ಚಂಡೀಗಢ, ನ 11 : ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಚಂಡೀಗಢದ ಅರವಿಂದರ್ ಜಿತ್ ಸಿಂಗ್ ಅವರು ಗುರುನಾನಕ್ ಅವರ 550 ಸಂಕಲನಗಳ ಧ್ವನಿ ಹಾಗೂ ಸಂಗೀತ ಮುದ್ರಣವನ್ನು ಪೂರ್ಣಗೊಳಿಸಿದ್ದಾರೆ. ಧರ್ಮಗುರುಗಳಿಗೆ ಅತ್ಯುತ್ತಮ ಕಾಣಿಕೆ ನೀಡುವ ಉದ್ದೇಶದಿಂದ ಕಳೆದ ಒಂದು ವರ್ಷಗಳಿಂದ ಗುರುನಾನಕ್ ಅವರ ಗೀತೆಗಳ ಸಂಗ್ರಹ ಹಾಗೂ ಮುದ್ರಣದಲ್ಲಿ ತೊಡಗಿರುವ ಸಿಂಗ್, ಐದು ಶತಮಾನಗಳ ಹಿಂದಿನ ಗುರುನಾನಕ್ ಅವರ 'ಶಬ್ದ'ಗಳಿಗೆ ತಮ್ಮ ಮಧುರ ಕಂಠದಾನ ಮಾಡಿದ್ದಾರೆ. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ದೇವರ ಕುರಿತು ಏಕತೆ, ದೈವಿಕ, ಪ್ರೀತಿ, ಶಾಂತಿ, ಸಾರ್ವತ್ರಿಕ ಸಹೋದರತೆ ಮತ್ತು ಆಧ್ಯಾತ್ಮಕ ಭಕ್ತಿಯನ್ನು ಸಾರುವ 'ಗುರ್ಬಾನಿ'ಗಳನ್ನು ಜಗತ್ತಿಗೆ ಸಾರುವುದು. 'ಲಿಸನ್ ಟು ನಾನಕ್ ' ಎಂಬ ಹೆಸರಿನ ಈ ಅಲ್ಬಂ ನವೆಂಬರ್ 12ರ ಗುರು ನಾನಕ್ ದೇವ್ ಅವರ 550ನೇ ಪರ್ಕಾಶ್ ಪೂರಬ್ ದಿನದಂದು ಬಿಡುಗಡೆಯಾಗಲಿದ್ದು, ಇದು ಫ್ಲಾಷ್ ಡ್ರೈವ್ ಅಥವಾ ಪೆನ್ ಡ್ರೈವ್ ಆಗಿ ಲಭ್ಯವಿರಲಿದೆ. ಜೊತೆಗೆ, ಹಲವು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದರ ಸಂಪರ್ಕ ಪಡೆಯಬಹುದಾಗಿದೆ. ಗುರುನಾನಕ್ ಅವರ 550 ಶಬ್ದಗಳ ಸಂಗ್ರಹ, ಮುದ್ರಣ ಹಾಗೂ ಧ್ವನಿ ನೀಡುವ ಯೋಜನೆ ತನ್ನದೇ ಆದ ರೀತಿಯನ್ನು ವಿಭಿನ್ನ ದಾಖಲೆಗಳನ್ನು ನಿಮರ್ಿಸಿದೆ. ಜೊತೆಗೆ, ಗುರುನಾನಕ್ ಫುಲ್ವಾರಿ ಸಂಸ್ಥಾಪಕ ಮತ್ತು ಮಾತಾ ತ್ರಿಪ್ತ ಜಿ ಟ್ರಸ್ಟ್ ನ ಮುಖ್ಯ ಟ್ರಸ್ಟಿಯಾಗಿರುವ ಸಿಂಗ್ ಈಗಾಗಲೇ ತಮ್ಮ ಗುರುಗಳ ಕುರಿತು ಪಂಜಾಬ್ ನಲ್ಲಿ ಎರಡು ಚಿತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಟ್ರಸ್ಟ್ ಚಂಡೀಗಢದಲ್ಲಿ ಮೂರು ದಂತ ಕ್ಲಿನಿಕ್ ಹಾಗೂ ತಪಾಸಣಾ ಪ್ರಯೋಗಾಲಯಗಳನ್ನು ನಡೆಸುತ್ತಿದೆ.