ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025 ರ ವಖ್ಫ್‌ ಕಾಯಿದೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025 ರ ವಖ್ಫ್‌ ಕಾಯಿದೆ   Waqf Act 2025 enacted by Central Govt

ಹೊಸಪೇಟೆ 03: ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025 ರ ವಖ್ಫ್‌  ಕಾಯಿದೆಯನ್ನು  ವಿರೋಧಿಸಿ ವಿಜಯನಗರ ಜಿಲ್ಲೆಯ ಎಲ್ಲಾ ಮುಸ್ಲಿಂ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಹಾಗೂ ಮುಸ್ಲಿಂ ಬಾಂಧವರಿಂದ  ಶಾಂತಿಯುತವಾಗಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ  ಭಾರತ ಗಣರಾಜ್ಯದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಹೊಸಪೇಟೆಯ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ  ಹೆಚ್ ಏನ್ ಮೊಹಮ್ಮದ್ ಇಮಾಮ ನಿಯಾಜ್ ರವರು ಮಾತನಾಡಿ 2025ರ ವಖ್ಫ್‌ ಕಾಯ್ದೆ ಕಾಯ್ದೆಯು ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದ್ದು ಈ ಒಂದು ತಿದ್ದುಪಡಿಗಳು ಸಂವಿಧಾನದ 14, 25, 26 ಮತ್ತು 29ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿರುತ್ತದೆ ಹಾಗು ವಖ್ಫ್‌ ಮಂಡಳಿ ಮತ್ತು ಕೇಂದ್ರ ವಖ್ಫ್‌ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಸದಸ್ಯರಾಗಿರಬೇಕು ಎಂಬ ನಿಯಮವನ್ನು ಕೊನೆಗಾಣಿಸಲಾಗಿದೆ 

ವಖ್ಫ್‌ ಕಾಯಿದೆ 2025 ರ ಕಾಯಿದೆ ಹಿಂಪಡೆಯುವವರೆಗೂ ಕೇವಲ ವಿಜಯನಗರ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇಡೀ  ದೇಶದಾದ್ಯಂತ ಹಾಗೂ ಎಲ್ಲಾ ರಾಜ್ಯಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತೇವೆ. ಹಾಗೂ ಇದೇ ಶುಕ್ರವಾರ ವಿಜಯನಗರ ಕ್ಷೇತ್ರದ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿರುವ  2025 ರ ವಖ್ಫ್‌  ಕಾಯಿದೆ ಯನ್ನು  ಹಿಂಪಡೆಯಬೇಕೆಂದು ಹೋರಾಟ ಮಾಡುತ್ತೇವೆ. ಆನಂತರವು ಕಾಯ್ದೆಯನ್ನು ಹಿಂಪಡೆಯದೇ ಹೋದರೆ ಅಥವಾ  ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಮುಂದಿನ ದಿನಗಳಲ್ಲಿ  ದೇಶದಾದ್ಯಂತ  ಉಗ್ರ ಹೋರಾಟ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.. 

ಈ ಒಂದು ಮನವಿ ಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಜಮಾತ್ ಈ ಇಸ್ಲಾಂನ ಸಮಿತಿಯ ವಿಜಯನಗರ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಏಜಾಜ್ ಮುಲ್ಲಾರವರು ಹಾಗೂ ಜಮಾತ್ ಎ ಇಸ್ಲಾಮಿಕ್ ಹಿಂದ್ ನ ವಿಜಯನಗರ ಜಿಲ್ಲಾಧ್ಯಕ್ಷರಾದ ಸೈಯದ್ ನಾಜಿಮುದ್ದೀನ್ ರವರು ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್, ಕಾರ್ಯದರ್ಶಿಗಳಾದ ಎಮ್‌. ಡಿ. ಅಬೂಬಕ್ಕರ್, ಖಾಜಾಂಚಿಗಳಾದ ಜಿ. ಅನ್ಸರ್ ಭಾಷ, ಸಹ ಕಾರ್ಯದರ್ಶಿಗಳಾದ ಡಾಽಽ ಎಮ್‌. ಡಿ. ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಹುಸೇನ್, ಎಲ್‌. ಗುಲಾಮ್ ರಸೂಲ್ ಹಾಗು ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು  ಭಾಗವಹಿಸಿದ್ದರು.