ನೀರು ಜೀವ ಸಂಕುಲಕ್ಕೆ ಮೂಲ ಆಧಾರ: ವಾರದ
Water is the basic basis for life: Weekly
ನೇಸರಗಿ 23: ನೀರು ಅತ್ಯಮೂಲ್ಯ ನೈಸರ್ಗಿಕ ಸಂಪತ್ತು, ನೀರು ಜೀವ ಸಂಕುಲಕ್ಕೆ ಮೂಲ ಆಧಾರವಾಗಿದ್ದು, ಜೀವಿತ ಜೀವಕೋಶವು ಪ್ರತಿಶತ 70 ರಷ್ಟು ನೀರನ್ನು ಹೊಂದಿದೆ. ಮನುಷ್ಯನ ದೇಹದ ಮೂರರಲ್ಲಿ ಎರಡು ಭಾಗ ಹಾಗೂ ಮೆದುಳಿನ ಮುಕ್ಕಾಲು ಭಾಗ ನೀರಿನಿಂದ ಕೂಡಿದೆ. ಹಸಿರು ಮರಗಳಲ್ಲಿ ಶೇಕಡಾ ಎಪ್ಪತ್ತೈದು ಭಾಗ ನೀರು ಇರುತ್ತದೆ. ಮನುಷ್ಯ ಆಹಾರ ಇಲ್ಲದೇ ಒಂದು ತಿಂಗಳು ಬದುಕಬಲ್ಲ, ಆದರೆ ನೀರಿಲ್ಲದೇ ಏಳು ದಿನಕ್ಕಿಂತ ಹೆಚ್ಚು ಬದುಕಲಾರ ಎಂದು ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಹೇಳಿದರು.
ಅವರು ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿ. 23 ರಂದು ಆಯೋಜಿಸಲಾದ ವಿಶ್ವ ಜಲ ದಿನಾಚರಣೆಯಲ್ಲಿ ನೀರು ನಿರ್ವಹಣೆ ಕುರಿತು ಉಪನ್ಯಾಸ ನೀಡಿ, ಭೂಮಿಯ ಮೇಲೆ ಶೇಕಡಾ 97 ರಷ್ಟು ಉಪ್ಪು ನೀರಿದ್ದು, ಕೇವಲ ಶೇಕಡಾ 2.5 ರಷ್ಟು ಮಾತ್ರ ಸಿಹಿ ನೀರು ಇದೆ.
ಭೂಮಿಯ ಮೇಲೆ ದೊರೆಯುವ ಒಟ್ಟು ಸಿಹಿ ನೀರಿನಲ್ಲಿ ಶೇಕಡಾ 70 ರಷ್ಟು ಕೃಷಿಗೆ ಉಪಯೋಗಿಸಲ್ಪಡುತ್ತದೆ. ಜಾಗತಿಕ ಮಟ್ಟದಲ್ಲಿ ಸುಮಾರು 100 ಕೋಟಿ ಜನರು ಕುಡಿಯುವ ನೀರಿಗಾಗಿ ಮೂರು ತಾಸಿಗಿಂತ ಹೆಚ್ಚಿಗೆ ದೂರ ನಡೆಯಬೇಕಾಗಿದೆ. ಈಗಲೂ ಸಹ ಸುಮಾರು 100 ಕೋಟಿ ಜನರಿಗೆ ನಿರ್ದಿಷ್ಟವಾದ ಸ್ವಚ್ಛ ನೀರಿನ ಲಭ್ಯತೆ ಇಲ್ಲ. ಭಾರತ ದೇಶವು ವಿಶ್ವದ ಶೇಕಡಾ 17 ರಷ್ಟು ಜನಸಂಖ್ಯೆಯನ್ನು ಹೊಂದಿರುವುದು.
ಅಲ್ಲದೇ ವಿಶ್ವದ ಶೇಕಡಾ 4 ರಷ್ಟು ಸ್ವಚ್ಛ ನೀರಿನ ಸಂಪನ್ಮೂಲ ಹೊಂದಿದ್ದು, ಸ್ವಚ್ಛ ನೀರನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ವಿಶ್ವದಲ್ಲಿ ನಾಲ್ಕನೇಯ ಸ್ಥಾನದಲ್ಲಿರುವುದು. ಆದಾಗ್ಯೂ ಕೂಡ ದೇಶವು ಇಂದು ನೀರಿನ ಕೊರತೆಯಿಂದ ಬಳಲುತ್ತಿದೆ. ಅಲ್ಲದೇ, ಬಿದ್ದ ಮಳೆ ನೀರಿನಲ್ಲಿ ಶೇಕಡಾ 8 ರಷ್ಟನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ದೇಶವು ನೀರಿನ ಸಂರಕ್ಷಣೆ ಮತ್ತು ನೀರಿನ ಕೊಯ್ಲಿನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ..
ಆದ್ದರಿಂದ, ಒಣ ಬೇಸಾಯದಲ್ಲಿ ಬೀಳುವ ಮಳೆ ನೀರನ್ನು ಯಶಸ್ವಿಯಾಗಿ ಬಳಸಿಕೊಂಡು ಖುಷ್ಕಿ ಬೆಳೆಗಳ ಇಳುವರಿ ಹೆಚ್ಚಿಸಲು ಹಾಗೂ ಮಣ್ಣು ಕೊಚ್ಚಣೆಯನ್ನು ತಡೆಯಲು ಹಾಗೂ ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವುದು ಅವಶ್ಯಕವಾಗಿದೆ. ಈ ಗುರಿ ಸಾಧಿಸಲು ರೈತರು ಬದುಗಳ ನಿರ್ಮಾಣ ಮಾಡಬೇಕು, ಚೌಕು ಮಡಿಗಳನ್ನು ಮಾಡಬೇಕು, ನಂತರ ಇಳುಕಲಿಗೆ ಅಡ್ಡಲಾಗಿ ಉಳುಮೆ ಮಾಡಬೇಕು. ಈ ಕ್ರಮಗಳಿಂದ ಭೂಮಿಯಲ್ಲಿ ನೀರು ಇಂಗುವಿಕೆ ಅಧಿಕಗೊಂಡು ತೇವಾಂಶ ಕಾಪಾಡಿಕೊಳ್ಳಬಹುದು.
ಹರಿದು ಹೋಗುವ ನೀರನ್ನು ಕೃಷಿ ಹೊಂಡಗಳಲ್ಲಿ ಶೇಖರಿಸಿ ಪುನರ್ಬಳಕೆ ಮಾಡುಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ ಹಾಗೂ ಡಾ. ಗುರುರಾಜ ಕೌಜಲಗಿ, ಸಿಬ್ಬಂದಿಗಳಾದ ವಿನೋದ ಕೋಚಿ, ಶಂಕರಗೌಡ ಪಾಟೀಲ ಹಾಗೂ ಮಂಜುನಾಥ ಪಿ. ಐ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತೆನಿಕೊಳ್ಳ ಕೆಎಲ್‌ಇ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 