ಡಾರ್ಲಿಂಗ್ ಕೃಷ್ಣನ್ನ ಕೂಸುಮರಿ ಮಾಡಿದ ಅಮೃತಾಗೆ ಏನಾಯ್ತು?

ಬೆಂಗಳೂರು, ಜ 28 : ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಅಭಿನಯದ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದ್ದು, ಸ್ಯಾಂಡಲ್ ವುಡ್‍ ನಲ್ಲಿ ನಿಧಾನವಾಗಿ ನೆಲೆಯೂರುತ್ತಿರುವ ಅಮೃತಾ ಅಯ್ಯಂಗಾರ್ ಕೂಡ ವಿಶಿಷ್ಟ ಪಾತ್ರದಲ್ಲಿದ್ದಾರೆ.  

ಚಿತ್ರ ಬಿಡುಗಡೆ ಕುರಿತ ಸುದ್ದಿಗೋಷ್ಠಿಯಲ್ಲಿ ಚಿತ್ರೀಕರಣದ ಸಂದರ್ಭದ ಅನುಭವಗಳ ಕುರಿತು ಮೆಲುಕು ಹಾಕಿದ ಅಮೃತಾ,  “ನನ್ನ ಪಾತ್ರ ವಿಭಿನ್ನವಾಗಿರಬೇಕು ಅನ್ನೋ ಉದ್ದೇಶದಿಂದ ನಾಯಕ ನಟ ಕೃಷ್ಣ ಅವರನ್ನು ಕೂಸುಮರಿ ಮಾಡಲು ಸ್ವತಃ ಒಪ್ಕೊಂಡೆ ಆದರೆ ನಾನು ಸಿದ್ಧವಾಗೋ ಮೊದಲೇ ಬೆನ್ನ ಮೇಲೆ ಹಾರಿಬಿಡ್ತಿದ್ರು ಕೃಷ್ಣ” ಅಂತ ಹೇಳಿಕೊಂಡರು.  

ಈ ಸಂದರ್ಭದಲ್ಲಿ ನಿರ್ಮಾಪಕಿ ಹಾಗೂ ಚಿತ್ರದ ನಾಯಕಿ ಮಿಲನ ನಾಗರಾಜ್‍, “ಮೊದಲೇ ಬಜೆಟ್ ಕೊರತೆಯಿದೆ  ಅಮೃತಾ ಬೆನ್ನಿಗೆ ಏನಾದರೂ ಆದ್ರೆ ಮಾಡೋದೇನು?” ಅಂತ್ರಿದ್ರು   ಅಲ್ಲದೆ ಕೃಷ್ಣ ಅವರನ್ನು ಕೂಸುಮರಿ ಮಾಡಿದ ಮೇಲೆ 2 ದಿನ ಬೆನ್ನು ತುಂಬಾ ನೋಯ್ತಿತ್ತು” ಅಂತ ಅಮೃತಾ ತಿಳಿಸಿದ್ರು 

ಲವ್ ಮಾಕ್‍ಟೇಲ್‍ ನಲ್ಲಿ ಕಾಲೇಜು ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ  ಇಂದಿನ ಪೀಳಿಗೆಯ ಯುವತಿಯರನ್ನು ಈ ಪಾತ್ರ ಖಂಡಿತ ಆಕರ್ಷಿಸಲಿದೆ ಅಂತ ಅಮೃತಾ ಮಾಹಿತಿ ನೀಡಿದರು.