ನಾವಾಡಿರುವ ಮಾತುಗಳ ಬಗ್ಗೆ ಯಾವುದೇ ವಿಷಾದವಿಲ್ಲ: ಕಾಡಸಿದ್ದೇಶ್ವರ ಶ್ರೀ

ನಾವಾಡಿರುವ ಮಾತುಗಳ ಬಗ್ಗೆ ಯಾವುದೇ ವಿಷಾದವಿಲ್ಲ: ಕಾಡಸಿದ್ದೇಶ್ವರ ಶ್ರೀ We have no regrets about the words we have spoken: Kadasiddeshwara Sri

ನಾವಾಡಿರುವ ಮಾತುಗಳ ಬಗ್ಗೆ ಯಾವುದೇ ವಿಷಾದವಿಲ್ಲ: ಕಾಡಸಿದ್ದೇಶ್ವರ ಶ್ರೀ 

ಮಾಂಜರಿ, 19 : ನಾವಾಡಿರುವ ಮಾತುಗಳ ಬಗ್ಗೆ ಯಾವುದೇ ವಿಷಾದವಿಲ್ಲ ಈಗ ತಮ್ಮ ವಿರುದ್ದ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕರ್ನಾಟಕ ಸರ್ಕಾರದ ಪಾತ್ರವಿದೆ ಎಂದು ಕನೇರಿ - ಸಿದ್ದಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ. 

ಕೊಲ್ಲಾಪುರದ ಕನೇರಿ ಮಠದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಜವಾದ ಭಾಷೆಯಲ್ಲೇ ಮಾತನಾಡಿದ್ದೇನೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇರೆ ಬೇರೆ ರೀತಿ ಭಾಷೆ ಬಳಕೆಯಂತೆ ಇಂತಹ ಮಾತುಗಳು ನಮಗೆ ಸ್ವಾಭಾವಿಕ. ಈಗ ನಮ್ಮನ್ನು ಟೀಕಿಸುತ್ತಿರುವವರು ಅದನ್ನು ಅರ್ಥ ಮಾಡಿಕೊಂಡಿಲ್ಲ. ಶ್ರೀಗಳು ಹಾಗೂ ಸಾಮಾನ್ಯರಿಗೆ ಇಂತಹ ಭಾಷೆ ಕಾಮನ್ ಎಂದರು. 

ನಮ್ಮ ಮಾತಿನ ಹಿಂದಿನ ಕಳಕಳಿ ಬಿಟ್ಟು ಅಪಾರ್ಥದ ಹಿಂದೆ ಬೆನ್ನತ್ತಿದ್ದಾರೆ. ಸಿಎಂ ಕೃಪಾಪೋಷಿತ ಲಿಂಗಾಯತ ಮಠಾಧೀಶ 

ಕಲಾವಿದರ ಒಕ್ಕೂಟಕ್ಕೆ ಹಾಗೂ ಬಸವ ಸಂಸ್ಕೃತಿ ನಾಟಕ ಮಾಡುವ ಮಠಾಧೀಶರಿಗೆ ಈ ಮಾತನ್ನು ಹೇಳಿದ್ದೇನೆ. ಅದರಲ್ಲೇನೂ ಮುಚ್ಚುಮರೆಯಿಲ್ಲ. ನಮ್ಮ ವಿರುದ್ಧ ಪ್ರತಿಭಟನೆ ಮಾಡುವರು 15ಕ್ಕಿಂತ ಹೆಚ್ಚಿನ ಜನ ಇಲ್ಲ. ನಮ್ಮ ಮಾತು ಸರಿಯಿಲ್ಲ ಎಂದರೆ ಎಲ್ಲರೂ ಪ್ರತಿಭಟನೆ ಮಾಡಬೇಕಿತ್ತು. ಬಹಳಷ್ಟು ಜನ ಇದಕ್ಕೆ ಸೊಪ್ಪು ಹಾಕಬಾರದು ಎಂದು ಸುಮ್ಮನೆ ಕುಳಿತಿದ್ದಾರೆ. ನಮ್ಮ ವಿರುದ್ದದ ಪ್ರತಿಭಟನೆ ಹಿಂದೆ ಸರಕಾರದೆ ಪಾತ್ರವಿದೆ ಎಂದು ಸಚಿವ ಎಂ.ಬಿ. ಪಾಟೀಲ ಹಾಗೂ ಮುಖ್ಯಮಂತ್ರಿಗಳ ವಿರುದ್ಧಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 

ಸಿಎಂ ಹಾಗೂ ಸಚಿವ ಎಂ.ಬಿ. ಪಾಟೀಲ ಈ ರೀತಿ ಮಾಡುವುದು ಸರಿಯಲ್ಲ. ವೀರಶೈವ ಲಿಂಗಾಯತ ಸಮಾಜಕ್ಕೆ ದೊಡ್ಡ ಪೆಟ್ಟು ಕೊಡಲು ಹೊರಟಿದ್ದರು. ಆದರೆ ಆ ಪೆಟ್ಟು ಈಗ ಅವರಿಗೇ ಬಿದ್ದಿದೆ. ಇನ್ನು ಎಂ.ಬಿ. ಪಾಟೀಲಗೆ ವಿನಾಶ ಕಾಲಕ್ಕೆ ದುರ್ಬುದ್ದಿಬಂದಿದೆ. 

ಅವರಿಗೊಬ್ಬರು ಸಹಾಯಕರಿದ್ದಾರೆ. ಸಚಿವರನ್ನೇ ಮುಳುಗಿಸುವಷ್ಟು ಬೆಳೆದಿದ್ದಾರೆ ಎಂದು ಟೀಕಿಸಿದರು. 

ನಮ್ಮಂತಹ ಬಸವತತ್ವದವರು ಯಾರೂ ಇಲ್ಲ. ಈಗಿರುವ ನಾಟಕ ಕಂಪನಿ ಸ್ವಾಮೀಜಿಗಳಲ್ಲಿ ಬಸವ ತತ್ವವಿಲ್ಲ. ಬಸವಣ್ಣವರ ವಚನ ಯಾರೂ ಪಾಲನೆ ಮಾಡುವುದಿಲ್ಲ.ನಾನು ದಾಸೋಹ ಮಾಡುತ್ತೇನೆ. ಇವರ ಮಠಗಳಲ್ಲಿ ಹೋದರೆ ಒಂದು ತುತ್ತು ಅನ್ನ ಸಿಗಲ್ಲ ಸಮಾನತೆ ಎಂಬುದು ಆ ಮಠಾಧೀಶರಲ್ಲಿ ಯಾರಲ್ಲಿಯೂ ಇಲ್ಲ. ಇವರೆಲ್ಲ ಬಸವದ್ರೋಹಿಗಳು. ಬಸವ ತತ್ವಗಳನ್ನು ಕೇವಲ ಬಾಯಿಂದ ಹೇಳಿ ಬಸವಣ್ಣವರನ್ನು ಹತ್ಯೆ ಮಾಡುವಂಥ ವರಿವರು. ಬಸವಣ್ಣವರ ಹತ್ಯೆಯನ್ನು ಯಾರಾದರೂ ಮಾಡಿರಬಹುದು. ಆದರೆ ಇವರು ನಿತ್ಯ ಅವರ ತತ್ವ ಹೇಳಿ ಹತ್ಯೆ ಮಾಡುತ್ತಿದ್ದಾರೆ ಒಬ್ಬರು ಎಂದು ಹರಿಹಾಯ್ದರು. ನಾನು ಹಿಂದೂ ಲಿಂಗಾಯತ ಮಠಾಧೀಶ. ಮೊದಲು ನಾನು ಹಿಂದೂ,ನಂತರ ಲಿಂಗಾಯತ. ನಾನು ಹಿಂದುತ್ವವಾದಿಯಾದ ಕಾರಣ ಆರೆಸ್ಸೆಸ್ ಪರ ಒಲವಿದೆ. ಆರೆಸ್ಸೆಸ್ ಇದೆ ಎನ್ನುವ ಕಾರಣದಿಂದ ದೇಶ ಚೆನಾಗಿ ಕೆಲಸ ಮಾಡುತ್ತಿದೆ. ಒಳ್ಳೆಯದರ ಪರ ಮಾತನಾಡದೇ ಭಾಗವಾನರ ಪರ ಮಾತನಾಡೋಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದ ಅವರು, ನಾನು ಒಬ್ಬ ಒಳ್ಳೆಯ ಹಿಂದುತ್ವವಾದಿ, ಒಳ್ಳೆಯ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ದೇಶ ಹಾಳಾಗುವುದು ಮೌನವಾಗಿರುವ ಸಜ್ಜನರಿಂದ ನನ್ನ ಹೇಳಿಕೆಗಳ ವಿರುದ್ಧ ಹೋರಾಟ ಮಾಡುವವರು ಬಸವ ತತ್ವದವರಲ್ಲ ಇವರು ಯಾರೂ ಬಸವಣ್ಣನವರ ಶಿಷ್ಯರಲ್ಲ. ಸಣ್ಣ ಸಣ್ಣ ವಿಷಯಗಳಿಗೆ ಬೆಲೆ ಕೊಡಲ್ಲ ಎಂದರು.