ಮೊದಲನೇ ಪಂದ್ಯದಲ್ಲೇ ವೇಡ್ ಕನಸು ನನಸಾಯಿತು

 ದುಬೈ, ಆ 5   ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಶತಕ ಬಾರಿಸುವ ಕನಸು ನನಸಾಯಿತು ಎಂದು ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮ್ಯಾಥ್ಯು ವೇಡ್ ಸಂತಸ ವ್ಯಕ್ತಪಡಿಸಿದ್ದಾರೆ.  ಭಾನುವಾರ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಯ ದ್ವಿತೀಯ ಇನಿಂಗ್ಸ್ನಲ್ಲಿ ಮ್ಯಾಥ್ಯು ವೇಡ್ ಅವರು 143 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ ಶತಕ (110 ರನ್) ಸಿಡಿಸಿದ್ದರು. ಇದು ಅವರ ಟೆಸ್ಟ್ ವೃತ್ತಿ ಜೀವನದಲ್ಲಿ ಮೂರನೇ ಶತಕವಾಗಿದೆ. ಆ್ಯಶಸ್ ಸರಣಿ ಆಡಬೇಕೆಂಬ ಕನಸು ಇದೀಗ ನನಸಾಗಿದೆ. ಅದರಲ್ಲೂ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದು ಹೆಚ್ಚು ಸಂತಸ ತಂದು ಕೊಟ್ಟಿದೆ. ಮೊದಲ  ಟೆಸ್ಟ್ ಪಂದ್ಯ ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದು ಹೇಳಿರುವುದನ್ನು ಐಸಿಸಿ ವೆಬ್ಸೈಟ್ ವರದಿ ಮಾಡಿದೆ. ಇಲ್ಲಿ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿ ಆಡುತ್ತಿರುವುದು ಹೆಮ್ಮೆ ತಂದುಕೊಟ್ಟಿದೆ. ಆಸ್ಟ್ರೇಲಿಯಾ ಎ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ಹಿರಿಯ ತಂಡಕ್ಕೆ ಆಯ್ಕೆಯಾಗುವಂತೆ ಹೇಳಿದ್ದರು. ಅದೇ ರೀತಿ ತಂಡಕ್ಕೆ ಆಯ್ಕೆಯಾದೆ, ಅಲ್ಲದೇ, ಶತಕ ಸಿಡಿಸಿದ್ದು ಹೆಮ್ಮೆ ತಂದಿದೆ ಎಂದು ಹೇಳಿದರು.  ಭಾನುವಾರ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ನಲ್ಲಿ ಏಳು ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಇಂಗ್ಲೆಂಡ್ಗೆ 398 ರನ್ ಗುರಿ ನೀಡಿತು. ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಾಲ್ಕನೇ ದಿನದ ಮುಕ್ತಾಯಕ್ಕೆ ಏಳು ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದ್ದು, ಇನ್ನೂ 385 ರನ್ ಅಗತ್ಯವಿದೆ.