ಡಿ. 22 ರಂದು ವೃಕ್ಷೋಥಾನ್ ಹೆರಿಟೇಜ್ ರನ್‌- 2024: ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನ

Vrikshothan Heritage Run on 22- 2024: Art Exhibition by Cultural Troupes

ವಿಜಯಪುರ, ಡಿ. 17: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಜಾಗೃತಿ ಮತ್ತು ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಡಿಸೆಂಬರ್ 22 ರಂದು ನಗರದಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್‌- 2024 ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನ ನೀಡಲಿದ್ದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿವೆ.   

ಓಟ ನಡೆಯಲಿರುವ ಡಿಸೆಂಬರ್ 22 ರಂದು ರವಿವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಈ ಕಲಾ ತಂಡಗಳು 17 ನಾನಾ ಭಾಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತ ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಿವೆ.   

ವೃಕ್ಷೊಥಾನ್ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಣ್ಯರು ಈ ಕಲಾ ತಂಡಗಳಿಗೆ ಮಾರ್ಗದರ್ಶನ ಮಾಡುತ್ತಿದ್ದು, ಒಟ್ಟಾರೆ ಸುಮಾರು 150ಕ್ಕೂ ಕಲಾವಿದರು ಈ ತಂಡಗಳಲ್ಲಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಸಾಂಸ್ಕತಿಕ ವಿಭಾಗದ ಶಿವನಗೌಡ ಪಾಟೀಲ ಮತ್ತು ಸೋಮು ಮಠ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.   

ಕಲಾ ತಂಡಗಳು ಮತ್ತು ಅವುಗಳು ಓಟಗಾರರಿಗೆ ಸ್ಪೂರ್ತಿ ತುಂಬಲು ನಿಗದಿ ಪಡಿಸಿರುವ ಸ್ಥಳದ ಮಾಹಿತಿ ಇಲ್ಲಿದೆ.   

1. ಡಾ. ಬಿ. ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಒಳ ಆವರಣ: ಜುಂಬಾ ಡ್ಯಾನ್ಸ್‌(ಬಿ.ಎಲ್‌.ಡಿ.ಇ ವಿದ್ಯಾರ್ಥಿಗಳು ಮತ್ತು ನವೀನ ಪಾಟೀಲ ಅವರ ತಂಡದ ವತಿಯಿಂದ)  

2. ಡಾ. ಬಿ. ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಓಟ ಪ್ರಾರಂಭ ಸ್ಥಳ: ಕಾಖಂಡಕಿ ಬಾಜಾ ತಂಡ(ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ)  

3. ಕನಕದಾಸ ವೃತ್ತ: ಗೊಂಬೆ ಕುಣಿತ(ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ)  

4. ದರಬಾರ ಹೈಸ್ಕೂಲ್ ಮುಂಭಾಗ: ಚಿಯರ್ ಅಪ್ ನೃತ್ಯ(ಸನ್ನಿ ಗವಿಮಠ ಮತ್ತು ತಂಡ ವತಿಯಿಂದ)  

5. ಕಲ್ಯಾಣಶೆಟ್ಟಿ ವೃತ್ತ, ಗೋಲಗುಮ್ಮಟ ರಸ್ತೆ: ತಾಶಾ ಬ್ಯಾಂಜೋ ವಾದನ(ಡಾ. ಶಂಕರಗೌಡ ಪಾಟೀಲ ಪರಿವಾರ ವತಿಯಿಂದ)  

6. ಗೋಳಗುಮ್ಮಟ ಆವರಣ: ಕೇರಳ ಮಹಿಳಾ ತಂಡದಿಂದ ತಾಶಾವಾದನ ಮತ್ತು ಹುಲಿಕುಣಿತ (ಉಪಮೇಯರ ದಿನೇಶ ಹಳ್ಳಿ ವತಿಯಿಂದ)  

7. ಬಸವೇಶ್ವರ ವೃತ್ತ: ನರಗುಂದ ಮಹಿಳಾ ತಂಡದಿಂದ ಡೊಳ್ಳು ಕುಣಿತ(ಅರುಣ ಹುಂಡೆಕಾರ ವತಿಯಿಂದ)  

8. ಗಾಂಧಿ ವೃತ್ತ: ಚಿಯರ್ ಅಪ್ ನೃತ್ಯ(ಡಾ. ಪ್ರಭುಗೌಡ ಪಾಟೀಲ, ಅನುಗ್ರಹ ಆಸ್ಪತ್ರೆ ವತಿಯಿಂದ)  

9. ಶಿವಾಜಿ ವೃತ್ತ: ಹಲಗೆವಾದನ(ಉಮೇಶ ವಂದಾಲ ವತಿಯಿಂದ)  

10. ವಾಟರ್ ಟ್ಯಾಂಕ್ ವೃತ್ತ: ಚಿಯರ್ ಅಪ್ ನೃತ್ಯ(ಎಪಿ ಗ್ರುಪ್ ವತಿಯಿಂದ)  

11. ಇಬ್ರಾಹಿಂ ರೋಜಾ ಮುಂಭಾಗ: ಚಿಯರ್ ಅಪ್ ಸಾಂಗ್(ಈದ್ಗಾ ಸಮಿತಿ ವತಿಯಿಂದ)  

12. ಸೈನಿಕ ಶಾಲೆಯ ಆವರಣ: ಬ್ಯಾಂಡ್ ವಾದನ(ಸೈನಿಕ ಶಾಲೆಯ ವತಿಯಿಂದ)  

13. ಸೋಲಾಪುರ ರಸ್ತೆ ಸವಿ ವಾಟರ್ ಸರ್ಕಲ್‌: ಪುಷ್ಪಗಳ ಮೂಲಕ ಚಿಯರ್ ಅಪ್(ಸವಿ ವಾಟರ್ ವತಿಯಿಂದ)  

14. ಬಿ.ಎಲ್‌.ಡಿ.ಇ ವೈದ್ಯಕೀಯ ಕಾಲೇಜು ಆವರಣ: ಚಿಯರ್ ಅಪ್(ಬಿ.ಎಲ್‌.ಡಿ.ಇ ವೈದ್ಯಕೀಯ ವಿದ್ಯಾರ್ಥಿಗಳಿಂದ)  

15. ಬಿ.ಎಲ್‌.ಡಿ.ಇ ಎಂಜಿನಿಯರಿಂಗ್ ಕಾಲೇಜು: ಡಿಜೆ ಸೌಂಡ್(ಕೆ.ಎ-28 ವತಿಯಿಂದ)  

16. ಜ್ಞಾನಯೋಗಾಶ್ರಮ ಆವರಣ: ವಚನ ಗಾಯನ( ಸಂತನೆಂದರೆ ಯಾರು ವಚನ ಗಾಯನ)  

17. ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣ: ಡೊಳ್ಳು ಕುಣಿತ(ಶ್ರೀ ಸಿದ್ಧೇಶ್ವರ ಸಂಸ್ಥೆ ವತಿಯಿಂದ)