ಕೊರೊನಾ ವಿರುದ್ದ ಮಾತ್ರವಲ್ಲ, ಕಾಣಿಸದ ಹಲವು ಶತ್ರುಗಳೊಂದಿಗೂ ಹೋರಾಡುತ್ತಿದ್ದೇವೆ; ಪ್ರಧಾನಿ ಮೋದಿ

ನವದೆಹಲಿ, ಜೂನ್  ೧೧, ಇಡೀ  ಜಗತ್ತು  ಕೊರೊನಾ ವೈರಸ್  ವಿರುದ್ದ  ಹೋರಾಟ  ನಡೆಸುತ್ತಿದ್ದರೆ.. ಭಾರತ ಮಾತ್ರ ಕೊರೊನಾ  ವೈರಸ್  ಜತೆಗೆ  ಅನೇಕ  ವಿಪತ್ತುಗಳೊಂದಿಗೆ ಹೋರಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ  ಹೇಳಿದ್ದಾರೆ. ಪ್ರವಾಹ, ಮಿಡತೆ ಹಾವಳಿ, ಆಲಿಕಲ್ಲು, ತೈಲ ಬಾವಿಗಳಲ್ಲಿ ಬೆಂಕಿ, ಲಘು ಭೂಕಂಪ,  ಎರಡು ಚಂಡಮಾರುತ ಮತ್ತಿತರ ವಿಪತ್ತುಗಳ  ವಿರುದ್ದ   ಏಕ ಕಾಲದಲ್ಲಿ  ಹೋರಾಡುತ್ತಿದೆ ಎಂದು ತಿಳಿಸಿದ್ದಾರೆ.

ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ) ಯ ೯೫ ನೇ ವಾರ್ಷಿಕೋತ್ಸವ ಅಂಗವಾಗಿ  ವಿಡಿಯೋ ಕಾನ್ಫರೆನ್ಸ್ ಮೂಲಕ  ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ,   ಜಗತ್ತು ಕೊರೊನಾ  ವೈರಸ್ ನೊಂದಿಗೆ  ಮಾತ್ರ ಹೋರಾಡುತ್ತಿದೆ. ಭಾರತಕ್ಕೆ ಕೊರೊನಾ  ದೊಂದಿಗೆ   ಇನ್ನೂ ಕೆಲವು ಸಮಸ್ಯೆಗಳಿವೆ. ಪ್ರವಾಹ, ಮಿಡತೆ, ಆಲಿಕಲ್ಲು, ತೈಲ ಸೋರಿಕೆ,  ಲಘು ಭೂಕಂಪಗಳು, ಎರಡು ಚಂಡಮಾರುತಗಳು  ...   ಇವೆಲ್ಲವದರ  ವಿರುದ್ದ   ನಾವು   ಒಮ್ಮೆಗೆ  ಹೋರಾಡುತ್ತಿದ್ದೇವೆ ... ಎಂದು ಪ್ರಧಾನಿ ಹೇಳಿದರು.

ಈ ದೇಶದ ಪ್ರತಿಯೊಬ್ಬ ನಾಗರಿಕನೂ  ಸೃಷ್ಟಿಯಾಗಿರುವ  ಪ್ರಸಕ್ತ  ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಬೇಕೆಂದು ಅವರು ಕರೆ ನೀಡಿದರು. ಈ ಬಿಕ್ಕಟ್ಟುನಿಂದ   ದೇಶಕ್ಕೆ ಮಹತ್ವದ ತಿರುವು ನೀಡುವ ಅಗತ್ಯವಿದ್ದು,  ಅದು  ದೇಶವನ್ನು  ಸಬಲೀಕರಣಗೊಳಿಸುವ ಮಹತ್ವದ ತಿರುವಾಗಲಿದೆ  ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ಸ್ವಾಮಿ ವಿವೇಕಾನಂದರು ದಶಕಗಳ ಹಿಂದೆ ನುಡಿದಂತೆ,  ಭಾರತೀಯರು  ತಮ್ಮ  ಉತ್ಪನ್ನಗಳನ್ನು ಬಳಸುವ ಮೂಲಕ   ಅನ್ಯ ದೇಶಗಳಲ್ಲಿ ಭಾರತೀಯ ಸರಕುಗಳಿಗೆ  ಮಾರುಕಟ್ಟೆ ಪ್ರೋತ್ಸಾಹಿಸುವ  ಆಗತ್ಯವಿದೆ  ಎಂದರು.  ಕೊರೊನಾ ನಂತರದ ಜಗತ್ತಿನಲ್ಲಿ, ಭಾರತಕ್ಕೆ ವಿವೇಕಾನಂದರ ಈ ಮಾತುಗಳು ಸ್ಪೂರ್ತಿದಾಯಕವಾಗಲಿವೆ  ಎಂದರು.  ಈ ಬಿಕ್ಕಟ್ಟಿನ  ಸಂದರ್ಭದಲ್ಲಿ, ಭಾರತೀಯ ಆರ್ಥಿಕತೆ  ತನ್ನ ಪ್ರಾಬಲ್ಯ-ನಿಯಂತ್ರಣ  ಚೌಕಟ್ಟಿನಿಂದ ಹೊರಬಂದು “ಪ್ಲಗ್ ಮತ್ತು ಪ್ಲೇ”   ನತ್ತ  ಸಾಗಬೇಕು. ಸಾಂಪ್ರದಾಯಿಕ ನೀತಿಗಳಿಗೆ ಇದು ಸಮಯವಲ್ಲ.  ದಿಟ್ಟ ನಿರ್ಧಾರಗಳು ಮತ್ತು ಹೂಡಿಕೆಗಳನ್ನು  ಆಕರ್ಷಿಸುವ  ಸಮಯ ಎಂದು ... ಪ್ರಧಾನಿ ಹೇಳಿದರು.

ಇಡೀ  ಜಗತ್ತು ಈಗ ಭಾರತವನ್ನು   ಎದುರು ನೋಡುತ್ತಿದೆ.  ದೇಶ  ಸ್ವಾವಲಂಬನೆ ಸಾಧಿಸಬೇಕು ಎಂದು ಪ್ರಧಾನಿ  ಆಶಯ ವ್ಯಕ್ತಪಡಿಸಿದರು. ವಿದೇಶಗಳ ಮೇಲಿನ ಅವಲಂಬನೆ   ಕಡಿಮೆ ಮಾಡಲು ಸ್ವದೇಶಿ ವಸ್ತುಗಳ  ಘೋಷಣೆ ಮೊಳಗಿಸಬೇಕು. ಅದಕ್ಕಾಗಿಯೇ ನಾವು ಆತ್ಮ ನಿರ್ಭರ್  ಕಾರ್ಯಕ್ರಮವನ್ನು   ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಅನೇಕ ದೇಶಗಳಿಗೆ  ರಫ್ತು ಮಾಡುತ್ತೀದ್ದೇವೆ,  ರೈತರಿಗಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಈಶಾನ್ಯ ರಾಜ್ಯಗಳಲ್ಲಿ ಸಾವಯವ ಕೃಷಿಗೆ ಬೆಂಬಲ ನೀಡಬೇಕೆಂದು ಪ್ರಧಾನಿ ಮೋದಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್  ಅನ್ನು  ಆಗ್ರಹಿಸಿದರು.