ಬೆಂಗಳೂರು,ಮಾ. 5 ,ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆಯೊಬ್ಬಳು 8 ಕೋಟಿ ರೂ ವಂಚಿಸಿ ಪರಾರಿಯಾಗಿರುವ ಘಟನೆ ಬಸವನಪುರದಲ್ಲಿ ನಡೆದಿದೆ.ಹಲವು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದ ಬಸವನಪುರದ ಮಂಜುಳಾ ಎಂಬ ಮಹಿಳೆ, ಸುಮಾರು ನೂರಕ್ಕೂ ಹೆಚ್ಚು ಜನರ ಬಳಿ 8 ಕೋಟಿ ರೂಕ್ಕಿಂತ ಅಧಿಕ ಹಣ ಚೀಟಿ ಕಟ್ಟಿಸಿಕೊಂಡು ಪರಾರಿಯಾಗಿದ್ದಾಳೆ.ಮಂಜುಳಾ, ಮೊದಲು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಬಳಿಕ ಚೀಟಿ ವ್ಯವಹಾರ ಆರಂಭಿಸಿ ಮೊದಲು ಗಾರ್ಮೆಂಟ್ಸ್ ನಲ್ಲಿ ಪರಿಚಯವಿದ್ದ ಮಹಿಳೆಯರಿಂದ ಚೀಟಿ ಹಾಕಿಸಿಕೊಂಡಿದ್ದಳು.ಮೊದ ಮೊದಲು ಚೀಟಿ ಹಣವನ್ನು ಕಾಲ ಕಾಲಕ್ಕೆ ನೀಡುವ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಂಡಿದ್ದಳು. ಹೀಗಾಗಿ ಹೆಚ್ಚಾಗಿ ಗಾರ್ಮೆಂಟ್ಸ್ ನೌಕರರು, ಆಟೋ ಡ್ರೈವರ್, ದಿನಗೂಲಿ ನೌಕರರು ಚೀಟಿ ಹಾಕಿದ್ದರು ಎಂದು ತಿಳಿದು ಬಂದಿದೆ.ಮಂಜುಳಾ ತಾನು ಖರೀದಿಸಿದ್ದ ಮನೆಯನ್ನೂ ಮಾರಿಕೊಂಡು ಪರಾರಿಯಾಗಿದ್ದಾಳೆ. ಈ ಹಿನ್ನಲೆಯಲ್ಲಿ ವಂಚನೆಗೊಳಗಾದವರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಂಜುಳಾ ವಿರುದ್ಧ ದೂರು ದಾಖಲಿಸಿಕೊಂಡು.ಸದ್ಯ ಪೊಲೀಸರು ಮಂಜುಳಾ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ