ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
Welcome program for first year students of PU
ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ತಾಳಿಕೋಟಿ 14: ಸಮೀಪದ ಬಳಗಾನೂರ ಕ್ರಾಸ್ ನೀಲಗಂಗಾ ನಗರದಲ್ಲಿರುವ ಕುವೆಂಪು ಗ್ರಾಮೀಣಭಿರುದ್ಧಿ ಸಂಘ ಅಡಿಯಲ್ಲಿ ನಡೆಯುತ್ತಿರುವ ಎಮ್ ಎಮ್ ಎಸ್ ಎ ಪಿಯು ಕಾಲೇಜ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ ನಿ ಪ್ರ ವೀರಸಿದ್ಧ ಮಹಾಸ್ವಾಮಿಗಳು ನಂದಿಮಠ ವಡವಡಗಿ, ಅಧ್ಯಕ್ಷತೆ ಬಿ ಏನ್ ನಯ್ಕೋಡಿ ಸಂಸ್ಥಾಪಕ ಅಧ್ಯಕ್ಷರು ಕುವೆಂಪು ಗ್ರಾಮೀಣಾಭಿರುದ್ದಿ ಸಂಘ ಮುಖ್ಯ ಅತಿಥಿಯಾಗಿ ಡಾ. ಎಸ್ ಕೆ ಹರ್ನಾಳ ಪ್ರಚಾರ್ಯರು ಎಮ್ ಜಿ ಎಮ್ ಕೆ ಪಿ ಯು ಕಾಲೇಜ್ ಮುದ್ದೇಬಿಹಾಳ ವಹಿಸಿದ್ದರು, ಅತಿಥಿಗಳಾಗಿ ದೈಹಿಕ ಉಪನ್ಯಾಸಕರಾದ ಶ್ರೀ ತಾರಣಾಳ ಗುರುಗಳು, ಮುಖ್ಯ ಉಪಸ್ಥಿತಿಯಲ್ಲಿ ಕೆ ಎ ಹಿರೇಗೌಡರ್ ಮುಖ್ಯಗುರುಮಾತೆಯರು ಹೆಚ್ ಪಿ ಎಸ್ ಚೋಕಾವಿ, ಹಾಗೂ ಕುಮಾರಿ ಜಯಶ್ರೀ ಎಂ ಕಾಗಿಯವರ ಆಡಳಿತಾದೀಕಾರಿಗಳು, ಕುಮಾರಿ ಸವಿತಾ ಎಂ ಕಾಗಿಯವರ ಪ್ರಚಾರ್ಯರು ಹಾಗೂ ಮನು ಬಿ ನಯ್ಕೋಡಿ ಕಾರ್ಯದರ್ಶಿಗಳು ಎಮ್ ಎಮ್ ಎಸ್ ಎ ಪಿಯು ಕಾಲೇಜ್ ಹಾಗೂ ಬೋಧಕ ಭೋದಕೇತರ ಸಿಬ್ಬಂದಿ ವರ್ಗದವರು ಮತ್ತು ಮುದ್ದು ವಿದ್ಯಾರ್ಥಿ/ ನಿಯರು ಭಾಗವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪೂಜ್ಯರು ಹಾಗೂ ಎಲ್ಲಾ ಗಣ್ಯ ಮಹನೀಯರು ಸಸಿಗೆ ನೀರೇರೆಯುವ ಮೂಲಕ ಕಾರ್ಯಕ್ರಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲೆ ಆಸಿನರಾದ ಪೂಜ್ಯರಿಗೆ ಗಣ್ಯ ಮಹನೀಯರಿಗೆ ಸ್ವಾಗತ ಮತ್ತು ಗೌರವ ಶ್ರೀರಕ್ಷೆ ನೀಡುವ ಮೂಲಕ ಪ್ರಚಾರ್ಯರಾದ ಕುಮಾರಿ ಸವಿತಾ ಎಂ ಕಾಗಿಯವರ ಪ್ರಸ್ತಾವಿಕ ಭಾಷಣ ಮಾಡಿದರು. ದ್ವಿತೀಯ ವರ್ಷದ ವಿದ್ಯಾರ್ಥಿ/ ನಿಯರು ಪ್ರಥಮ ವರ್ಷದ ವಿದ್ಯಾರ್ಥಿ/ ನಿಯರಿಗೆ ಸವಿ ನೆನಪಿನ ಕಾಣಿಕೆ ನೀಡುವ ಮೂಲಕ ಸಡಗರ ಸಂಭ್ರಮದಿಂದ ಸ್ವಾಗತ ಕೋರಿದರು.ಪ್ರಥಮ ವರ್ಷದ ವಿದ್ಯಾರ್ಥಿ/ನಿಯರು ಸಂತೋಷದ ನುಡಿಗಳನ್ನು ಹರ್ಷದೊಂದಿಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾದ ಡಾ. ಎಸ್ ಕೆ ಹರ್ನಾಳರವರು ಸ್ವಾಗತ ಎಂದರೆ ಮಕ್ಕಳ ವಿದ್ಯಾರ್ಜನೆಯ ಯಶಸ್ಸಿನ ಹಾದಿ ಎಂದು ಹೇಳಿ ಮಕ್ಕಳ ಮನ ಮುಟ್ಟುವಂತೆ ಜಾನಪದ ಗಾಯನದೊಂದಿಗೆ ಭಾಷಣಕ್ಕೆ ವಿರಾಮ ನೀಡಿದರು. ಕಾರ್ಯದರ್ಶಿಗಳಾದ ಮನು ಬಿ ನಾಯ್ಕೋಡಿಯವರು ಮಕ್ಕಳ ಯಶಸ್ಸಿಗೆ ಶಿಸ್ತು ಮುಖ್ಯ ಎಂದು ತಿಳಿಸಿದರು. ಶ್ರೀಗಳ ಆಶೀರ್ವಾಚನದೊಂದಿಗೆ ಮಕ್ಕಳ ಸಂಸ್ಕೃತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಕೃತ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಭಾಗವಹಿಸಿ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪಿಯುಸಿ ಯ ವಿದ್ಯಾರ್ಥಿಗಳಾದ ಭೀಮನಗೌಡ. ಪ್ರಾರ್ಥನೆ ಸಹನಾ ಮತ್ತು ಸಂಜನಾ. ಸ್ವಾಗತ ಸಾನಿಕಾ, ಅಂಕಿತಾ,ಭಾಗ್ಯ. ರೋಹಿತ್ ತಿವಾರಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 