ಲೋಕದರ್ಶನ ವರದಿ
ದಾಂಡೇಲಿ, 17 : ಹಳಯಾಳ ತಾಲೂಕಿನಲ್ಲಿ ಸರಕಾರಕ್ಕೆ ಜನತೆಯಿಂದ ಸಂದಾಯವಾದ ಕೊಟ್ಯಾಂತರ ರೂಪಾಯಿ ವೆಚ್ಚದ ತೆರಿಗೆ ಹಣದಲ್ಲಿ ಕೃಷಿ ಮತ್ತು ಕುಡಿಯುವ ನೀರಿಗಾಗಿ ನಿಮರ್ಿಸಿದ 67 ಕೊಳವೆ ಬಾವಿಗಳು ವಿಫಲವಾಗಿವೆ. ಇದು ಹಳಿಯಾಳ ರೈತರ ಕಣ್ಣು ಸದಾ ಉಕ್ಕಿ ಹರಿಯುವ ದಾಂಡೇಲಿಯ ಕಾಳಿ ನದಿ ನೀರಿನ ಮೇಲೆ ಬೀಳುವಂತೆ ಮಾಡಿದ್ದು ಸಹಜ. ಈ ಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಿರುವುದು ಕಾಳಿ ತಟದ ಜನತೆಯಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಅವೈಜ್ಞಾನಿಕ ಹಾಗೂ ನಿರ್ಲಕ್ಷ್ಯದ ಕಾರಣದಿಂದ ಈ ಅವಾಂತರ ಸಂಭವಿಸಿದ್ದು ಮಾಹಿತಿ ಹಕ್ಕಿನಡಿಯಲ್ಲಿ ಬಹಿರಂಗಗೊಂಡಿದೆ. ಇದು ಸದ್ಯ ಮುಕ್ತಾಯದ ಹಂತದಲ್ಲಿರುವ ಕಾಳಿ ಏತ ನೀರಾವರಿ ಯೋಜನೆಯ ಹಿಂದಿನ ದುರುದ್ದೇಶವನ್ನು ಸ್ಪಷ್ಟಪಡಿಸುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಹುಲ್ಲಟ್ಟಿ ಗ್ರಾಮದ ಸಕ್ಕರೆ ಕಾಖರ್ಾನೆಗಾಗಿ ಎರಡು ಬಾರಿ ಹಾಗೂ ಹಳಿಯಾಳದ ಜನತೆಯ ಕುಡಿಯುವ ನೀರಿಗಾಗಿ ಹೀಗೆ ಮೂರ್ನಾಲ್ಕು ಬಾರಿ ದಾಂಡೇಲಿಯ ಕಾಳಿ ನದಿಯ ನೀರು ಈಗಾಗಲೇ ಹಳಿಯಾಳದ ಪಾಲಾಗಿದೆ. ಇದು ದಾಂಡೇಲಿಯ ಪ್ರವಾಸೋಧ್ಯಮಕ್ಕೆ ಮಾರಕವಾಗತೊಡಗಿದೆ. 12 ವರ್ಷಗಳ ಹಿಂದೆ 2007 ರಲ್ಲಿಯೇ ಸರಕಾರದಿಂದ ನೇಮಿಸಲ್ಪಟ್ಟಿದ್ದ ಮಹೇಂದ್ರ ಜೈನ್ ವರದಿಯು ಸರಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿಯು ದಾಂಡೇಲಿಯ ಅಭೀವೃದ್ಧಿಯ ನೀಲ ನಕ್ಷೆಯಾಗಿದ್ದು ಇದರಲ್ಲಿನ ಎಲ್ಲ ಅಂಶಗಳು ಅನುಷ್ಟಾನವಾದ ಬಳಿಕವೇ ನೀರು ಪರರಿಗೆ ನೀಡಬೇಕು ಎಂಬ ಶಿಫಾರಸ್ಸು ಮಾಡಲಾಗಿತ್ತು. ಆದರೆ ಉತ್ತರ ಕನ್ನಡ ಜಿಲ್ಲೇಯಲ್ಲಿಯೇ ಹಳಿಯಾಳ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸರಕಾರದಿಂದ ನಿಮರ್ಿಸಲಾಗಿದ್ದ ಅತಿ ಹೆಚ್ಚು ಬೋರ್ವೆಲ್ಗಳು ವಿಫಲವಾಗಿ ಅಂತರ್ಜಲ ಕುಸಿಯುತ್ತಿರುವುದು ತೀವ್ರ ಚಚರ್ೆಗೆ ಗ್ರಾಸವಾಗಿದೆ. ಕೊಳವೆ ಬಾವಿಗಳು ವಿಫಲಗೊಂಡಿರುವುದರಿಂದ ಜೈನ್ ವರದಿಯನ್ನು ಕಡೆಗಣಿ ಕಾಳಿ ಏತ ನೀರಾವರಿ ತನ್ನ ಪಾರುಪತ್ಯ ಮೆರೆಯುತ್ತಿರುವುದು ದಾಂಡೇಲಿ ಜನತೆಯ ದುದರ್ೈವವಾಗಿದೆ.
ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಪ್ರತಿವರ್ಷ ಸರಕಾರ ಯಥೇಚ್ಚವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಸಂಬಂದಪಟ್ಟ ಇಲಾಖೆ ವಿಫಲಗೊಂಡಿರುವ ನೀರು ಬಾರದ ಕೊಳವೆ ಬಾವಿಗಳ ಲೆಕ್ಕವನ್ನೇ ಇಟ್ಟಿಲ್ಲಾ ಎನ್ನುವ ವಿಷಯ ಮಾಹಿತಿ ಹಕ್ಕಿನಿಂದ ಬಯಲಾಗಿರುವುದು ನೋವಿನ ಸಂಗತಿ. ಇದರಿಂದ ಜನರ ತೆರಿಗೆ ಹಣ ಕಾಳಿ ನದಿ ನೀರಿನಂತೆ ಬತ್ತುತ್ತಿರುವುದು ಮಾತ್ರ ಸತ್ಯ. ಸಂಬಂದಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಜ್ಯತನವೇ ದಾಂಡೇಲಿಯ ಕಾಳಿ ನದಿ ನೀರಿಗೆ ಸಂಚಕಾರ ತಂದೊಡ್ಡಿದೆ. ಹಾಗಾಗಿಯೇ ಜೈನ್ ವರದಿ ಅನುಷ್ಟಾನ ಸಮಿತಿಯ ನೇತೃತ್ವದಲ್ಲಿ ಕಾಳಿ ಏತ ನೀರಾವರಿಗಾಗಿ ದಾಂಡೇಲಿಯಲ್ಲಿ ನಿಮರ್ಾಣವಾಗುತ್ತಿರುವ ಜ್ಯಾಕ್ವೆಲ್ ಪಂಪ್ನ್ನು ವಿರೋಧಿಸಿ ಹಲವಾರು ದಾಖಲೆ ಸಹಿತ ಲಿಖಿತ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿವೆ. ಈ ಎಲ್ಲ ಬೆಳವಣಿಗೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಹಳಿಯಾಳ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವೆಂಬುದು ಗಮನಾರ್ಹ ಸಂಗತಿ.