ನಗರಸಭೆಯ ಪೌರಕಾರ್ಮಿಕರ, ವಾಲ್ಮನಗಳ ಆರೋಗ್ಯ ಮಾರಕವಾದ ನೀರಿನ ವಾಲ್ ಗಳು : ರಾಘವೇಂದ್ರ ಪಾಲನಕರ ವಿಷಾದ
Water pipes are a threat to the health of municipal workers and workers: Raghavendra Palanak regrets
ಲೋಕದರ್ಶನ ವರದಿ
ನಗರಸಭೆಯ ಪೌರಕಾರ್ಮಿಕರ, ವಾಲ್ಮನಗಳ ಆರೋಗ್ಯ ಮಾರಕವಾದ ನೀರಿನ ವಾಲ್ ಗಳು : ರಾಘವೇಂದ್ರ ಪಾಲನಕರ ವಿಷಾದ
ಗದಗ 4: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ಕೂಡು ವಾರ್ಡಗಳಾದ 20, 23, ಹಾಗೂ 25 ನೇ ವಾರ್ಡಿನಲ್ಲಿರುವ ಪ್ರಮುಖ ಮಧ್ಯವರ್ತಿ ಸ್ಥಳವಾದ 3 ನೇ ನಂಬರ್ ಶಾಲೆ, ಹಾಗೂ ಹನಮನ ಗರಡಿ ಹತ್ತಿರದಲ್ಲಿರುವ ಸರ್ಕಲ್ ನಲ್ಲಿ ಬಡಾವಣೆಯ ನಾಗರಿಕರಿಗಾಗಿ ತುಂಗಭದ್ರಾ ಕುಡಿಯುವ ನೀರಿನ ಸರಬರಾಜು ಮಾಡುವ ಪ್ರಮುಖ ವಾಲ್ ಇದ್ದು, ಅದಕ್ಕೆ ಹೊಂದಿಕೊಂಡು ಸಾರ್ವಜನಿಕ ಮೂತ್ರಾಲಯ ಇರುತ್ತದೆ. ನಗರದ ನಾಗರಿಕರಿಗೆ ತಮ್ಮ ಮನೆಯಲ್ಲಿನ ತ್ಯಾಜ್ಯ ವಿಲೇವಾರಿಗಾಗಿಯೇ ಎಂದು ಗೌರವಾನ್ವಿತ ನಗರಸಭೆಯಿಂದ ಪ್ರತಿದಿನವೂ ಮನೆ ಮನೆಯ ಹಸಿ ಕಸ ಒಣ ಕಸವನ್ನು ಸಂಗ್ರಹಣೆ ಮಾಡಲು ವಿಶೇಷವಾಗಿ ಕಸ ವಿಲೇವಾರಿ ಮಾಡುವ ವಾಹನದ ಸೌಲಭ್ಯ ಒದಗಿಸಿ ಕೊಟ್ಟಿದ್ದರೂ ಕೆಲವೇ ಕೆಲವು ಬಡಾವಣೆಯ ಪ್ರಜ್ಞಾಹೀನ, ನಾಗರಿಕರು ಮೂತ್ರಾಲಯದ ಪಕ್ಕದಲ್ಲಿನ ನೀರಿನ ವಾಲ್ ಮೇಲೆಯೇ ತಮ್ಮ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಹಾಕುತ್ತಿರುವರು. ಇದರಿಂದ ರೋಗ ರೂಜಿನಗಳಿಗೆ ಅಹ್ವಾನ ನೀಡಿದಂತಾಗಿದೆ.
ಬಡಾವಣೆಯ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ವಾಲ್ಮನಗಳು ಸಂಪೂರ್ಣ ಮಲ, ಮೂತ್ರ ಹಾಗೂ ಸ್ಯಾನಿಟರಿ ಪ್ಯಾಡ್, ಹಾಗೂ ಪ್ಯಾಂಪರ್ಸ ಹಾಗೂ ಇನ್ನಿತರ ಘನ್ ತ್ಯಾಜ್ಯ ಕಸದಲ್ಲಿಯೇ ಇರುವ ನೀರಿನ ವಾಲ್ ತಾನೂ ಕೂಡಾ ಒಬ್ಬ ಗೌರವಯುಕ್ತ ನಾಗರಿಕನಾಗಿಯೂ ಇಂತಹ ಹೇಸಿಗೆಯಲ್ಲಿ ಯಾವುದೇ ಸುರಕ್ಷತಾ ಪರಿಕರಗಳಾದ ಹ್ಯಾಂಡ್ ಗ್ಲೋಸ್, ಮತ್ತು ಮಾಸ್ಕ್ ಇಲ್ಲದೇ ತನ್ನ ದೈನಂದಿನ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿರುವುದರಿಂದ ಅವರಿಗೆ ಅರೋಗ್ಯ ಮಾರಕವಾಗಿ ಪರಿಣಮಿಸಿರುತ್ತದೆ.
ಆದುದರಿಂದ ಗೌರವಾನ್ವಿತ ಗದಗ ಬೆಟಗೇರಿ ನಗರಸಭೆಯಿಂದ ಸದರ 3 ನೇ ನಂಬರ್ ಶಾಲೆ, ಹಾಗೂ ಹನಮನ ಗರಡಿ ಹತ್ತಿರದಲ್ಲಿರುವ ಸರ್ಕಲ್ ನಲ್ಲಿನ ಕುಡಿಯುವ ನೀರಿನ ಸರಬರಾಜು ಮಾಡುವ ಪ್ರಮುಖ ವಾಲ್ ನ್ನು ಪಕ್ಕದಲ್ಲಿನ ಬೇರೆ ಸ್ಥಳದಲ್ಲಿ ಸ್ಥಳಾಠರಗೊಳಿಸಿ ಪೌರಕಾರ್ಮಿಕರಾದ ವಾಲ್ಮನ್ ಗಳ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕೆಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಸಮಸ್ತ ನಾಗರಿಕರ ಹಿತದೃಷ್ಟಿಯಿಂದ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.
ಬಾಕ್ಸ್
ತಿಪ್ಪೆಯಲ್ಲಿರುವ ಕುಡಿಯುವ ನೀರಿನ ಸರಬರಾಜಿನ ವಾಲ್ ಸ್ಥಳ ಬದಲಾವಣೆ ಮಾಡಿ : ರಾಘವೇಂದ್ರ ಪಾಲನಕರ
ನಗರದ 23 ನೇ ವಾರ್ಡಿನಲ್ಲಿರುವ ಪ್ರಮುಖ ಮಧ್ಯವರ್ತಿ ಸ್ಥಳವಾದ 3 ನೇ ನಂಬರ್ ಶಾಲೆ, ಹಾಗೂ ಹನಮನ ಗರಡಿ ಹತ್ತಿರದ ಸರ್ಕಲ್ ನಲ್ಲಿರುವ ತುಂಗಭದ್ರಾ ಕುಡಿಯುವ ನೀರಿನ ಸರಬರಾಜು ವಾಲ್ ಮಲ ಮೂತ್ರ ಮಿಶ್ರಿತ ತಿಪ್ಪೆಯಲ್ಲಿರುವುದನ್ನು ಸ್ಥಳ ಬದಲಾವಣೆ ಮಾಡಿ ನಗರದಲ್ಲಿನ ನಾಗರಿಕರ, ನೀರು ಸರಬರಾಜು ಮಾಡುವ ವಾಲ್ಮನ್ ಗಳ ಆರೋಗ್ಯಕಾಪಾಡಲು ನಗರಸಭೆಯು ಮುಂದಾಗಬೇಕು.
ರಾಘವೇಂದ್ರ ಪಾಲನಕರ ನ್ಯಾಯವಾದಿ ಹಾಗೂ
ಸಾಮಾಜಿಕ ಕಾರ್ಯಕರ್ತರು ಗದಗ.
ಫೋ:-9986497452.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 