ಮಾರಕಾಸ್ತ್ರಗಳಿಂದ ಬೆದರಿಸಿ ಗೋದಾಮು ದರೋಡೆ

ಬೆಂಗಳೂರು, ಫೆ.1 :    ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಹೆದರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಸೀಗೆಹಳ್ಳಿ ಗೇಟ್ ಬಳಿ ನಡೆದಿದೆ. 

ಗೋದಾಮಿಗೆ ನುಗ್ಗಿ ಮಂಜುನಾಥ್ ಎಂಬುವವರನ್ನು ಲಾಂಗ್, ಮಚ್ಚು ತೋರಿಸುವ ಮೂಲಕ ಹೆದರಿಸಿ ದರೋಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಎರಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ನಾಲ್ವರು ಗೋದಾಮಿನ ಶೇಟರ್ ಮುಚ್ಚಿ ಮಂಜುನಾಥ್ ಅವರ ಬಳಿಯಿದ್ದ 2 ಲಕ್ಷ ರೂ, ಚಿನ್ನಾಭರಣ ದೋಚಿದ್ದಾರೆ. ಅಲ್ಲದೇ,  ಮಂಜುನಾಥ್ ಅವರನ್ನು ವಿವಸ್ತ್ರಗೊಳಿಸಿ, ಪೆಪ್ಪರ್ ಸ್ಪ್ರೆ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.