ಸಂಬರಗಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಊಟಕ್ಕೆ ನೀರಿನ ಸಮಸ್ಯೆ
Water problem for hot meals for children in Sambaragi schools
ಸಂಬರಗಿ 14 : ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನ ಆಹಾರ ಯೋಜನೆಯನ್ನು ಜಾರಿಗೆ ತಂದು ಪ್ರತಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಆಹಾರ ದೊರೆಯಬೇಕೆಂದು ಆದೇಶ ಹೊರಡಿಸಿದೆ. ಆದರೆ ಕೆಲವು ತೋಟದ ಶಾಲೆಗಳಲ್ಲಿ ಮಕ್ಕಳಿಗೆ ನೀರಿನ ಸಮಸ್ಯೆ ಬರುತ್ತಾ ಇದ್ದು, ಬಿಸಿ ಊಟಕ್ಕೆ ಅಡುಗೆ ಮಾಡಲು ಸಹ ನೀರಿನ ಕೊರತೆ ಇದ್ದು, ಬಿಸಿ ಊಟದ ಸಿಬ್ಬಂದಿಗೆ 1 ಕಿ.ಮೀ ಅಂತರದಿಂದ ನೀರು ತರಬೇಕಾಗಿದ ಸ್ಥಿತಿ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಫೇಬ್ರುವರಿ ತಿಂಗಳು ಮುಕ್ತಾಯಗೊಂಡಿಲ್ಲ. ಆದರೆ ನೀರಿನ ಸಮಸ್ಯೆ ನಿಧಾನಕ್ಕೆ ಹೆಚ್ಚುತ್ತಿದೆ. ಸಂಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗನೂರ ಪಿ.ಎ ತೋಟದ ಶಾಲೆಯಲ್ಲಿ ಕೊಳವೆ ಭಾವಿಯ ನೀರು ಬತ್ತಿಹೋಗಿದ್ದು, ಶಾಲೆಯಲ್ಲಿ ಅಡುಗೆ ಮಾಡಲು ನೀರಿನ ಕೊರತೆ ಉಂಟಾಗಿದೆ. ಶುದ್ಧ ಕುಡಿಯುವ ನೀರಿನಲ್ಲಿ 1 ಕೊಡ ನೀರಿಗೆ 10 ರೂಪಾಯಿಗಳನ್ನು ಕೊಟ್ಟು ಬಿಸಿ ಊಟ ಸಿಬ್ಬಂದಿ ನೀರುತರ ಬೇಕಾಗಿದೆ. ಇನ್ನೂ 2 ತಿಂಗಳು ಶಾಲೆ ನಡೆಯುತ್ತವೆ. ದಿನ ನಿತ್ಯ 10 ರೂ.ಖರ್ಚು ಮಾಡಿ ನೀರು ಸಾಗಾಣಿಕೆ ಮಾಡಬೇಕಾಗುತ್ತದೆ.
ಶಾಲೆಯಲ್ಲಿ ನೀರಿನ ಸಮಸ್ಯೆಯಿಂದ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಸಧ್ಯದಲ್ಲಿ ಶಾಲಾ ದಾಖಲಾತಿಯಲ್ಲಿ ಮಕ್ಕಳ ಸಂಖ್ಯೆ 40 ಅಂತಾಇದ್ದು, ಈ ಸಮಸ್ಯೆಯಿಂದ ಶಾಲೆಯಲ್ಲಿ 20ಕ್ಕಿಂತ ಹೆಚ್ಚಿಗೆ ಮಕ್ಕಳು ಬರುತ್ತಿಲ್ಲ. ಆ ಕಾರಣ ನೀರಿನ ಸಮಸ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಅದೇ ಪ್ರಕಾರ ಖೋತವಾಡಿ ಗ್ರಾಮದ ಬನಾಯಿ ತೋಟ ಶಾಲೆ, ಖಿಳೇಗಾವ ಗ್ರಾಮದ ಜಾಧವ ತೋಟ ಶಾಲೆ, ಶಿರೂರ ಗ್ರಾಮದ ಹಜಾರೆತೋಟ ಶಾಲೆ ಸೇರಿದಂತಹ ಹಲವಾರು ತೋಟದ ಶಾಲೆಗಳಲ್ಲಿ ನೀರಿನಕೊರತೆ ಉಂಟಾಗಿದೆ. ನೀರು ಇಲ್ಲದ ಕಾರಣ ಅಡುಗೆ ಮಾಡಲು ಸಹ ತೊಂದರೆಆಗುತ್ತಿದೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 