ವೃಕ್ಷಥಾನ್ ಹೆರಿಟೇಜ್ ರನ್‌-2024: 13 ಕಡೆಗಳಲ್ಲಿ ಹೈಡ್ರೇಶನ್ ಪಾಯಿಂಟ್

Vriksathon Heritage Run-2024: Hydration Point at 13 Places

ವಿಜಯಪುರ, ಡಿ. 18 : ನಗರದಲ್ಲಿ ಡಿಸೆಂಬರ್ 22 ರಂದು ರವಿವಾರ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌-2024ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಓಟದಲ್ಲಿ ಪಾಲ್ಗೋಳ್ಳಲಿರುವ ಓಟಗಾರರಿಗೆ ಮಾರ್ಗಮಧ್ಯೆ ಬಾಯಾರಿಕೆ ನೀಗಿಸಲು, ದೇಹಕ್ಕೆ ಅಗತ್ಯವಾಗಿರುವ ಉಪ್ಪಿನಂಶ ಮತ್ತೀತರ ಶಕ್ತಿವರ್ಧಕ ಪಾನೀಯಗಳನ್ನು ಒದಗಿಸಲು 13 ಕಡೆಗಳಲ್ಲಿ ಹೈಡ್ರೇಶನ್ ಪಾಯಿಂಟ್ ಗಳು ಕಾರ್ಯ ನಿರ್ವಹಿಸಲಿವೆ. 

ಈ ಹೈಡ್ರೇಷನ್ ಪಾಯಿಂಟ್ಸ್‌ ಗಳಲ್ಲಿ ಓಟಗಾರರಿಗೆ ಚೈತನ್ಯ ಪಡೆಯಲು ಅಗತ್ಯವಾಗಿರುವ ನೀರು, ಉಪ್ಪಿನಂಶದ ಚೇತೋಹಾರಿ ಲಘು ಖಾದ್ಯಗಳು, ಬಾಳೆಹಣ್ಣು, ಗ್ಲುಕೋಸ್ ಯುಕ್ತ ನೀರಿನ ವ್ಯವಸ್ಥೆ ಇರಲಿದೆ.  ಈ ಎಲ್ಲ 13 ಹೈಡ್ರೇಶನ್ ಪಾಯಿಂಟ್ಸ್‌ ಗಳನ್ನು ನಗರದ ಗಣ್ಯರು, ಸಂಘ-ಸಂಸ್ಥೆಗಳು ನಿರ್ವಹಿಸಲಿವೆ ಎಂದು ಹೈಡ್ರೇಶನ್ ಸಮಿತಿಯ ಸಂತೋಷ ಓರಸಂಗ ತಿಳಿಸಿದ್ದಾರೆ. 

ಹೈಡ್ರೇಷನ್ ಪಾಯಿಂಟ್ಸ್‌ ಗಳು ಮತ್ತು ಅವುಗಳನ್ನು ನಿರ್ವಹಣೆ ಮಾಡಲು ಪ್ರಾಯೋಜಕತ್ವ ವಹಿಸಿರುವವರ ಮಾಹಿತಿ ಇಲ್ಲಿದೆ. 

1. ಕಲ್ಯಾಣಶೆಟ್ಟಿ ವೃತ್ತ, ಸ್ಟೇಷನ್ ರಸ್ತೆ- ಡಾ. ಶಂಕರಗೌಡ ಪಾಟೀಲ ನಸಿಂರ್ಗ್ ಹೋಂ ವತಿಯಿಂದ 

2. ಗೊಳಗುಮ್ಮಟ್ಟ- ಉಪಮೇಯರ್ ದಿನೇಶ್ ಹಳ್ಳಿ ಅವರ ವತಿಯಿಂದ 

3. ಗಗನ ಮಹಲ- ವಿಜಯಪುರ ಸಮಾನ ಮನಸ್ಕರ ವತಿಯಿಂದ 

4. ಬಸವೇಶ್ವರ ಸರ್ಕಲ್‌- ಸ್ಫೂರ್ತಿ ಫೌಂಡೇಶನ್ ವತಿಯಿಂದ 

5. ಗಾಂಧಿ ಚೌಕ್‌- ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ 

6. ಶಿವಾಜಿ ಸರ್ಕಲ್‌- ಶ್ರೀರಾಮ ನವಮಿ ಉತ್ಸವ ಸಮಿತಿಯ ಉಮೇಶ ವಂದಾಲ ವತಿಯಿಂದ 

7. ವಾಟರ್ ಟ್ಯಾಂಕ್ ಕ್ರಾಸ್‌- ಎ. ಪಿ. ಗ್ರುಪ್ ವತಿಯಿಂದ 

8. ಇಬ್ರಾಹಿಂ ರೋಜಾ- ಇಬ್ರಾಹಿಂ ರೋಜಾ ಈದ್ಗಾ ಸಮಿತಿ ವತಿಯಿಂದ 

9. ಸೈನಿಕ ಸ್ಕೂಲ್‌- ಸೈನಿಕ್ ಸ್ಕೂಲ್ ವತಿಯಿಂದ 

10. ಸೋಲಾಪುರ ರೋಡ್‌- ಚಾಲುಕ್ಯ ನಗರ- ಸವಿ ವಾಟರ್ ವತಿಯಿಂದ 

11. ಬಿ.ಎಲ್‌.ಡಿ.ಇ ಕ್ಯಾಂಪಸ್‌- ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯ ವತಿಯಿಂದ 

12. ಬಿ.ಎಲ್‌.ಡಿ.ಇ ಎಂಜಿನಿಯರಿಂಗ್ ಕಾಲೇಜು- ಕೆ.ಎ 28 ಆಫ್ ರೋಡರ್ಸ್‌ ವತಿಯಿಂದ 

13. ಜ್ಞಾನಯೋಗಾಶ್ರಮ- ಜ್ಞಾನಯೋಗಾಶ್ರಮ ವತಿಯಿಂದ 

14. ಶ್ರೀ ಸಿದ್ದೇಶ್ವರ ದೇವಸ್ಥಾನ- ಶ್ರೀ ಸಿದ್ಧೇಶ್ವರ ಸಂಸ್ಥೆ ವತಿಯಿಂದ