ನೀರು ಅತಿಯಾಗಿ ಬಳಸುವುದರಿಂದ ಜಲಕ್ಷಾಮ- ಸುಷ್ಮಾ ಮಳ್ಳಿಮಠ ರೈತರಿಗೆ ಸಲಹೆ
ರೋಣ 06: ಅಟಲ್ಭೂ ಜಲ ಯೋಜನೆಯಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಧಾರವಾಡ, ಗದಗ ತಾಲ್ಲೂಕಿನ ರೈತರಿಗೆ ತರಬೇತಿಯನ್ನು ಹೆಚ್.ಕೆ.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯಲ್ಲಿ ಆಯೋಜಿಸಲಾಗಿತ್ತು. ಸಮೂದಾಯ ಸಹಭಾಗಿತ್ವದೊಂದಿಗೆ ಅಂತರರ್ಜಲ ಸುಸ್ಥಿರವಾಗಿ ನಿರ್ವಹಣೆ ಮಾಡುವದು, ಕೃಷಿಯಲ್ಲಿ ನೀರಿನ ಮಿತ ಬಳಕೆ ಉಪಕ್ರಮಗಳನ್ನು ಉತ್ತೇಜಿಸುವುದು, ಮಳೆ ನೀರು ವ್ಯರ್ಥವಾಗಿ ಹರಿದು ಹೊಗದಂತೆ ತಡೆಯುವುದು, ನೀರಿನ ಸಂರಕ್ಷಣೆ ಮತ್ತು ಮರು ಸಂಗ್ರಹ ಕ್ರಮಗಳನ್ನು ಕೈಗೊಳ್ಳುವುದು, ಸಮೂದಾಯಕ್ಕೆ ಅಂತರ್ಜಲದ ಮಹತ್ವದ ಅರಿವು ಮೂಡಿಸುವುದರ ಕುರಿತು ಉಪಕೃಷಿನಿರ್ದೇಶಕರು ತಿಳಿಸಿದರು. ನೀರಿನ ಅತಿಯಾದ ಬಳಕೆಯಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಜಲಕ್ಷಾಮ ಉಂಟಾಗುತ್ತಿರುವ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಂತರ್ಜಲ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ. ನೀರಿನ ಪ್ರಮಾಣ ಕಡಿಮೆಯಾಗದಂತೆ ಎಚ್ಚರಿಕೆಯಿಂದ ಬಳಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿ.ಕೃ.ತ.ಕೇಂದ್ರ ಧಾರವಾಡದ ಸಹಾಯಕ ಕೃಷಿ ನಿರ್ದೇಶಕರಾದ ಸುಷ್ಮಾ ಮಳ್ಳಿಮಠ ರೈತರಿಗೆ ಸಲಹೆ ನೀಡಿದರು.