ಜೇನು ತುಪ್ಪವನ್ನು ಬಿಡದವನು ಹಣ ಕಂಡರೆ ಬಿಟ್ಟಾನೆಯೇ?

ಭ್ರಷ್ಟಾಚಾರ, ಲಂಚಗೋಳಿತನ, ಕಳ್ಳತನ ಇವೆಲ್ಲ ನಮ್ಮದೇಶದಲ್ಲಿ ತುಂಬಾ ಹಳೆಯ ವಿಷಯ, ಅದು ಬದಲಾಗುವ ವ್ಯವಸ್ಥೆಯೇ ಅಲ್ಲ ಎನ್ನುವಂತೆ ಎಲ್ಲರ ಮನಸ್ಸಿನಲ್ಲಿ ಕುಳಿತುಬಿಟ್ಟಿದೆ.  ಸಣ್ಣದೊಂದು ಕೆಲಸ ಆಗಬೇಕಿದ್ದರೂ ಅಲ್ಲೊಂದು ನೂರೋ ಇನ್ನೂರೋ ಟೇಬಲ್ ಕೆಳಗೆ ಇಟ್ಟರೆ ಬಹು ಬೇಗನೇ ಕೆಲಸವಾಗುತ್ತದೆ. ಇಲ್ಲವಾದರೆ ಆ ಕೆಲಸ ವಷರ್ಾನುಗಟ್ಟಲೇ ಅಲ್ಲಿಯೇ ಬಿದ್ದಿರುತ್ತದೆ. ನಮ್ಮ ಜರೂರಿಗೆ ಯಾವ ಕೆಲಸವೂ ಆಗುವುದಿಲ್ಲ. ಒಮ್ಮೆ ನೆನಪು ಮಾಡಿದಾಗ ಇಲ್ಲ ಇನ್ನೊಂದು ವಾರ ಬಿಟ್ಟು ಬನ್ನಿ ಕೆಲಸ ಮುಗಿದಿರುತ್ತದೆ ಎನ್ನುತ್ತಾರೆ ವಿನಹ ನಮ್ಮ ಕಾಗದಪತ್ರಗಳು ಇಷ್ಟು ದಿನ ಎಲ್ಲಿ ಇದ್ದವೋ ಅಲ್ಲಿಯೇ ಇರುತ್ತವೆ. ಇದು ಒಂದು ಪ್ರದೇಶದ್ದೋ, ಒಂದಷ್ಟು ಜನರದ್ದೋ ಅಲ್ಲ. ಜನಸಾಮಾನ್ಯರಿಗೆಲ್ಲರಿಗೂ ಅನುಭವಕ್ಕೆ ಬಂದಿರುವ ಸತ್ಯ. ಟೇಬಲ್ ಕೆಳಗೆ ಇಟ್ಟರೆ ಟೇಬಲ್ ಮೇಲಿನ ಫೈಲ್ ಮೂವ್ ಆಗುತ್ತೆ ಎನ್ನುವ ವಾಕ್ಯವು ತೀರ ಸಾಮಾನ್ಯ ಎನ್ನುವಂತೆ ಜನ ಮಾತನಾಡುತ್ತಾರೆ. ಹಾಗಿರುವಾಗ ಭ್ರಷ್ಟಾಚಾರ ಎನ್ನುವದು ವಿಶೇಷ ಎನ್ನಿಸುವುದೇ ಇಲ್ಲ. 

ಕೊಡುವವರು ಇರುವವರೆಗೆ ಲಂಚ ತೆಗೆದುಕೊಳ್ಳುವವರು ಇರುತ್ತಾರೆ ಅಂತ ಹೇಳುತ್ತಾರೆ. ಲಂಚ ಕೊಡದೇ ಯಾವ ಕೆಲಸವನ್ನು ಸಸೂತ್ರವಾಗಿ ಮಾಡಿಕೊಡುತ್ತಾರೆ ಎನ್ನುವದು ಮಾತ್ರ ಅಸ್ಪಷ್ಟ. ಒಂದಾನುವೇಳೆ ನಾನು ಲಂಚ ಕೊಡುವುದಿಲ್ಲ ಎಂದರೆ ಕೆಲಸ ಆಗುವುದಿಲ್ಲ. ಲಂಚ ಕೊಡುವ ವಿಚಾರ ಮೇಲಧಿಕಾರಿಗಳಿಗೆ ತಿಳಿಸಿದರೆ ಮುಂದೊಂದು ದಿನ ಮತ್ತೆ ಶ್ರೀಸಾಮಾನ್ಯ ಅದೇ ಅಧಿಕಾರಿಯ ಮುಂದೆ ನಿಂತಾಗ ಚಪ್ಪಲ್ಲು ಸವೇದು ಹೋಗುವಷ್ಟು ಸತಾಯಿಸಿಬಿಡುತ್ತಾರೆ. ಅದಕ್ಕಿಂತ ಬೇಗ ಕೆಲಸ ಆಗಬೇಕು, ನಮ್ಮ ಕೆಲಸ ಮಾಡಿಕೊಂಡು ಹೋದರಾಯಿತು ಅಂತ ಜನ ತಿಳಿದುಬಿಟ್ಟಿದ್ದಾರೆ. 

ಒಬ್ಬ ಜೇನು ತುಪ್ಪದ ವ್ಯಾಪಾರಿ ಇದ್ದ. ಅವನು ಆ ಊರಿನ ದೊಡ್ಡ ವ್ಯಾಪಾರಿ. ತನ್ನ ಸುತ್ತ ಮುತ್ತಲ ಊರಿಗಲ್ಲದೇ ಬೇರೆಬೇರೆ ರಾಜ್ಯಗಳಿಗೂ ಜೇನು ತುಪ್ಪವನ್ನು ಮಾರುತ್ತಿದ್ದ. ಈ ವ್ಯಾಪಾರಿ ಕಾಡಿನ ಜನರಿಂದ, ಹಳ್ಳಿಗಳ ಜನರಿಂದ ಜೇನುತುಪ್ಪವನ್ನು ಖರೀದಿಸುತ್ತಿದ್ದ. ಹಾಗೆ ಖರೀದಿಸುವಾಗ ವ್ಯಾಪಾರಿ ತಾನೇ ಖುದ್ದಾಗಿ ನಿಂತು ಅಳೆದು ತೆಗೆದುಕೊಂಡು ಹಣ ನೀಡುತ್ತಿದ್ದ. ಆನಂತರದಲ್ಲಿ ಅರ್ಧ ಲೀಟರು, ಒಂದು ಲೀಟರು, ಎರಡು ಲೀಟರು ಮತ್ತು ಐದು ಲೀಟರಿನ ಗಾಜಿನ ಬಾಟಲಿಯಲ್ಲಿ ಬೇರೆ ಬೇರೆ ತುಂಬಿಸುವ ಕೆಲಸವಾಗುತಿತ್ತು. ಅವುಗಳನ್ನು ಅಳೆದು ತುಂಬಲು ಒಬ್ಬ ಕೆಲಸಗಾರನನ್ನು ನೇಮಿಸಿಕೊಂಡಿದ್ದ. ಹಾಗಿರುವಾಗ ಒಮ್ಮೆ ಎರಡು ಲೀಟರನ್ನು ಖರಿದೀಸಿದ ಆ ಜೇನುತುಪ್ಪ ಗಾಜಿನ ಬಾಟಲಿಗೆ ಹಾಕುವಷ್ಟರಲ್ಲಿ ಹತ್ತು ಗ್ರಾಮ್ ಕಡಿಮೆ ಬಂದಿತ್ತು. ಇದು ಹೇಗೆ ಸಾಧ್ಯ ಜೇನನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಎರೆಸುವಾಗ ಬಡಿದದ್ದನ್ನೆಲ್ಲ ಬಳಿದುಬಳಿದು ತುಂಬಿದ. ಆದರೆ ಆಗ ಸಿಕ್ಕಿದ್ದು ಎರಡು ಗ್ರಾಂ ಮಾತ್ರ. ಪ್ರತೀ ಎರಡು ಲೀಟರಿಗೆ ಹತ್ತು ಗ್ರಾಂ ಕಡಿಮೆಯಾದರೆ ತನಗೆ ಅದೆಷ್ಟು ನಷ್ಟವಾಗುತ್ತಿದೆಯಲ್ಲ ಎಂದು ಯೋಚಿಸಿದ. ಒಂದು ಅನುಮಾನ ಹುಟ್ಟಿತು. ಮಾರನೇ ದಿನ ನಿತ್ಯಂತೆ ಜೇನು ತುಪ್ಪ ಖರೀದಿಸಿ ಮುಂದಿನ ಕೆಲಸವನ್ನು ಕೆಲಸದವನಿಗೆ ಬಿಟ್ಟು ಹೋದ. ಆ ಕೆಲಸದವನು ಜೇನು ತುಪ್ಪವನ್ನು ಅಳತೆ ಮಾಡಿ ಗಾಜಿನ ಬಾಟಲಿಯಲ್ಲಿ ತುಂಬಿಸತೊಡಗಿದ. ತುಂಬಿಸುವಾಗ ಕೈಗೆ ಬಡಿಯುತಿತ್ತು. ಆಗಾಗ ಆ ಜೇನು ಬಡಿದ ಕೈಯನ್ನು ನೆಕ್ಕಿಬಿಡುತ್ತಿದ್ದ. ಮತ್ತೆ ಕೈ ತೊಳೆದುಕೊಂಡು ಬಂದು ಮತ್ತಷ್ಟು ಬಾಟಲಿಗೆ ತುಂಬಿಸಿ ಮತ್ತೆ ಕೈ ನೆಕ್ಕುತ್ತಿದ್ದ. ಅಷ್ಟಲ್ಲದೇ ಪಾತ್ರೆಗೆ ಬಡಿದ ತುಪ್ಪವನ್ನು ಆಗಾಗ ಒಂದು ದೊಡ್ಡ ಟವೇಲಿನಿಂದ ಒರೆಸುತ್ತಿದ್ದ. ತನ್ನ ಎಲ್ಲ ಕೆಲಸ ಮುಗಿದ ಮೇಲೆ ಆ ಟೇವೇಲನ್ನು ತೆಗೆದುಕೊಮಡು ವ್ಯಾಪಾರಿ ಮನೆಯ ಹಿಂಭಾಗಕ್ಕೆ ಹೋದ. ಅಲ್ಲಿ ಒಂದು ಪುಟ್ಟ ಪಾತ್ರೆ ಇತ್ತು ಅದರಲ್ಲಿ ಟವೇಲನ್ನು ಹಿಂಡಿದ. ಪಾತ್ರೆಯಲ್ಲಿ ಒಂದಷ್ಟು ತುಪ್ಪ ಆಗಲೇ ಇತ್ತು. ಆ ಪಾತ್ರೆಯನ್ನು ಮನೆಗೆ ತೆಗೆದುಕೊಂಡು ಹೋದ. ಹೀಗೆ ಹನಿಹನಿ ಗೂಡಿಸಿದ ತುಪ್ಪವನ್ನು ತಾನು ಪ್ರತ್ಯೇಕವಾಗಿ ಮಾರಾಟ ಮಾಡುತ್ತಿದ್ದ.  

ಜೇನು ಹಿಂಡುವವನನ್ನು ಆಗಾಗ ಬದಲಿಸು, ಕೈ ನೆಕ್ಕುವುದನ್ನು ತಪ್ಪಿಸಬಹುದು ಎಂದು ಚಾಣಕ್ಯನ ಮಾತು ಬರುತ್ತದೆ. ಅಂದರೆ ಹಣವೊಂದೆ ಲಂಚ, ಅಥವಾ ಕಳ್ಳತನ ಎನ್ನಿಸುವುದಿಲ್ಲ. ನಮ್ಮದಲ್ಲದ ವಸ್ತುವನ್ನು ಗುಪ್ತವಾಗಿ, ನಿಯಮಕ್ಕೆ ವಿರುದ್ಧವಾಗಿ ಪಡೆದುಕೊಳ್ಳುವುದು ಭ್ರಷ್ಟಾಚಾರ.  

ಈ ಭ್ರಷ್ಟಾಚಾರವನ್ನು ಹೋಗಲಾಡಿಸುವುದು ಅಷ್ಟೋಂದು ಸುಲಭದ ಮಾತಲ್ಲ. ಚುನಾವಣೆ ಪ್ರನಾಳಿಕೆಯಲ್ಲಿ ಭ್ರಷ್ಟಾಚಾರ ನಿಮರ್ೂಲನೆ ಮಾಡುತ್ತೇವೆ ಎಂದು ಹೇಳಿದಷ್ಟು ಸರಾಗವಂತೂ ಅಲ್ಲವೇ ಅಲ್ಲ. ಅದಕ್ಕೆ ಪೂರ್ವ ತಯಾರಿಯ ಜೊತೆ ಒಂದು ತಲೆಮಾರಿನವರ ಪರಿವರ್ತನೆ ಅವಶ್ಯವಾಗಿ ಬೇಕು. ನಾವೆಲ್ಲ ಚಿಕ್ಕಂದಿನಿಂದ ರೂಢಿಸಿಕೊಂಡು ಬಂದ ಹಲವು ವಿಚಾರವನ್ನು ಈಗ ಬದಲಾಯಿಸಿಕೊಳ್ಳುತ್ತೇವೆ ಎಂದರೂ ಹಲವಾರು ಬಾರಿ ಸಾಧ್ಯವಾಗದೇ ಹೋಗುವುದು ಗೊತ್ತಿದೆ. ಒಂದು ಚಾಕಲೇಟಿನ ಸಿಪ್ಪೆಯನ್ನು ಕಸದ ತೊಟ್ಟಿಗೆ ಹಾಕಬೇಕು ಎನ್ನುವದು ನಮಗೆ ಗೊತ್ತು. ತೊಟ್ಟಿ ಹತ್ತಿರ ಇದ್ದರೆ ಅದರಲ್ಲೆ ಬಿಸಾಡುತ್ತೇವೆ. ಆದರೆ ಸುತ್ತ ತೊಟ್ಟಿ ಕಾಣಸದಿದ್ದಾಗ ಹಳೆಯ ಚಾಳಿಯಂತೆ ಸುತ್ತ ಅತ್ತಿದ್ದ ಒಮ್ಮೆ ತೊಟ್ಟಿ ಇದೆಯೇ ನೋಡಿ ಎಲ್ಲರೂ ಅದೊಂದು ಮೂಲೆಯಲ್ಲಿ ಬಿಸಾಕಿದ್ದಾರಲ್ಲ ಎನ್ನುತ್ತ ನಾವು ಅಲ್ಲಿಯೇ ಒಗೆದು ಮುಂದೆ ನಡೆಯುತ್ತೇವೆ. ಆದರೆ ಈಗಿನ ಪುಟ್ಟಮಕ್ಕಳಿಗೆ ನಾವು ಆ ಶಿಸ್ತನ್ನು ಕಲಿಸಿದರೆ ಅದಕ್ಕೆ ಪೂರಕವಾದ ವಾತಾವರಣ ನಿಮರ್ಿಸಿದರೆ ಬದಲಾವಣೆ ಸಾಧ್ಯ. ಅದೇ ಚಾಕಲೇಟಿನ ಕಾಗದ ತೊಟ್ಟಿಯಲ್ಲೇ ಹಾಕಬೇಕು ಎಂದು ತಿಳಿಸಿ ಹೇಳವುದರ ಜೊತೆ ಪ್ರತೀ ಕಡೆಯಲ್ಲಿ ತೊಟ್ಟಿಯನ್ನು ಇಟ್ಟು ಅದರ ನಿರ್ವಹಣೆ ಮಾಡಿದಾಗ ಬೆಳೆದು ಬಂದ ಈ ಹವ್ಯಾಸ ದೊಡ್ಡವರಾದ ಮೇಲೂ ಹಾಗೆಯೇ ಮುಂದುವರೆಯುತ್ತದೆ. ಹಾಗಾಗಿ ಯಾವುದೇ ರೀತಿಯ ಬದಲಾವಣೆ ಎನ್ನುವದು ನಿರಂತರ ಪ್ರಯತ್ನದ ಫಲವಾಗುತ್ತದೆ. ಒಂದು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇವೆ ಎನ್ನುವದು ಸುಳ್ಳಿನ ಮಾತಾಗಿಬಿಡುತ್ತದೆ. ಅಲ್ಲದೇ ಜಗತ್ತಿನ ಎಲ್ಲಕಡೆ ಒಂದಲ್ಲ ಒಮದು ರೀತಿಯ ಭ್ರಷ್ಟಾಚಾರವಿದೆ. ಅದನ್ನು ಸಂಪೂರ್ಣ ತೊಡೆದು ಹಾಕಲು ಸಾಧ್ಯವಿಲ್ಲ. ಆದರೆ ಬ್ರಷ್ಟಾಚಾರ ನಡೆಯುವ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದಾಗಿದೆ. 

ನಾಳೆಯ ಮನುಕುಲದ ಭವಿಷ್ಯಕ್ಕೆ ಈ ಭ್ರಷ್ಟಾಚಾರ ಕೊಡಲಿ ಪೆಟ್ಟು ಬಿಳುವುದು ಈಗಾಗಲೇ ಸಾಕಷ್ಟು ಬಾರಿ ಸಾಬೀತಾಗಿದೆ. 'ತುತ್ತು ಅನ್ನ ತಿನ್ನುವುದು ಲೇಸು, ಬಟ್ಟಲು ಮೃಷ್ಟಾನ್ನ ಕಸಿದು ಉಣ್ಣುವುದು ಹೊಟ್ಟೆ ತೊಳೆಸಿ ವಾಂತಿಯಾಗುವುದು ಎನ್ನುವ ಮಾತು ನೆನಪಲ್ಲಿ ಇಟ್ಟುಕೊಂಡು ನಡೆದರೆ ನಾವು ಭ್ರಷ್ಟಾಚಾರದ ನಿಮರ್ೂಲನೆಗೆ ಕೈ ಜೋಡಿಸಿದಂತಾಗುವುದು