ವಿಕಲಚೇತನರ ಸೇವೆಯಲ್ಲಿ 40ವರ್ಷಗಳ ಕಾಲ ಆತ್ಮ ಸಂತೋಷ ಕಂಡಿದ್ದೇವೆ : ಎಚ್‌. ಆರ್‌. ಶಿವಕುಮಾರ

ವಿಕಲಚೇತನರ ಸೇವೆಯಲ್ಲಿ 40ವರ್ಷಗಳ ಕಾಲ ಆತ್ಮ ಸಂತೋಷ ಕಂಡಿದ್ದೇವೆ : ಎಚ್‌. ಆರ್‌. ಶಿವಕುಮಾರ  We have found personal fulfillment in serving the differently-abled for 40 years: H. R. Shivakumar

ರಾಣೆಬೆನ್ನೂರು 19: ಅಂಗವೈಕಲತೆ ಶಾಪವೂ ಅಲ್ಲ,ಪಾಪವು ಅಲ್ಲ ಇವೆಲ್ಲವೂ ಜೈವಿಕ ವ್ಯತ್ಯಾಸ, ವಿಪರ್ಯಾಸ ಅಷ್ಟೇ. ಸಮಾಜದಲ್ಲಿ ವಿಕಲಚೇತನರು ಸಹ ಸಮಾನತೆಯಿಂದ ತಮ್ಮ ಜೀವನ ಬದುಕನ್ನು ಸಾಗಿಸಬೇಕು ಎನ್ನುವ ಏಕೈಕ ಉದ್ದೇಶವನ್ನು ತಮ್ಮ ಸಂಸ್ಥೆ ಹೊಂದಿದೆ ಎಂದು ಸೇವಾ ಅಂದರ ಸಂಸ್ಥೆಯ ಪ್ರಾಯೋಜನಾಧಿಕಾರಿ ಎಚ್‌. ಆರ್ ಶಿವಕುಮಾರ ಹೇಳಿದರು.  ಅವರು ಇತ್ತೀಚೆಗೆ ಶ್ರೀ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯ ಶಕ್ತಿ ಸದನ ಕೇಂದ್ರ ಸಭಾಭವನದಲ್ಲಿ ಆಯೋಜಿಸಿದ್ದ ಮಹಿಳಾ ಜಾಗೃತಿ ಹಾಗೂ ಪಠ್ಯಪುಸ್ತಕ ಲೇಖನ ಸಾಮಗ್ರಿಗಳ ವಿಚಾರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

1980 ರಲ್ಲಿ ಅಂದು ಜನಪದ ಕಾಳಜಿ ಹೊತ್ತು ಆಡಳಿತ ಮಂಡಳಿ ಸದಸ್ಯರ ಕೆಲವು ಜನರ ಸಹಾಯ ದಿಂದ ಆರಂಭವಾದ ಈ ಸಂಸ್ಥೆ ವಿಕಲಚೇತನರ ಸೇವೆಯಲ್ಲಿ ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸುತ್ತಲಿದೆ ಎಂದು ವಿವರಿಸಿದರು. ಆರಂಭಿಕ ಹತ್ತಾರು ವರ್ಷಗಳ ಕಾಲ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿ ಇದೀಗ ಒಂದು ಸುವ್ಯಸ್ಥೆಯಲ್ಲಿ ಸಾಗುತ್ತಿದೆ. ಎಂದು ಸಂಸ್ಥೆ ನಡೆದುಕೊಂಡು ಬಂದ ದಾರಿ ಮತ್ತು ಸಾಧಕ ಬಾದಕ ವಿವರಿಸಿದ ಅವರು, ಈಗಿರುವ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಇದೆ. ನಗರಸಭೆ ಸಂಸ್ಥೆಗೆ 6. ಗುಂಟೆ ಜಾಗೆ ನಗರ ವ್ಯಾಪ್ತಿಯಲ್ಲಿ ನೀಡಿದೆ. ಅದರ ಕಟ್ಟಡ ಕಾರ್ಯವು ಶೀಘ್ರದಲ್ಲಿಯೇ ನೆರವೇರಿಸುವ ಸಂಕಲ್ಪ ಹೊಂದಲಾಗಿದೆ. ಕ್ರಿಯಾಯೋಜನೆ ರೂಪಿಸಿದೆ. ಕಟ್ಟಡ ಪರಿಪೂರ್ಣತೆಗೆ ಸಾರ್ವಜನಿಕರ ಸಹಾಯ, ಸಹಕಾರ ಅಗತ್ಯವಿದ್ದು, ಕಟ್ಟಡ ಪರಿಪೂರ್ಣತೆಗೆ ಮುಂದಾಗಬೇಕೆಂದು ಶಿವಕುಮಾರ ಅವರು, ವಿನಮ್ರ ಮನವಿ ಮಾಡಿದರು.  

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಆಡಿಯೋ ಲಾಜಿಸ್ಟ್‌ ಶ್ರವಣ ನೂನ್ಯತೆ ಮತ್ತು ಮಕ್ಕಳು ಅನುಭವಿಸುತ್ತಿರುವ ತೊಂದರೆಗಳು ಮತ್ತು ಪರಿಹಾರ ಕುರಿತು ಮಾತನಾಡಿದ ಅವರು, ವಿಕಲಚೇತನರಿಗೆ ಯಾವುದೇ ರೀತಿಯ ಕಿರುಕುಳ ಅಥವಾ ಶೋಷಣೆ ಸಲ್ಲದು. ಅನುಕಂಪ ಅಷ್ಟೇ ನೀಡಿದರೆ ಸಾಲದು ಅವರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಲು ಇಂತಹ ಸೇವಾ ಸಾಮಾಜಿಕ ಬದ್ಧತೆ ಹೊಂದಿರುವ ಸಂಸ್ಥೆಗಳ ಅಗತ್ಯತೆ ತುಂಬಾ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಣ ಇಲಾಖೆಯ ಪ್ರಭಾಕರ್ ಚಿಂದಿ, ಜೈನ್ ಸಾಪಟ್ ಅಧ್ಯಕ್ಷ ತುಳಸಿ ರಾಮ್ ಜಹಾಂಗೀರ್, ಜೈ ಹಿಂದ್ ರಾಜ್ ಮೆಹುದು, ಮನೀಶ್ ಮೆಹತಾ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಸಂಸ್ಥೆಗೆ ನಿರಂತರ ಸಹಾಯ ಸಹಕಾರ ನೀಡುವುದರ ಮೂಲಕ ಬೆಳವಣಿಗೆ ಕಾರಣೀಭೂತರಾದ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಪ್ರೀತಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಶಾರದಾ ಕನದೋಡ ಸ್ವಾಗತಿಸಿ, ನೇತ್ರಾವತಿ ಮಗ್ಗದ ನಿರೂಪಿಸಿ ಮುಖ್ಯೋಪಾಧ್ಯಾಯ ಶಿವರಾಜ ಗಂಗಣ್ಣನವರ ವಂದಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಗಮನ ಸೆಳೆದವು.