ಜಲಾಮೃತ ಕಾರ್ಯಕ್ರಮ
ಹಾವೇರಿ: ಬೂದಗಟ್ಟಿ ಗ್ರಾಮಪಂಚಾಯತಿಯ ಸೋಮನಕಟ್ಟಿ ಗ್ರಾಮದ ಮಲ್ಲಮ್ಮನ ಕೆರೆಯ ಸ್ಥಳದಲ್ಲಿ 2019-20ನೇ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದ್ದು, ಇದೇ ವೇಳೆಯಲ್ಲಿ "ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಕಾರ್ಯಕ್ರಮದ" ಅಂಗವಾಗಿ ಗ್ರಾಮ ಪಂಚಾಯತದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಕೂಲಿಕಾರರು ಎಲ್ಲರೂ ಶ್ರಮದಾನ ಮಾಡುವ ಮೂಲಕ ಕೂಲಿಕಾರರಿಗೆ ಚೈತನ್ಯ ತುಂಬಿ ಕಾಮಗಾರಿ ನಿರ್ವಹಿಸಲು ಕೋರಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಶಾಂತವ್ವ ಹ ಕುರುಬರ, ಉಪಾಧ್ಯಕ್ಷರಾದ ಚನ್ನವ್ವ ಹೊ ಸೋಮಣ್ಣನವರ ಮತ್ತು ಸದಸ್ಯರಾದ ಗೌರವ್ವ ಹ ಉಪ್ಪಾರ, ಮಾಲತೇಶ ಗೋ ಹೊಸಮನಿ, ಫಕ್ಕೀರೇಶ ಕ ಹೊಸಮನಿ, ಶಂಭುಲಿಂಗಪ್ಪ ಬ ಮೇಟಿ, ಸುವರ್ಣವ್ವ ನ ಹಳೇರಿತ್ತಿ, ಯಲ್ಲನಗೌಡ ಕ ಕರೇಗೌಡ್ರ ಮಂಜವ್ವ ಶಿ ತಿಮ್ಮನೇಹಳ್ಳಿ ರತ್ನವ್ವ ಹ ತಳವಾರ ಶ್ರೀಭರಮಗೌಡ ಬ ಮುದಿಗೌಡ್ರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 