ಬೆಂಗಳೂರು, ಡಿ 21 ಚಾಲೆಂಜಿಂಗ್ ಸ್ಟಾರ್ ದರ್ಶನ್
ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಭರ್ಜರಿ ಸುದ್ದಿ ಹೊರಬಿದ್ದಿದೆ. ಅಭಿಮಾನಿಗಳು ಕಾತರದಿಂದ
ಕಾಯುತ್ತಿದ್ದ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ರಾಬರ್ಟ್ ದರ್ಶನಕ್ಕಾಗಿ
ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ದೊಡ್ಡ ಸಂಭ್ರಮದ ಸುದ್ದಿ ಚಿತ್ರತಂಡದಿಂದ ಬಂದಿದೆ. ಹೌದು,
ರಾಬರ್ಟ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಕ್ರಿಸ್ ಮಸ್ ಗೆ ರಾಬರ್ಟ್ ಚಿತ್ರದ ಫಸ್ಟ್ ಲುಕ್ ರಿಲೀಸ್
ಆಗುತ್ತಿದೆ. ಮೊದಲ ಪೋಸ್ಟರ್ ಬೈಕ್ ಮೇಲೆ ಕುಳಿತಿರುವ ದರ್ಶನ್ ಹಿಂಬದಿಯ ಲುಕ್ ಮಾತ್ರ ರಿಲೀಸ್ ಮಾಡಲಾಗಿತ್ತು.
ದರ್ಶನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಮೊದಲ ಪೋಸ್ಟರ್ ನಿಂದ ಉತ್ತರ ಸಿಕ್ಕಿರಲಿಲ್ಲ.
ಹಾಗಾಗಿ ಸದ್ಯ ರಿಲೀಸ್ ಆಗುತ್ತಿರುವ ಪೋಸ್ಟರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.ಜಾಲತಾಣದಲ್ಲಿ
ಸುದ್ದಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಖುಷಿಯಿಂದ ಪ್ರತಿಕ್ರಿಯಿಸಿದ್ದು, ಡಿ 25ಕ್ಕೆ ಕಾಯುತ್ತಿರುವುದಾಗಿ
ತಿಳಿಸಿದ್ದಾರೆ. ಈಗಾಗಲೆ ರಾಬರ್ಟ್ ಬರೋಬ್ಬರಿ
100 ದಿನಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಖುಷಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದ
ಮೂಲಕ ಹಂಚಿಕೊಂಡಿದ್ದರು. ಸದ್ಯ ವಾರಣಾಸಿಯಲ್ಲಿ ಬೀಡುಬಿಟ್ಟಿರುವ ಚಿತ್ರತಂಡ ಚಿತ್ರದ ಪ್ರಮುಖ ದೃಶ್ಯಗಳನ್ನು
ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿದೆ