ಸೂಡಾನ್ ಗೂ ಕಾಲಿಟ್ಟ ಮಹಾಮಾರಿ ಕರೋನ ಸೋಂಕು

ಜುಬಾ, ಎಪ್ರಿಲ್ 6, ಸೂಡಾನ್ ನಲ್ಲಿ  ಮೊದಲ ಕರೋನ ಸೋಂಕು ಪ್ರಕರಣ ದೃಡಪಟ್ಟಿದೆ ಎಂದು  ಆರೋಗ್ಯ ಸಚಿವಾಲಯ  ಸೋಮವಾರ ತಿಳಿಸಿದೆ. ಮೃತಪಟ್ಟ ರೋಗಿ  29 ವರ್ಷದ ಮಹಿಳೆ ನೆದರ್ಲ್ಯಾಂಡ್ಸ್ನಿಂದ ಕಳದೆ  ಫೆಬ್ರವರಿ ಯಲ್ಲಿ  ಆಡಿಸ್ ಅಬಾಬಾ ಮೂಲಕ ಬಂದಿದ್ದರು ಎನ್ನಲಾಗಿದೆ. ರೋಗಿಯು ಜ್ವರ, ಕೆಮ್ಮು, ತಲೆನೋವು ಮತ್ತು ಉಸಿರಾಟದ ತೊಂದರೆಯಿಂದ  ಬಳಲುತ್ತಿದ್ದರು ನಂತರ ಅವರಿಗೆ  ಸೋಂಕು ಇರುವುದು  ಪ್ರಯೋಗಾಲದ ವರದಿಯ ನಂತರ ದೃಡಪಟ್ಟಿದ್ದು ಸಾವಿಗೆ ಕಾರಣವಾಗಿದೆ ದಕ್ಷಿಣ ಸುಡಾನ್‌ನಲ್ಲಿ ಇದು  ಮೊದಲ ಪ್ರಕರಣವಾಗಿದೆ. ಕರೋನ ಅನೇಕ  ದೇಶಗಳಿಗೆ ವ್ಯಾಪಿಸುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.