ಸಾರಿಗೆ ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡುತ್ತೇವೆ - ಕರವೇ ಉಗ್ರ ಎಚ್ಚರಿಕೆ

ಸಾರಿಗೆ ಸಮಸ್ಯೆ ಬಗೆಹರಿಯದಿದ್ದರೆ  ರಾಜ್ಯ ಹೆದ್ದಾರಿಯನ್ನು ಬಂದ್ ಮಾಡುತ್ತೇವೆ -  ಕರವೇ ಉಗ್ರ ಎಚ್ಚರಿಕೆ We will close the state highway if the transport problem is not resolved - Karave warns fiercely

ಶಿರಹಟ್ಟಿ 16 : ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗದಗ ನಗರಕ್ಕೆ ಹೋಗುತ್ತಾರೆ. ಪ್ರತಿ ವರ್ಷ ಸಾರಿಗೆ ಇಲಾಖೆಯು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಕೊಡುತ್ತಾ ಬಂದಿದೆ, ಆದರೆ ಈ ವರ್ಷದ ಆರಂಭದಲ್ಲಿ ಸಾರಿಗೆ ಅಧಿಕಾರಿಗಳು ಗಡಿ ಭಾಗದ ಗ್ರಾಮಗಳಲ್ಲಿನ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವುದಿಲ್ಲ ಎಂದು ಹೇಳಿದೆ.ಹೌದು..... ಮಂಗಳವಾರ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಶಿರಹಟ್ಟಿ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಎದುರಾಗಿರುವ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ  ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಗಡಿ ಗ್ರಾಮಗಳಾದ ಕೋಗನೂರು, ನಾಗರಮಡವು, ಅಂಕಲಿ ಹಾಗೂ ಇನ್ನುಳಿದ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಂದಿರುವ ಸಮಸ್ಯೆಯನ್ನು 7 ದಿನಗಳಲ್ಲಿ ಬಗೆಹರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಶಿವು ಮಠದ, ಜಿಲ್ಲಾ ಉಪಾಧ್ಯಕ್ಷರು ಹಾಗೂ ವಕೀಲರಾದ ಶರಣಪ್ಪ ಪುರತಗಿರಿ, ಪ್ರಮುಖರಾದ ರಾಕೇಶ್ ಬೂದಿಹಾಳ, ರಾಹುಲ್ ಮಡಿವಾಳರ, ಕಿರಣ ಚನ್ನೂರು, ನಾಗರಾಜ್ ಬೀರಬ್ಬಿ, ಸಂಜೀವ ಚೂರಿ, ಮಣಿಕಂಠ, ದುರಗಪ್ಪ ಸೇರಿದಂತೆ ಕರವೇ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.