ನಾವೆಲ್ಲರೂ ಒಂದು ಎಂಬ ಸಮಷ್ಠಿ ಭಾವದಿಂದ ಬದುಕಬೇಕು...
We should all live with a collective sense of oneness...
ಲೋಕದರ್ಶನ ವರದಿ
ನಾವೆಲ್ಲರೂ ಒಂದು ಎಂಬ ಸಮಷ್ಠಿ ಭಾವದಿಂದ ಬದುಕಬೇಕು...
ವಿಜಯಪುರ 12: ದೇವಸ್ಥಾನಗಳಲ್ಲಿ ಜಾತ್ರೋತ್ಸವ, ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ನಮ್ಮ ಜಾನಪದ ಸೊಗಡು, ಸಾಂಸ್ಕೃತಿಕ ಪರಿಸರವನ್ನು ಬೆಳೆಸಬೇಕು. ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಪರಸ್ಪರ ಸಹಕಾರ, ಸಹಬಾಳ್ವೆ, ಸೌಹಾರ್ಧತೆ, ಸಾಮರಸ್ಯತೆ, ಭಾವೈಕ್ಯತೆಯಂತಹ ಗುಣಗಳನ್ನು ಬೆಳೆಸಿಕೊಂಡು ನಾವೆಲ್ಲರೂ ಒಂದು ಎಂಬ ಸಮಷ್ಠಿ ಭಾವದಿಂದ ಬದುಕಬೇಕು ಎಂದು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಎಲ್.ಇಂಗಳೇಶ್ವರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ನವರಸಪುರದ ಸೇನಾ ನಗರದ ಹವಾಲ್ದಾರ ಕಾಲನಿಯ ಲಕ್ಷ್ಮೀ ದೇವಸ್ಥಾನದಲ್ಲಿ ರಂದು ನಡೆದ “ಧರ್ಮ ಸಭೆ ಮತ್ತು ಬೆಳದಿಂಗಳ ಬೆಳಕಿನೆಡೆಗೆ ಕಾರ್ಯಕ್ರಮ” ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತಾಣಗಳಾಗಿರುವ ದೇವಸ್ಥಾನ, ದೈವತ್ವ, ಭಕ್ತಿ-ಭಾವದ ಪೂಜೆ ಮತ್ತು ದೈವಶಕ್ತಿಯ ಆರಾಧನೆ ಮಾಡುವದರ ಮೂಲಕ ಬದುಕಿನ ಜಂಜಾಟದಿಂದ ಹೊರಬಂದು ಸುಖ-ಶಾಂತಿ ಮತ್ತು ನೆಮ್ಮದಿ ಪಡೆಯಬೇಕು. ನಮ್ಮ ಸಂಸ್ಕೃತಿ-ಸಂಪ್ರದಾಯ ಮತ್ತು ಪರಂಪರೆಯನ್ನು ನಾವೆಲ್ಲರೂ ದೈನಂದಿನವಾಗಿ ಜೀವನದಲ್ಲಿ ಅಳವಡಿಸಿಕೊಂಡು ಯುವ ಜನಾಂಗಕ್ಕೆ ಮಾದರಿಯಾಗಬೇಕು. ಈ ಲಕ್ಷ್ಮೀ ದೇವಸ್ಥಾನದಲ್ಲಿ ಬೆಳದಿಂಗಳ ಬೆಳಕಿನೆಡೆಗೆ ಕಾರ್ಯಕ್ರಮದಡಿಯಲ್ಲಿ ಸತ್ಸಂಗ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಚನ ಸಾಹಿತ್ಯ, ಜನಪದ ಸಾಹಿತ್ಯ, ಮಹಿಳಾ ಸಬಲೀಕರಣ ಮತ್ತು ಅಧ್ಯಾತ್ಮಿಕ ವಿಚಾರಧಾರೆಯಂತಹ ವಿಷಯಗಳ ಮೇಲೆ ಉಪನ್ಯಾಸ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಉತ್ತಮ ಬೆಳವಣಿಗೆ ಎಂದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಆರ್.ಟಿ.ಉತ್ತರಕರ, ದೇವಸ್ಥಾನದ ಅಧ್ಯಕ್ಷೆ ಶಾಂತಾ ಕಪಾಳೆ, ಉಪಾಧ್ಯಕ್ಷೆ ಶಕುಂತಲಾ ಅಂಕಲಗಿ, ಕಾರ್ಯದರ್ಶಿ ಶೋಭಾ ಚವ್ಹಾಣ ಇನ್ನಿತರರು ವೇದಿಕೆಯ ಮೇಲಿದ್ದರು.
ಇದೇ ಸಂದರ್ಭದಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿ ಪಡೆದ ಹಿಟ್ಟಿನಹಳ್ಳಿಯ ಕೃಷಿ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಡಾ. ರಾಜಕುಮಾರ ಜೊಲ್ಲೆ ಇವರನ್ನು ಸನ್ಮಾನಿಸಲಾಯಿತು.
ಡಾ. ರಾಜಕುಮಾರ ಜೊಲ್ಲೆ ಹಾಗೂ ಆರ್.ಕೆ.ಉತ್ತರಕರ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ವಿಠ್ಠಲ ಜಗತಾಪ, ಭರಮಣ್ಣ ಕಡಕೋಳ, ಪ್ರೊ. ಬಸವರಾಜ ಕುಂಬಾರ, ಗುರುಬಸಯ್ಯ ಹಿರೇಮಠ, ರಾಜಶೇಖರ ಉಮರಾಣಿ, ನಿಂಗಪ್ಪ ನಿಂಬಾಳಕರ, ಎಸ್.ಎಸ್.ಓತಿಹಾಳ, ಸಾಬು ಅಗ್ರಾಣಿ, ಪ್ರಫುಲ ನಿಂಬಾಳಕರ, ಸಂಗೀತಾ ಕಟ್ಟಿಮನಿ, ಸುನಂದಾ ಪತ್ತಾರ, ರೇಣುಕಾ ಹಡಪದ, ಜ್ಯೋತಿ ಜೊಲ್ಲೆ, ಇನ್ನಿತರರು ಸಹ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನವರಸಪುರ ವಿವಿಧ ಬಡಾವಣೆಗಳ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ನೂರಾರು ಸದ್ಭಕ್ತರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 