ಬೆಳಗಾವಿ : ನಾಡಿನ ಶ್ರೇಷ್ಠ ಮಠದ ಶಿಷ್ಯನಾಗಿದ್ದು ನಮ್ಮ ಪುಣ್ಯ ನಾನು ನಾಗನೂರು ರುದ್ರಾಕ್ಷಿ ಮಠದ ಶಿಷ್ಯ ಎಂದು ಹೇಳಿಕೊಳ್ಳಲು ನನಗೆ ಅಪಾರ ಹೆಮ್ಮೆ ವಿಷಯ ಎಂದು ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.
ಅವರಿಂದು ಗದುಗಿನ ಜಗದ್ಗುರು ತೋಂಟದ ಸಿದ್ದರಾಮ ಶ್ರೀಗಳವರ ಸಾನಿಧ್ಯದಲ್ಲಿ ನಡೆದ ಬೆಳಗಾವಿ ಎಸ್.ಜಿ.ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಸಭಾಗೃಹದಲ್ಲಿ ನಡೆದ ನಾಗನೂರು ರುದ್ರಾಕ್ಷಿ ಮಠದ ಹಳೆಯ ವಿದ್ಯಾಥರ್ಿಗಳ ಸಂಘದ ವಾಷರ್ಿಕ ಸರ್ವ ಸಾಧಾರಣ ಸಭೆಯ ಸಮ್ಮುಖ ವಹಿಸಿ ಮಾತನಾಡುತ್ತಿದ್ದರು.ಇದೇ ಮಠದ ಶಿಷ್ಯನಾಗಿ ಇದೇ ಮಠಕ್ಕೆ ಪೀಠಾಧಿಪತಿಯಾಗಿ ಬಂದಿದ್ದು ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ. ಸಮಾಜ ಸೇವೆಗೆ ದೊರೆತ ಬಹುದೊಡ್ಡ ಅವಕಾಶ ಇದಾಗಿದೆ. ಕಾಲಕ್ಕೆ ತಕ್ಕಂತೆ ಆಧುನಿಕ ಬದಲಾವಣೆಗಳನ್ನು ಸೌಕರ್ಯಗಳನ್ನು, ಆಧುನಿಕ ಸೌಲಭ್ಯಗಳನ್ನು ಜಾರಿಗೆ ತಂದಿರುವ ಹಿರಿಯ ಶ್ರೀಗಳಾದ ಗದುಗಿನ ಜಗದ್ಗುರು ತೋಂಟದ ಸಿದ್ದರಾಮ ಶ್ರೀಗಳವರ ಮಾರ್ಗದರ್ಶನದಲ್ಲಿ ಮಠದ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸುವುದಾಗಿ ಅವರು ನುಡಿದರು.
"ನಾಗನೂರು ಪ್ರಸಾದ ನಿಲಯಗಳ ವಿದ್ಯಾಥರ್ಿಗಳ ಸಂಘ"ಎಂದು ಹಳೆಯ ವಿದ್ಯಾಥರ್ಿಗಳ ಸಂಘಕ್ಕೆ ಮರು ನಾಮಕರಣ ಮಾಡುವದು ಯೋಗ್ಯವಾದಿತೆಂದು ಆಶಯ ವ್ಯಕ್ತಪಡಿಸಿದ ಅವರು ತಾವೂ ಸಹ ಈ ಸಂಘದ ಸದಸ್ಯನಾಗಿ ಹಿಂದಿನ ಸಭೆಗಳಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರಲ್ಲದೇ ಸಂಘದ ಸದಸ್ಯರ ಸಂಖ್ಯೆ ಹೆಚ್ಚಿಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡೋಣ ನಮ್ಮ ಈ ಸಂಘ ನಾಡಿನ ಪ್ರತಿಷ್ಠೀತ ಸಂಘ ಎನಿಸುವಂತೆ ಕಾರ್ಯ ಮಾಡೋಣವೆಂದು ನುಡಿದ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಮ್ಮ ಸದಸ್ಯರ ಸಂಖ್ಯೆ ಹೆಚ್ಚಸಲು ಪ್ರಯತ್ನಿಸೋಣ ಎಂದರು.
ಸಂಘದ ಕಾರ್ಯದಶರ್ಿ ಆರ್.ಎಸ್.ಚಾಪಗಾವಿ 2018-19 ನೇ ಸಾಲಿನ ಲೆಕ್ಕಪತ್ರ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.ಸಂಘದ ಅಧ್ಯಕ್ಷ ಎಂ,ಆರ್.ಉಳ್ಳೆಗಡ್ಡಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.ಹಿರಿಯರಾದ ಆರ್.ಪಿ ಅಪರಾಜ.ಶ್ರೀ.ವಿಭೂತಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಎ,ಕೆ,ಪಾಟೀಲ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಶಂಕರ ಗುಡಗನಟ್ಟಿ ಅವರು ವಂದಿಸಿದರು.