ಕರ್ತವ್ಯನಿಷ್ಠ ಶಿಕ್ಷಕ ಶಶಿಧರ್ ರೂಗಿ ಅವರಿಗೆ ಮತದಾರರಿಂದ ಸನ್ಮಾನ

ಕರ್ತವ್ಯನಿಷ್ಠ ಶಿಕ್ಷಕ ಶಶಿಧರ್ ರೂಗಿ ಅವರಿಗೆ ಮತದಾರರಿಂದ ಸನ್ಮಾನ  Voters honour devoted teacher Shashidhar Rugi

ಲೋಕದರ್ಶನ ವರದಿ 


ಕರ್ತವ್ಯನಿಷ್ಠ ಶಿಕ್ಷಕ ಶಶಿಧರ್ ರೂಗಿ ಅವರಿಗೆ ಮತದಾರರಿಂದ ಸನ್ಮಾನ  

ಹಾವೇರಿ, ಜು.15: ನಗರದ 29ನೇ ವಾರ್ಡ್ನ ಮತದಾರರು ಎಸ್‌ಐಆರ್ ಕರ್ತವ್ಯದಲ್ಲಿ ತೊಡಗಿದ್ದ ಬಿ.ಎಲ್‌.ಓ ಹಾಗೂ ಶಿಕ್ಷಕ ಶಶಿಧರ್ ರೂಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.  

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೈಕ್ನಿಂದ ಬಿದ್ದು ಕೈ ಮುರಿದುಕೊಂಡಿದ್ದರೂ, ಕರ್ತವ್ಯದಿಂದ ಹಿಂದೆ ಸರಿಯದೇ ಮನೆ ಮನೆಗೆ ತೆರಳಿ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ ಅವರ ಸೇವಾ ಮನೋಭಾವವನ್ನು ಮೆಚ್ಚಿ ವಾರ್ಡ್ನ ಮತದಾರರು ಅವರನ್ನು ಅಭಿನಂದಿಸಿದರು.  

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಶಾಹೀದ್ ದೇವಿಹೊಸೂರು, ಅಮೀರಜಾನ್ ಬೇಪಾರಿ, ಶಫೀ ದೇವಿಹೊಸೂರು, ಸಿದ್ದರಾಜ ಕಲಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.