ವಿಜಯಪುರ, ಡಿ. 18: ಡಿಸೆಂಬರ್ 22 ರಂದು ರವಿವಾರ ನಗರದಲ್ಲಿ ನಡೆಯುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳುತ್ತಿರುವ ಓಟಗಾರರಿಗೆ ನೀಡಲಾಗುವ ಮೆಡಲ್ ಗಳು ಮತ್ತು ಐತಿಹಾಸಿಕ ಗೋಳಗುಮ್ಮಟಕ್ಕೆ ಅಳವಡಿಸಲಾಗಿರುವ ಸೋಲಾರ ವಿದ್ಯುತ್ ದೀಪಾಲಂಕಾರ ಈ ಬಾರಿಯ ಓಟದ ಆಕರ್ಷಣೆಯ ಕೇಂದ್ರವಾಗಿವೆ.
ಜನಮನ ಸೆಳೆಯುತ್ತಿರುವ ಮೆಡಲ್ ಗಳು
ಈ ಮಧ್ಯೆ ಹೆರಿಟೇಜ್ ರನ್ ನಲ್ಲಿ ಈಗಾಗಲೇ ಹೆಸರು ನೋಂದಾಯಿಸಿರುವ ಪ್ರತಿಯೊಬ್ಬ ಓಟಗಾರರಿಗೆ ಈ ಬಾರಿಯೂ ಪದಕಗಳನ್ನು ನೀಡಲಾಗುತ್ತಿದ್ದು, ಈ ಪದಕಗಳೂ ಕೂಡ ಈಗ ಆಕರ್ಷಣೀಯವಾಗಿವೆ. ಮೆಡಲ್ ನ ಒಂದು ಬದಿಯಲ್ಲಿ ಪರಿಸರದಲ್ಲಿ ತಮ್ಮನ್ನು ಕಾಣಬೇಕು ಎಂದು ಹೇಳಿರುವ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಭಾವಚಿತ್ರವಿದೆ. ಮತ್ತೊಂದು ಬದಿಯಲ್ಲಿ ವೃಕ್ಷದ ಚಿತ್ರವಿದೆ. ಈ ಕಾರ್ಯಕ್ರಮದ ಮೂಲಕ ಶ್ರೀಗಳಿಗೆ ಗೌರವ ಸಮರ್ಿಸಲಾಗುತ್ತಿದೆ.
21 ಕಿ. ಮೀ. ಓಟಗಾರರಿಗೆ ಚಿನ್ನದ ಬಣ್ಣದ ಮೆಡಲ್, 10 ಕಿ. ಮೀ. ಓಟಗಾರರಿಗೆ ಕಂಚಿನ ಬಣ್ಣದ ಮೆಡಲ್ ಮತ್ತು 5 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿರುವರಿಗೆ ಕಂದು ಬಣ್ಣದ ಮೆಡಲ್ ನೀಡಲಾಗುತ್ತಿದೆ ಎಂದು ಮೆಡಲ್ ಸಮಿತಿಯ ಡಾ. ಪ್ರವೀಣ ಚೌರ ಮತ್ತು ಸಮೀರ್ ಬಳಿಗಾರ ತಿಳಿಸಿದ್ದಾರೆ.
ವಿಜಯಪುರಕ್ಕೆ ಬರುವ ಓಟಗಾರರಿಗೆ ಗೋಳಗುಮ್ಮಟ ವೀಕ್ಷಣೆಗೆ ಉಚಿತ ವ್ಯವಸ್ಥೆ
ಈ ಮಧ್ಯೆ ಹೆರಿಟೆಜ್ ರನ್ ನಲ್ಲಿ ಪಾಲ್ಗೋಳ್ಳಲು ಆಗಮಿಸುತ್ತಿರುವ ಓಟಗಾರರಿಗೆ ಡಿಸೆಂಬರ್ 21 ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಸಚಿವರಿಂದ ಗೋಳಗುಮ್ಮಟ ವಿದ್ಯುತ್ ದೀಪಾಲಂಕಾರ ಉದ್ಘಾಟನೆ
ಈ ಮಧ್ಯೆ, ಪ್ರವಾಸೋದ್ಯಮ ಇಲಾಖೆ ಸಿ.ಎಸ್.ಆರ್. ಅನುದಾನದಲ್ಲಿ ಐತಿಹಾಸಿಕ ಗೋಳಗುಮ್ಮಟಕ್ಕೆ ಸೋಲಾರ್ ವಿದ್ಯುತ್ ದೀಪಾಲಂಕಾರ ಅಳವಡಿಸಿದೆ. ಸಚಿವ ಎಂ. ಬಿ. ಪಾಟೀಲ ಅವರು ಡಿಸೆಂಬರ್ 21 ರಂದು ಸಂಜೆ 6 ಗಂಟಗೆ ಈ ವಿದ್ಯುತ್ ದೀಪಾಲಂಕಾರವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತೆ ವೃಕ್ಷ ಅಭಿಯಾನ ಪ್ರತಿಷ್ಠಾನ ನೀಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಕೋರಲಾಗಿದೆ.