ನಾವೆಲ್ಲರೂ ಒಂದೇ, ನಮಗೆಲ್ಲರಿಗೂ ಒಬ್ಬನೇ ತಂದೆ: ಡಾ. ಅಲ್ಲಮಪ್ರಭು ಸ್ವಾಮೀಜಿ
We are all one, we all have one father: Dr. Allama Prabhu Swamiji
ಲೋಕದರ್ಶನ ವರದಿ
ಬೆಳಗಾವಿ, ಫೆ. 16: ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂದೇಶವೇ ಭಾರತದ ಆತ್ಮ ಎಂದು ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು. “ನಾವೆಲ್ಲರೂ ಒಂದೇ, ನಮಗೆಲ್ಲರಿಗೂ ಜಗದೊಡೆಯನಾದ ಜಗದೀಶ್ವರ ಒಬ್ಬನೇ ತಂದೆ ಎಂಬ ಭಾವನೆಯೊಂದಿಗೆ ದೇಶದೆಲ್ಲೆಡೆ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರದ ಕಾರಂಜಿಮಠದಲ್ಲಿ ಜರುಗಿದ 296ನೇ ಮಾಸಿಕ ಶಿವಾನುಭವ ಹಾಗೂ ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಿವತತ್ವವು ಅತ್ಯಂತ ಪ್ರಾಚೀನವಾದುದು. ಆದಿಶಿವನ ಪರಿಕಲ್ಪನೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಶೈವಧಾರೆಯ ಮೂಲಕ ಶಿವಾರಾಧನೆ ಇಂದಿಗೂ ನಿರಂತರವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.
ಮಹಾಶಿವರಾತ್ರಿಯ ವಿಶೇಷತೆಯ ಕುರಿತು ಡಾ. ಅಶ್ವಿನಿ ಕುದರಿಮಠ (ಭಾಗೋಜಿ) ವಿಶೇಷ ಉಪನ್ಯಾಸ ನೀಡಿ, ವ್ಯಾಸಮುನಿ ರಚಿಸಿದ ಹದಿನೆಂಟು ಪುರಾಣಗಳಲ್ಲಿ ಹತ್ತು ಪುರಾಣಗಳು ಶಿವತತ್ವ ಪ್ರಸಾರಕ್ಕೆ ಮೀಸಲಾಗಿವೆ ಎಂದು ಹೇಳಿದರು. ವೇದಗಳಲ್ಲಿ ಶಿವತತ್ವ ವಿಶಾಲವಾಗಿ ಪ್ರತಿಪಾದಿತವಾಗಿದೆ. ಶಿವಮಂತ್ರ ಜಪದಿಂದ ಮಾನವನ ದೇಹದಲ್ಲಿನ ಕುಂಡಲಿನಿ ಶಕ್ತಿ ಜಾಗೃತವಾಗಿ ಅಣಿಮಾದಿ ಅಷ್ಟಸಿದ್ಧಿಗಳು ಲಭಿಸುತ್ತವೆ ಎಂದು ಅವರು ವಿವರಿಸಿದರು. ಶಿವನು ದಕ್ಷಿಣದವನು ಹಾಗೂ ಪಾರ್ವತಿ ಉತ್ತರದ ಹಿಮವಂತ ಪರ್ವತರಾಜನ ಪುತ್ರಿಯಾಗಿರುವುದರಿಂದ ಅವರ ವಿವಾಹವು ಉತ್ತರಹಿದಕ್ಷಿಣ ಭಾರತದ ಭಾವೈಕ್ಯತೆಗೆ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.
ದಿವ್ಯ ಸಾನ್ನಿಧ್ಯವನ್ನು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಉತ್ತರಾಧಿಕಾರಿ ಡಾ. ಶಿವಯೋಗಿ ದೇವರು ನೇತೃತ್ವ ವಹಿಸಿದ್ದರು.ಭರತೇಶ ಶಿಕ್ಷಣ ಸಂಸ್ಥೆ, ಬೆಳಗಾವಿಯ ಕಾರ್ಯದರ್ಶಿ ಡಾ. ವಿನೋದ ದೊಡ್ಡಣ್ಣವರ ಹಾಗೂ ಅನುದಾನಿತ ಶಾಲಾಹಿಕಾಲೇಜುಗಳ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಳಂಗಳಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಯುವಪ್ರತಿಭೆ ಕಾಜೋಲ್ ಧಾಮನೇಕರ ಹಾಗೂ ಕಾರಂಜಿಮಠದ ಕುಮಾರೇಶ್ವರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರಗಿತು ಕಾರ್ಯಕ್ರಮದಲ್ಲಿ ಬಸವರಾಜ ಜಗಜಂಪಿ ಸನ್ಮಾನಿತರನ್ನು ಪರಿಚಯಿಸಿದರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಎ.ಕೆ. ಪಾಟೀಲ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 