ವೇಮನರ ಜೀವನ ಎಲ್ಲರಿಗೂ ಮಾದರಿಯಾಗಿದೆ: ಶಾಸಕ ಓಲೇಕಾರ

ಹಾವೇರಿ ಜ.19: ಮಹಾಯೋಗಿ ವೇಮನರ ಜೀವನ ಎಲ್ಲರಿಗೂ ಮಾದರಿಯಾಗಿದೆ. ವೇಮನರು ಯಾವುದೇ ಒಂದು ಸಮುದಾಯ, ಜಾತಿಗೆ ಸೀಮಿತರಲ್ಲ, ಅವರು ಸಮ ಸಮಾಜ ನಿರ್ಮಾಣಕ್ಕೆ  ಶ್ರಮಿಸಿದ ಮಹಾನ್ ದಾರ್ಶನಿಕರು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ರಡ್ಡಿ ಸಂಘದ ಸಹಯೋಗದಲ್ಲಿ ಭಾನುವಾರ ನಗರದ ಡಿ. ದೇವರಾಜು ಅರಸು ಭನದಲ್ಲಿ ಜರುಗಿದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವುಗಳು ಆಡಂಬರದ ಜೀವನಕ್ಕೆ  ಮೊರೆಹೋಗಿದ್ದು, ಸ್ವಾರ್ಥದ ಬದುಕು ಕಟ್ಟಿಕೊಳ್ಳುವಲ್ಲಿ ತೊಡಗಿದ್ದೇವೆ. ಯೋಗಿಗಳು ಸರಳ ಜೀವನಕ್ಕೆ  ಒತ್ತು ನೀಡಿದ್ದರು ಹಾಗೂ ಸಮಾಜದಲ್ಲಿ ಮೌಢ್ಯವನ್ನು  ತೊಡೆದಕಾಹಲು ಹಾಗೂ  ಉತ್ತಮ ಸಮಾಜ ನಿರ್ಮಾಣಕ್ಕೆ   ಶ್ರಮಿಸಿದವರು ಎಂದು ಮಣ್ಣಿಸಿದರು. 

ಉಪನ್ಯಾಸಕರಾಗಿ ಭಾಗವಹಿಸಿದ ಪ್ರಾಧ್ಯಾಪಕ ಡಾ.ಕಾಂತೇಶರಡ್ಡಿ ಗೋಡಿಹಾಳ ಅವರು ಮಾತನಾಡಿ, ವೇಮನರು ಜಾತಿ, ಮೌಢ್ಯತೆಯ ಬಗ್ಗೆ ಧ್ವನಿ ಎತ್ತಿದವರು. ಸ್ವಂತ ತಂದೆಯನ್ನೇ ಸನ್ಮಾರ್ಗಕ್ಕೆ ತಂದ ಕೀತರ್ಿ ಅವರಿಗೆ ಸಲ್ಲುತ್ತದೆ. ಬಸವಣ್ಣನವರಂತೆ ಸಮಾಜದ ಅಂಕುಡೊಂಕು ತಿದ್ದಲು ಅವರ ಕೊಡುಗೆ ಅಪಾರ. ಇಂತಹ ಮಹಾನ್ ಪುರುಷರ ತತ್ವಾದರ್ಶಗಳನ್ನು ಯುವ ಸಮೂಹ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಆಶೀರ್ವಚನ ನೀಡಿದರು.  ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಸಿದ್ದರಾಜ ಕಲಕೊಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಶ್ರೀಮತಿ ಶಶಿಕಲಾ ಹುಡೇದ, ಅಶೋಕ ರೆಡ್ಡಿ, ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ಎಂ.ಎಂ ಮೈದೂರ, ದೊಡ್ಡಗೌಡರ, ಈರಪ್ಪ ಲಮಾಣಿ, ಮಂಜಪ್ಪ ಮಾಗಡಿ, ಹನುಮಂತಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.