ಹಿಂದಣ ಹೆಜ್ಜೆಯನರಿತು ಮುಂದಣ ಹೆಜ್ಜೆಯನಿಡಬೇಕು : ಡಾ. ಸುಧಾ ಕೌಜಗೇರಿ
We should take a step forward instead of taking a step back: Dr. Sudha Kaujageri
ಲೋಕದರ್ಶನ ವರದಿ
ಹಿಂದಣ ಹೆಜ್ಜೆಯನರಿತು ಮುಂದಣ ಹೆಜ್ಜೆಯನಿಡಬೇಕು : ಡಾ. ಸುಧಾ ಕೌಜಗೇರಿ
ಹುಲಕೋಟಿ 2: ಕರ್ನಾಟಕ ರಾಜ್ಯ ರೂಪುಗೊಳ್ಳಲು ಹಲವು ಹಿರಿಯರು ಹೋರಾಟ ನಡೆಸಿದ್ದು, ಕನ್ನಡ ಮನಸ್ಸುಗಳು ಅವರ ಶ್ರಮವನ್ನು ಅರಿತು ನಾಡು-ನುಡಿಯ ಏಳ್ಗೆಗಾಗಿ ಮುಂದಣ ಹೆಜ್ಜೆಯನಿಡಬೇಕೆಂದು ಪ್ರೊ. ಸುಧಾ ಕೌಜಗೇರಿ ಹೇಳಿದರು. ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕನ್ನಡ-ಕರ್ನಾಟಕದ ಏಕೀಕರಣದಲ್ಲಿ ಭಾಗವಹಿಸಿ ಕನ್ನಡ ಸಂಸ್ಕೃತಿ ರಕ್ಷಣೆಗೆ ಶ್ರಮಿಸಿದ ಮಹನೀಯರ ಜೀವನ ಮೌಲ್ಯಗಳು, ಆದರ್ಶಗಳು ಮತ್ತು ಸಂದೇಶಗಳು ಸದಾಕಾಲ ಸ್ಮರಣೀಯವಾಗಿದ್ದು, ವಿದ್ಯಾರ್ಥಿಗಳು ಅವರನ್ನು ಓದಿಕೊಂಡು ಅಭಿಮಾನ ಬೆಳೆಸಿಕೊಳ್ಳಬೇಕೆಂದರು. ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್. ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ. ಅಪ್ಪಣ್ಣ ಹಂಜೆ ಅವರು ಇಂದಿನ ಗದಗ ಜಿಲ್ಲೆಯ ಪ್ರದೇಶವು ಅಂತರ್ಗತವಾಗಿದ್ದ ಬೆಳ್ವೊಲ, ಪುಲಿಗೆರೆ ನಾಡುಗಳ ಇತಿಹಾಸ, ಸಂಸ್ಕೃತಿ, ಸಾಹಿತ್ಯದ ಹಿರಿಮೆಯನ್ನು ಅವಲೋಕಿಸಿದರೆ, ಅಂದು ತಿರುಳ್ಗನ್ನಡನಾಡು ಎಂದು ಕರೆಯಲ್ಪಡುತ್ತಿದ್ದ ಶುದ್ಧಕನ್ನಡ ಪ್ರದೇಶದಲ್ಲಿಯೇ ಈ ಜಿಲ್ಲೆಯ ಬಹುತೇಕ ಪ್ರದೇಶ ಒಳಗೊಂಡಿದ್ದಿತು. ಇದು ಕನ್ನಡ-ಕರ್ನಾಟಕದ ಅಸ್ಮಿತೆಯ ಸಾಂಸ್ಕೃತಿಕ ಕೇಂದ್ರವಾಗಿದ್ದು, ಏಕೀಕರಣ ಚಳವಳಿಗೆ ಇಲ್ಲಿಯ ಕವಿಗಳು, ನಾಯಕರು, ಜನರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಸಾಂಸ್ಕೃತಿಕ ಘಟಕದ ಸಂಚಾಲಕ ರಮೇಶ ಹುಲಕುಂದ, ಐಕ್ಯುಎಸಿ ಸಹಸಂಚಾಲಕ ಡಾ. ಮಂಜುನಾಥ ತ್ಯಾಲಗಡಿ ಮತ್ತು ವಿದ್ಯಾರ್ಥಿಗಳು ಕರ್ನಾಟಕ ಏಕೀಕರಣದ ಕುರಿತು ಮಾತನಾಡಿದರು. ಕ್ರೀಡಾ ವಿಭಾಗದ ಸಂಚಾಲಕ ಮಹಾಂತೇಶ ವಂದನಾರೆ್ನಗೈದರು. ಉಮೇಶ ಹುಯಿಲಗೋಳ ಅವರಿಂದ ಭುವನೇಶ್ವರಿದೇವಿ ಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 