ ಇರಕಲ್ಲ, ಮುಕ್ತಮಸಾಬ ಉಮಚಗಿ, ಎಂ ಎ ಶಿರಹಟ್ಟಿ, ಮಹಮ್ಮದಗೌಸ ಮಕಾನದಾರ, ಎಂ ಎ ರಾಣೇಬೆನ್ನೂರ, ಎಂ ಎಸ್ ಸೈಯ್ಯದ, ಜಿ ಕೆ ಖಾಜಿ, ಮಹಮ್ಮದ ಜಾಫರ್ ಹಮ್ಮಸಾಗರ ಸೇರಿದಂತೆ ಸಮಾಜದ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 