ಸಂಬರಗಿ: ರೈತರ ಜಮೀನಿಗೆ ನೀರು ಒದಗಿಸಲಾಗುವುದು: ಸಚಿವ ಶೆಟ್ಟರ

ಲೋಕದರ್ಶನ ವರದಿ

ಸಂಬರಗಿ 29:  ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಅನಮತಪೂರ ಜಿ ಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಖಿಳೇಗಾಂವ ಬಸವೇಶ್ವರ ಯಾತನೀರಾವರಿ ಕಾಮಗಾರಿ ಪ್ರಾರಂಭವಿದ್ದು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಎಲ್ಲಾ ರೈತರ ಜಮೀನಿಗೆ ನೀರು ಒದಗಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಹೇಳಿದರು.

ಅನಂತಪೂರ ಗ್ರಾಮದಲ್ಲಿ ಕಾಗವಾಡ ಕ್ಷೇತ್ರದ ಬಿ.ಜೆ.ಪಿ ಅಭ್ಯಥರ್ಿ ಶ್ರೀಮಂತ ಪಾಟೀಲ ಇವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಭಾಗ ಸತತ ಬರಗಾಲಕ್ಕೆ ತುತ್ತಾಗಿದ್ದು ರೈತರು ಬರಗಾಲದಿಂದ ಬಳಲುತ್ತಿದ್ದಾರೆ. ಈ ಭಾಗದ ಸಮಸ್ಯೆ ನೋಡಿ ಶ್ರೀಮಂತ ಪಾಟೀಲ ಇವರು ಸಕರ್ಾರದ ಮಟ್ಟದಲ್ಲಿ ಒತ್ತಡ ತಂದು ಕೆಲಸವನ್ನು ಭರ್ಜರಿಯಿಂದ ನಡಿಯುತ್ತದ್ದು ಈ ಭಾಗದ ಕೆರೆಗಳು ತುಂಬಿ ಸಂಪೂರ್ಣವಾಗಿ ಬರಗಾಲಮುಕ್ತ ಮಾಡುವ ಗುರಿಯಿದೆ. ಕೃಷ್ಣಾ ನದಿಗೆ ಪ್ರವಾಹ ಬಂದಾಗ ಮುಳುಗಡೆಯಾಗಿರುವ ಮನೆಗಳ ಪುನರ್ವಸತಿಗೆ 5 ಲಕ್ಷ ರೂ ಅನುದಾನ ನೀಡಿರುವ ಏಕೈಕ ಬಿ.ಜೆ.ಪಿ ಸಕರ್ಾರ ಎಂದು ಹೇಳಿದರು. 

ಈ ವೇಳೆ ವಿಧಾನಪರಿಷತ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಈ ಭಾಗದಲ್ಲಿ ಹಾಗೂ ಅಭಿವೃದ್ಧಿಗಾಗಿ ಶ್ರೀಮಂತ ಪಾಟೀಲ ಇವರನ್ನು ಅತಿಹೆಚ್ಚು ಮತಗಳಿಂದ ಆಯ್ಕೆ ಮಾಡಿ ತಮ್ಮ ಕ್ಷೇತ್ರದ ಸಮಸ್ಯೆ ಪರಿಹಾರಗೊಳಿಸಬೇಕೆಂದು ಅವರು ಹೇಳಿದರು.

ಈ ವೇಳೆ ಕಾಗವಾಡ ಮಂಡಲ ಬಿ.ಜೆ.ಪಿ ಅಧ್ಯಕ್ಷ ನಿಂಗಪ್ಪ ಕೋಖಲೆ ಮಾತನಾಡಿ ಶ್ರೀಮಂತ ಪಾಟೀಲ ಇವರು ಸಕ್ಕರೆ ಕಾಖರ್ಾನೆ ಮುಖಾಂತರ ಈ ಭಾಗದ ರೈತರ ಸಮಸ್ಯೆಯನ್ನು ಪರಿಹಾರಗೊಳಸಿದ್ದಾರೆ. ಅವರ ಪ್ರಯತ್ನದಿಂದ ನೀರಾವರಿ ಯೋಜನೆ ನಿಗದಿತ ಅವಧೀಯಲ್ಲಿ ಪೂರ್ಣಗೊಳಿಸಲು ಅವರಿಗೆ ಆಯ್ಕೆ ಮಾಡಬೇಕೆಂದು ಅವರು ಹೇಳಿದರು.

ಈ ವೇಳೆ ಶಿವು ಸಂಕ್ರಟ್ಟಿ, ಓಂಪ್ರಕಾಶ ಡೊಳ್ಳೀ, ರಾಜು ಮದಬಾವಿ, ಬಾಹುಸಾಭ ಪತ್ತಾರ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಬಿ.ಜೆ.ಪಿ ಅಭ್ಯಥರ್ಿಯಾದ ಶ್ರೀಮಂತ ಪಾಟೀಲ ಇವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಜನರ ಸಮಸ್ಯೆ ಪರಿಹಾರಗೊಳಿಸಲು ಸಿದ್ದವಾಗಿದ್ದೇನೆ. ಮತದಾರರು ಆಶಿವರ್ಾದ ಮಾಡುತ್ತಾರೆ ಎಂದು ವಿಶ್ವಾಸವಿದೆ. ಸಂಬರಗಿ, ಶಿರೂರ, ಖಿಳೇಗಾಂವ, ಪಾಂಡೇಗಾಂವ, ಆಜೂರ, ಕೆಂಪವಾಡ, ಪಾರ್ಥನಹಳ್ಳಿ, ಮಾಯನಟ್ಟಿ ಈ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.