ಏಕಾಗ್ರತೆಯಿಂದ ಓದಿದರೆ ಮಾತ್ರ ನಾವು ಏನಾದರೂ ಸಾಧನೆ ಮಾಡಲು ಸಾಧ್ಯ

ಏಕಾಗ್ರತೆಯಿಂದ ಓದಿದರೆ ಮಾತ್ರ ನಾವು ಏನಾದರೂ ಸಾಧನೆ ಮಾಡಲು ಸಾಧ್ಯ  We can achieve anything only if we study with concentration

ವಿಜಯಪುರ  12 : ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್   ಹಳೆಯ ವಿದ್ಯಾರ್ಥಿ  ಶಾನವಾಜ್  ಜಮಾದಾರ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರಿಂದ ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು.ಶಾನವಾಜ್  ಜಮಾದಾರ ಮಾತನಾಡಿ, ಸಿಎ ಪರೀಕ್ಷೆಯಲ್ಲಿ ನಾನು ಉತ್ತೀರ್ಣರಾಗಲು ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕರ ಪಾಠ, ಮಾರ್ಗದರ್ಶನ ಕಾರಣವಾಗಿದೆ. ನಿಜಕ್ಕೂ ಅವರಿಗೆ ನಾನು ಧನ್ಯವಾದ ಗಳನ್ನು ಹೇಳುತ್ತೇನೆ. ನನ್ನ ಓದಿಗೆ ನಮ್ಮ ತಂದೆ ತಾಯಿಗಳ ಬೆಂಬಲ ಕೂಡ ಇತ್ತು. ಪರೀಕ್ಷೆಯ ತರಬೇತಿಯನ್ನ ಬೆಂಗಳೂರಿನಲ್ಲಿ ಪಡೆದುಕೊಂಡಿರುವೆ. ವಿದ್ಯಾರ್ಥಿಗಳು ದೃಢ ನಿರ್ಧಾರದಿಂದ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಯಾವತ್ತೂ ನನ್ನಿಂದ ಆಗುವುದಿಲ್ಲ ವೆಂದು ಕೊಳ್ಳಬಾರದು.  ಸತತವಾಗಿ, ಏಕಾಗ್ರತಿಯಿಂದ ಓದಿದರೆ ಮಾತ್ರ ನಾವು ಏನಾದರೂ ಸಾಧನೆ ಮಾಡಲು ಸಾಧ್ಯ. ಯಾವುದು ಯಾರಿಗೂ ಅಸಾಧ್ಯವಲ್ಲ. ಎಲ್ಲರಿಗೂ ಅವರವರದ್ದೆ ಆದ ವಿಚಾರಗಳು ಇರುತ್ತವೆ. ಅದನ್ನು ಬಳಸಿಕೊಂಡು ಓದಿದರೆ ಎಂತವರು ಸಾಧನೆ ಮಾಡಲು ಸಾಧ್ಯವಾಗುತ್ತದೆ.  

ಸಿಕ್ಯಾಬ್ ಸಂಸ್ಥೆಯಲ್ಲಿನ  ಶಿಕ್ಷಣ ಮತ್ತು ಪ್ರಾಧ್ಯಾಪಕರು ನಿಮ್ಮ ಓದಿಗೆ ಸಂಪೂರ್ಣ ಸಹಾಯ ಮಾಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಹಿರಿಯ ಪತ್ರಕರ್ತ ರಾದ ರಫಿ  ಭಂಡಾರಿ ಮಾತನಾಡಿ  ಸಿಎ ಪರೀಕ್ಷೆ ಕಠಿಣವಾದದ್ದು ಆದರೆ ಕಠಿಣ  ಪರಿಶ್ರಮದಿಂದ ಆ ಪರೀಕ್ಷೆಯನ್ನು ಪಾಸ್ ಮಾಡಿಕೊಳ್ಳಬಹುದು. ಈ ಹಿಂದೆ ಆರ್ಥಿಕವಾಗಿ ಹಿಂದೆ ಇದ್ದವರಿಗೆ ಬಡವರು ಮುಂದೆ ಇದ್ದವರಿಗೆ ಶ್ರೀಮಂತರು ಎಂದು ಕರೆಯುತ್ತಿದ್ದ ಕಾಲವಿತ್ತು ಆದರೆ ಇಂದು ಶಿಕ್ಷಣ ಹಾಗೂ ಜ್ಞಾನವೇ ನಿಜವಾದ ಸಂಪತ್ತು ಆಗಿದೆ.  ಶಿಕ್ಷಣದಲ್ಲಿ  ಶ್ರೀಮಂತರಾಗುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿದರೆ ಸಾಧನೆ ಸಾಧ್ಯವಾಗುತ್ತದೆ.   

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನವನ್ನು ಕೊಟ್ಟು ಸಾಧನೆ ತಮ್ಮದಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಎ ಆರ್ ಎಸ್ ಇನಾಮಾರ  ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್‌.ಕೆ.ಯಡಹಳ್ಳಿ ಮಾತನಾಡಿ ಪೋಷಕರು ನಿಮ್ಮ ಮೇಲೆ ಸಾಕಷ್ಟು ನೀರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗಾಗಿ ಅನಗತ್ಯವಾಗಿ ಸಮಯವನ್ನು ವ್ಯರ್ಥ ಮಾಡದೆ ಓದಿನ ಕಡೆ ಗಮನ ಕೊಟ್ಟು ಓದಬೇಕೆಂದು ಹೇಳಿದರು.ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನ ಉಪ ಪ್ರಾಂಶುಪಾಲರಾದ ಶ್ರೀಮತಿ  ಭಾಗ್ಯಶ್ರೀ ಸೇವತ್ಕರ್ ಅವರು ಶಾನವಾಜ್ ಅವರು ನಡೆದು ಬಂದ ಸಾಧನೆ ಕುರಿತು  ಮಾತನಾಡಿದರು ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಪ್ರೊ.ಇರಮ್ ಪಠಾಣ್, ಪ್ರೊ.ಶಾಹಿನ್ ನಾಗಠಾಣ, ಪ್ರೊ.ತಬಸುಮ್ ಇನಾಮಾದಾರ ನೆರವೇರಿಸಿದರುಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಾಂಭವಿ ಸಜ್ಜನ್, ಶ್ರೀಮತಿ ಆಲಿಯಾ ಡಲಾಯತ್, ಶ್ರೀಮತಿ ಪುಷ್ಪಾ ಪಾಟೀಲ, ಚಂದ್ರಶೇಖರ, ನಿಂಗನ್ ಗೌಡ ಗುಜಗೊಂಡ , ಇರ್ಫಾನ್ ಹೆಬ್ಬಾಳ, ಅಸ್ಲಂ ಸೊಲ್ಲಾಪುರ ಹಾಗೂ ವಿದ್ಯಾರ್ಥಿಗಳು  ಭಾಗಿಯಾಗಿದ್ದರು.