ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ

ಲೋಕದರ್ಶನ ವರದಿ

ಬೈಲಹೊಂಗಲ 09:  ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ ಇದನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

    ಅವರು ತಾಲೂಕಿನ ಬೈಲವಾಡ ಗ್ರಾಮದಲ್ಲಿ ಶನಿವಾರ  ಪ್ಯಾಸ್ ಪೌಂಡೇಶನನಿಂದ ಪುನರುಜ್ಜಿವನಗೊಳಿಸಲಾದ ಕೆರೆಯನ್ನು ಬೈಲವಾಡ ಗ್ರಾಮದ ನಾಗರೀಕರಿಗೆ ಹಸ್ತಾಂತರಗೊಳಿಸಿ ಮಾತನಾಡಿ,  ನೀರು ಮುಗಿದು ಹೋಗುವ ಸಂಪನ್ಮೂಲ, ಸಕಲ ಜೀವಿಗಳಿಗೂ ನೀರು ಅತ್ಯಗತ್ಯ.  ನೀರು ದೇವರು ಕೊಟ್ಟ ಕಾಣಿಕೆ .ಈ  ಅಮೂಲ್ಯ ಜೀವದ್ರವ್ಯ ಕಾಪಾಡುವುದು ಎಲ್ಲರ ಹೊಣೆ ಎಂದರು.

        ನಾವು ನಿಜವಾದ ಭಾರತವನ್ನು ನೋಡಬೇಕಾದರೆ ಅದು ಹಳ್ಳಿಗಳಲ್ಲಿ ಮಾತ್ರ. ಎಲ್ಲ ಸುಖ ಇರೊದು ಹಳ್ಳಿಗಳಲ್ಲಿ ಮಾತ್ರ. ಅಲ್ಲಿನ  ಗುಡ್ಡಬೆಟ್ಟಗಳು, ಕೆರೆ ಕಟ್ಟೆಗಳು, ಹಳ್ಳಿ ಜನರ ಮನಸ್ಥಿತಿಯಲ್ಲಿ ಎಲ್ಲ ಸುಖ ಅಡಗಿದೆ. ನೀರು ಕೇಳಿದರೆ ಹಾಲು ಕೊಡುವ ಸಂಸ್ಕೃತಿ ಇದ್ದರೆ ಅದು ಭಾರತದ ಹಳ್ಳಿಗಳಲ್ಲಿ ಮಾತ್ರ ಎಂದರು.

    ಕೇಂದ್ರ ರೇಲ್ವೇ  ಸಚಿವ ಸುರೇಶ ಅಂಗಡಿ ಮಾತನಾಡಿ, ಪ್ಯಾಸ್ ಪೌಂಡೇಶನ್ ಅವರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಬರುವ ದಿನಗಳಲ್ಲಿ ಸರ್ಕಾರದಿಂದ  ಸಹಕಾರ ನೀಡಲಾಗವುದು ಎಂದರು.

    ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಗ್ರಾಪಂ.ಅಧ್ಯಕ್ಷೆ ದ್ರಾಕ್ಷಯಿಣಿ ಗಿರೇಪ್ಪಗೌಡರ, ವಿಜಯ ಮೆಟಗುಡ್ಡ,  ರಮೇಶ ಮುದುಕನಗೌಡರ, ವೀರನಗೌಡ ಗಿರೆಪ್ಪಗೌಡರ,  ಮಂಜು ಹುಚ್ಚನ್ನವರ, ಅನಿಲ ಮೇಕಲಮಡರ್ಿ, ಎಸ್.ವ್ಹಿ.ಪಾಟೀಲ, ಪ್ಯಾಸ್ ಪೌಂಡೇಶನ್ ಅಧ್ಯಕ್ಷ ಡಾ.ಮಹಾದೇವ ಪ್ರಭು, ಡಾ. ಪ್ರೀತಿ ದೊಡವಾಡ, ಶಂಕರ ಸಂಪಗಾಂವ, ಶಂಕರ ಮಧಲಭಾಂವಿ, ಸಂಜಯ ಗಿರೇಪ್ಪಗಗೌಡರ ಹಾಗೂ ಗ್ರಾಮಸ್ಥರು ಇದ್ದರು.