ಬೆಂಗಳೂರು, ಅ 2 : ಜಲ ಸಂರಕ್ಷಣೆ, ಸ್ವಚ್ಛತೆ ಕೇವಲ ಸಕರ್ಾರಿ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾಗಬಾರದು. ನೀರು ನಿರ್ವಹಣೆ, ಶುಚಿತ್ವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಸ್ವಾತಂತ್ರ ಸಂಗ್ರಾಮದಂತೆ ಸ್ವಚ್ಛತಾ ಸಂಗ್ರಾಮ ಆಗಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಲಸಾಕ್ಷರತೆ ಮೂಡಿಸುವ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2014 ರಲ್ಲಿ ನರೇಂದ್ರ ಮೋದಿ ಸ್ವಚ್ಛತಾ ಪರಿಕಲ್ಪನೆಗೆ ಇಟ್ಟ ದಿಟ್ಟ ಹೆಜ್ಜೆ ಇಂದು ಮಹತ್ವದ ಫಲ ನೀಡುತ್ತಿದೆ. ದೇಶದ ಜನ ತಮ್ಮ ಆದಾಯದ ಶೇ. 15 ರಷ್ಟು ಭಾಗವನ್ನು ಆರೋಗ್ಯಕ್ಕಾಗಿ ವೆಚ್ಚ ಮಾಡುವುದನ್ನು ಮನಗಂಡು ಮೋದಿ ಅವರು 2017 ರಲ್ಲಿ ಸ್ವಚ್ಛತಾ ಆಂದೋಲನಕ್ಕೆ ವೇಗ ನೀಡಿದರು.
ಅದರ ಪ್ರತಿಫಲ ಈಗ ನಾವು ಎಲ್ಲೆಡೆ ಕಾಣುತ್ತಿದ್ದೇವೆ ಎಂದರು. ಇದೀಗ ಮೋದಿ ಜಲ ಶಕ್ತಿ ಅಭಿಯಾನಕ್ಕೆ ಒತ್ತು ಕೊಟ್ಟಿದ್ದು, ನೀರಿನ ಮಹತ್ವದ ಬಗ್ಗೆ ಎಲ್ಲೆಡೆ ಅರಿವು ಮೂಡಿಸಬೇಕಿದೆ. ಕಳೆದ ಬಾರಿ ಪ್ರವಾಹದಿಂದ ಕೇರಳ ಮುಳುಗಿ ಹೋಗಿತ್ತು. ಆದರೆ ಅದಾದ ಮೂರು ತಿಂಗಳ ಬಳಿಕ ಅಲ್ಲಿ ನೀರಿಗಾಗಿ ಹಾಹಾಕಾರ ತಲೆದೋರಿತ್ತು. ಇದನ್ನು ಮನಗಂಡು ನೀತಿ ಆಯೋಗ 2030 ಕ್ಕೆ ಈಗಿರುವ ಅಗತ್ಯಕ್ಕಿಂತ ಎರಡುಪಟ್ಟು ನೀರು ಬೇಕು ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಸವಾಲನ್ನು ಈಗಲೇ ಎದುರಿಸಬೇಕೆಂದು ಮೋದಿ ಜಲಶಕ್ತಿಗಾಗಿ ಪ್ರತ್ಯೇಕ ಸಚಿವಾಲಯ ಮಾಡಿದ್ದಾರೆ.
ಸ್ವಾತಂತ್ರ ಸಂಗ್ರಾಮ ಜನ್ಮಸಿದ್ಧ ಹಕ್ಕು ಎಂದು ಪಣತೊಟ್ಟಂತೆ ಸ್ವಚ್ಛತೆ ಮತ್ತು ಜಲ ಉಳಿತಾಯ ನಮ್ಮ ಸಂಗ್ರಾಮ ಆಗಬೇಕು. ಜನರು ಉಳಿದರೆ ಮಾತ್ರ ಐಟಿಬಿಟಿ, ಸಮಾಜ ಉಳಿಯಲು ಸಾಧ್ಯ ಎಂದರು. ಪ್ರೀತಿ ಇಲ್ಲದಿದ್ದರೆ ಬದುಕಬಹುದು. ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ವಾಯು, ನೀರು ಮತ್ತು ಭೂಮಿ ಪ್ರಕೃತಿ ನೀಡಿದ ಸಂಪತ್ತು. ಇವುಗಳಲ್ಲಿ ಸಮತೋಲನ ಕಾಪಾಡಬೇಕು. ನೀರನ್ನು ಭೂಮಿಯಲ್ಲಿ ಉಳಿಸಬೇಕು. ಅಂತರ್ಜಲ ರಕ್ಷಣೆ ನಮ್ಮ ಕರ್ತವ್ಯ ಆಗಬೇಕು. ಮಳೆಕೊಯ್ಲು ಕಡ್ಡಾಯ ಆಗಿ ನಮ್ಮ ವಾಸ ಸ್ಥಳದಲ್ಲಿ ಬೀಳುವ ಮಳೆನೀರನ್ನು ಹಿಡಿದಿಟ್ಟುಕೊಂಡು ನಮ್ಮ ಜ್ವಲಂತ ಸಮಸ್ಯೆಗೆ ನಾವೇ ಪರಿಹಾರಕಂಡುಕೊಳ್ಳಬೇಕು. ಬೇರೆಯವರ ಮೇಲೆ ಅವಲಂಬಿತರಾಗಬಾರದು ಎಂದರು.
ಕಳಸಾಬಂಡೂರಿ, ಕಾವೇರಿ ಸೇರಿದಂತೆ ನೀರಿಗಾಗಿ ರಾಜ್ಯರಾಜ್ಯಗಳ ನಡುವೆ ಸಮಸ್ಯೆಗಳು ಹೆಚ್ಚಾಗಿದೆ. ನೀರಿನ ಸಂರಕ್ಷಣೆ, ಕೆರೆಗಳ ಪುನಶ್ಚೇತನ, ಜಲಾನಯನಪ್ರದೇಶಾಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಸಕರ್ಾರ ಜಾರಿಗೊಳಿಸಿದೆ. ಕನರ್ಾಟಕದಲ್ಲಿ 65 ತಾಲೂಕುಗಳಲ್ಲಿ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಾಯಚೂರು ಹಾಗೂ ಯಾದಗಿರಿಗೆ ಸೌಲಭ್ಯ ನೀಡಲಾಗಿದೆ. ಇದೆಲ್ಲ ಪ್ರಚಾರಕ್ಕಾಗಿ ಅಲ್ಲ. ಜಲಶಕ್ತಿ ನಮ್ಮ ಗುರಿ ನಮ್ಮ ಕನಸು ಎಂದು ಸದಾನಂದಗೌಡ ಹೇಳಿದರು. ಕಾಲಚಕ್ರದಲ್ಲಿ ಕೃಷಿಯೇ ಮುಂಚೂಣಿಯಲ್ಲಿರುವ ಕ್ಷೇತ್ರ. ಹೀಗಾಗಿ ರೈತರು ಆತಂಕಪಡಬೇಕಿಲ್ಲ. ಕಾಲಚಕ್ರ ಬದಲಾಗುತ್ತಲೇ ಇದೆ. ಐಟಿಬಿಟಿ ಅಧ್ಯಯನ ಮಾಡಿದ ಮಕ್ಕಳು ಉದ್ಯೋಗಕ್ಕೆ ಹಾತೊರೆಯುತ್ತಾರೆ.
ಆದರೆ ರೈತನ ಮಗ ಉದ್ಯೋಗ ಅರಸದೇ ತಾನೂ ದುಡಿದು ಇನ್ನೊಬ್ಬರಿಗೂ ಅನ್ನ ನೀಡುತ್ತಾನೆ. ಹೀಗಾಗಿಯೇ ರೈತನ ಆದಾಯ ದ್ವಿಗುಣಗೊಳಿಸುವುದು ಕೇಂದ್ರ ಸಕರ್ಾರದ ಮಹತ್ವದ ಗುರಿಯಾಗಿದೆ ಎಂದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ, ನೀರಿನ ಪ್ರಾಮುಖ್ಯತೆಯ ಬಗ್ಗೆ ಸ್ವತಃ ಗಾಂಧೀಜಿಯವರೇ ಹೇಳಿದ್ದಾರೆ. ನೀತಿ ಆಯೋಗ ಸಮೀಕ್ಷೆ ನಡೆಸಿ ಭಾರತ ಸುಮಾರು 600 ದಶಲಕ್ಷ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ ಎಂದು ಹೇಳಿದೆ. ಪ್ರತಿವರ್ಷ ಅಂತರ್ಜಲ ಕುಸಿಯುತ್ತಲೇ ಇದೆ. ಹೀಗಾಗಿ ನೀರನ್ನು ಭೂಮಿಯಲ್ಲಿಯೇ ರಕ್ಷಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಗಂಗಾತೀರದ ಪ್ರದೇಶಗಳಲ್ಲಿಯೇ ಅಂತರ್ಜಲ ಮಟ್ಟ ಕುಸಿದಿದೆ ಎಂದಮೇಲೆ ಇನ್ನು ಒಣಪ್ರದೇಶಗಳ ಗತಿ ಏನು ?. ಅರಣ್ಯನಾಶ, ನಗರೀಕರಣ ಮತ್ತು ಬದಲಾದ ಕೃಷಿ ಪದ್ಧತಿ, ಹೆಚ್ಚಾದ ಆಧುನಿಕ ಯಂತ್ರಗಳ ಬಳಕೆ, ರಾಸಾಯನಿಕ ಗೊಬ್ಬರಗಳ ಅತಿ ಬಳಕೆ ಹಾಗೂ ನೀರಿನ ದುಂದುವೆಚ್ಚ ಮಾಡಲಾಗುತ್ತಿದೆ. ಈ ಅಂಶಗಳ ಬಗ್ಗೆ ಜಾಗೃತಿ ಇಲ್ಲದಿರುವುದು ಅಂತರ್ಜಲ ಮಟ್ಟ ಕುಸಿಯಲು ಕಾರಣ ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ವಿಜ್ಞಾನಿ ಡಾ.ಮಲ್ಲಿಕಾಜರ್ುನ್ ಮಾತನಾಡಿ, ನೀರಿನ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ನಡೆಯುತ್ತಿದೆ. 1256 ಜಿಲ್ಲೆಗಳಲ್ಲಿ ಜಲಕ್ಷಾಮ ಇದ್ದು, ಈ ಭಾಗಗಳಲ್ಲಿ ಜಲಶಕ್ತಿ ಅಭಿಯಾನ ನಡೆಯುತ್ತಿದೆ.
ಏಳು ಕೃಷಿ ವಿಜ್ಞಾನ ಕೇಂದ್ರಗಳು ಅಭಿಯಾನದ ಜತೆ ಕೈ ಜೋಡಿಸಿವೆ. ಅನಾವೃಷ್ಟಿಯಿಂದ ಎರಡೂ ಹಾನಿಯೇ. ನೀರಿನ ಲಭ್ಯತೆ ದೇಶದಲ್ಲಿ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ ನಡೆಯಬಹುದು ಎಂದು ಎಚ್ಚರಿಕೆ ನೀಡಿದರು. ದೇಶದಲ್ಲಿ ಸಮರ್ಪಕವಾಗಿ ಮಳೆ ಬೀಳುತ್ತಿಲ್ಲ. ಒಂದು ದಿನ ಹೆಚ್ಚಾದರೆ ಮತ್ತೊಂದು ದಿನ ತೀರಾಕಡಿಮೆ ಮಳೆಯಾಗುತ್ತಿದೆ. ಹೀಗೆ ಮಳೆಯಲ್ಲಿನ ವ್ಯತ್ಯಾಸ ರೈತರ ಬಾಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ನೀರಿನ ಮಹತ್ವದ ಕುರಿತು ಜಲಶಕ್ತಿ ಆಂದೋಲನ ಜಲಸಾಕ್ಷರತೆ ಮೂಡಿಸುವ ಕೆಲಸವನ್ನು ಕೃಷಿ ವಿಜ್ಞಾನ ಕೇಂದ್ರ ಮಾಡುತ್ತಿದೆ ಎಂದರು.
ಮೇಲ್ಮನೆ ವಿಪಕ್ಷ ಉಪನಾಯಕ ನಾರಾಯಣಸ್ವಾಮಿ, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿದರ್ೆಶಕ ಎಂ.ಜೆ. ಚಂದ್ರೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಚಿವ ಡಿ.ವಿ. ಸದಾನಂದಗೌಡ, ಸ್ಮಶಾನವನ್ನು ಸ್ವಚ್ಛಗೊಳಿಸುವ ಅಭಿಯಾನದಲ್ಲಿ ಪಾಲ್ಗೊಂಡು, ಛಾಯಾಚಿತ್ರಕ್ಕಾಗಿ ಕೆಲಸ ಮಾಡಬಾರದು. ಗಾಂಧಿ ಜಯಂತಿ ಅರ್ಥಪೂರ್ಣವಾಗಬೇಕು ಎಂದರು.