ಸಾಮರಸ್ಯದ ಸಹಬಾಳ್ವೆಗೆ ಇಂತಹ ಕಾರ್ಯಕ್ರಮ ಅವಶ್ಯವಾಗಿದೆ: ಡಾ.ವಿಜಯಮಹಾಂತೇಶ ದಾನಮ್ಮನವರ

Such a program is essential for harmonious coexistence: Dr.Vijayamahantesh Danamma.

ಸಾಮರಸ್ಯದ ಸಹಬಾಳ್ವೆಗೆ ಇಂತಹ ಕಾರ್ಯಕ್ರಮ ಅವಶ್ಯವಾಗಿದೆ: ಡಾ.ವಿಜಯಮಹಾಂತೇಶ ದಾನಮ್ಮನವರ 

ಹಾವೇರಿ 10: ಧರ್ಮ ಪರಿಪಾಲನೆಯು ಜಾತ್ರೆಯ ಉದ್ದೇಶವಾಗಿದ್ದು, ಸಾರ್ಥಕ ಬದುಕು ಸಾಗಿಸಲು ದಾನ, ಧರ್ಮ, ಮಾನವೀಯತೆ, ಪರೋಪಕಾರ, ನಿಸ್ವಾರ್ಥ ಸೇವೆಯ ಮೌಲ್ಯಗಳ ಪ್ರತಿಫಲವು ಪುಣ್ಯ ಸ್ಮರಣೋತ್ಸವದಲ್ಲಿ  ಕಾಣುತ್ತಿದ್ದು, ಸಾಮರಸ್ಯದ ಸಹಬಾಳ್ವೆಗೆ ಇಂತಹ ಕಾರ್ಯಕ್ರಮ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು. 

            ನಗರದ ಶಿವಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ 79 ನೇ ಹಾಗೂ ಲಿಂ. ಶಿವಲಿಂಗ ಸ್ವಾಮಿಗಳ 16 ನೇ ಪುಣ್ಯ ಸ್ಮರಣೋತ್ಸವದ 5 ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

               12ನೇ ಶತಮಾನದಲ್ಲಿ ಸಮಸಮಾಜದ ಕನಸು ಕಂಡ ಬಸವಾದಿ ಶಿವಶರಣರ ದಾರಿಯಲ್ಲಿಯೇ ಇಂದು ಮಠ ಮಾನ್ಯಗಳು ಕಾರ್ಯ ಮಾಡುತ್ತಿದ್ದು, ಅನ್ನ, ಅರಿವು, ಆಶ್ರಯದ ಮೂಲಕ ಜಾತ್ಯಾತೀತ ತತ್ವಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಹುಕ್ಕೇರಿಮಠದ ಲಿಂ. ಶಿವಬಸವ ಮತ್ತು ಲಿಂ. ಶಿವಲಿಂಗ ಶ್ರೀಗಳು ಸಮಾಜದ ಎಲ್ಲಾ ವರ್ಗಗಳಿಗೂ ತ್ರಿವಿಧ ದಾಸೋಹ ಕಲ್ಪಸಿ ಬಸವಾದಿ ಶರಣರ ಆಶಯವನ್ನು ಸಾಕಾರಗೊಳಿಸುಲು ತಮ್ಮ ಜೀವವನ್ನೇ ಮುಡಿಪಾಗಿಟ್ಟ ಮಾತನಾಡುವ ಜ್ಯೋತಿರ್ಗಲಿಂಗವಾಗಿದ್ದಾರೆ ಎಂದರು. 

   ನೇತೃತ್ವ ವಹಿಸಿದ್ದ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಆರ್ಶಿವಚನ ನೀಡಿದರು.                            

  ಹೆಸ್ಕಾಂನ ಚೇರಮನ್ ಅಜ್ಜಂಪೀರ ಖಾದ್ರಿ ಮಾತನಾಡಿದರು.                                 ಸದಾಶಿವ ಸ್ವಾಮೀಜಿ ಮಾತನಾಡಿ ಕುಂಬಮೇಳದ ತ್ರಿವೇಣಿ ಸಂಗಮದ ಪುಣ್ಯಸ್ನಾನವು ಪವಿತ್ರವಾದಂತೆ,ಶ್ರೀಮಠದ ಲಿಂ. ರಾಚೋಟೇಶ್ವರ,ಲಿಂ. ಶಿವಬಸವ ಹಾಗೂ ಲಿಂ. ಶಿವಲಿಂಗ ಶ್ರೀಗಳ ತ್ರಿವೇಣಿ ತಪೋಶಕ್ತಿಯು ಶ್ರೀ ಹುಕ್ಕೇರಿಮಠದ ಆಸ್ತಿಯಾಗಿದೆ.ಪ್ರತಿವರ್ಷವೂ ಜಾತ್ರೆಯ ವಿಜೃಂಭಣೆಯಿಂದ ಜರುತ್ತಿದೆ ಎಂದರು. 

               ಅಧ್ಯಕ್ಷತೆವಹಿಸಿದ್ದ ಮಾದನ ಹಿಪ್ಪರಗಿಯ ಶಿವಲಿಂಗೇಶ್ವರ ವಿರಕ್ತಮಠದ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ,ಎಲ್ಲರನ್ನೂ ಹಿರಿಯರನ್ನಾಗಿ ಮಾಡಿ,ತಾನು ಮಾತ್ರ ಕಿರಿಯ ಎಂದು ಭಾವಿಸಿದವರು ಬಸವಣ್ಣನವರು. ಅವರ ಮಾರ್ಗವನ್ನೇ ಅನುಸರಿಸಿದವರು ಶ್ರೀಮಠದ ಲಿಂ. ಪುಜ್ಯದ್ವಯರು ಎಂದು ಹೇಳಿದರು. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿರೂಪಾಕ್ಷಪ್ಪ ಹಾವನೂರ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. 

    ಸಮಾರಂಭದಲ್ಲಿ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಡಾ. ಶಿವಯೋಗಿ ದೇವರು, ಚನ್ನಬಸವ ದೇವರು, ಮಲ್ಲಿಕಾರ್ಜುನ ದೇವರು, ವೀರಬಸವ ದೇವರು, ಮಾಜಿಶಾಸಕ ಶಿವರಾಜ ಸಜ್ಜನರ, ಮಲ್ಲಿಕಾರ್ಜುನ ಹಾವೇರಿ, ಎಸ್‌.ಎಸ್‌. ಕೂಡ್ಲಪ್ಪನವರ, ಮಹಾಂತಪ್ಪ ಹಲಗಣ್ನನವರ, ರುದ್ರೇಶ ಚಿನ್ನಣ್ಣವನರ, ಡಾ. ಬಸವರಾಜ ವೀರಾಪುರ, ಮಹೇಶ ಚಿನ್ನಿಕಟ್ಟಿ, ಲಲಿತಾ ಕುಂದೂರ, ನವೀನ ಹಾವನೂರ, ಶಂಭುಲಿಂಗಪ್ಪ ಅಟವಾಳಗಿ, ಅಶೋಕ ಮಗಾನೂರ, ಮಾಂತಣ್ಣ ಸುರಳಿಹಳ್ಳಿ, ಗಣೇಶ ಮುಷ್ಠಿ, ಕಳಕಪ್ಪ ತುಪ್ಪದ, ಮಲ್ಲಿಕಾರ್ಜುನ ಸುರಳಿಹಳ್ಳಿ, ಶಿವಯೋಗಿ ಹಂಚಿನಮನಿ, ಸುರೇಶ ಮುರಡಣ್ಣನವರ, ಸಿ.ವಾಯ್‌. ಅಂತರವಳ್ಳಿ, ವನಿತಾ ಗುತ್ತಲ, ಅಮೃತಮ್ಮ ಶೀಲವಂತರ, ಲಲಿತಾ ಹೊರಡಿ, ಸಿ.ಜಿ. ತೋಟಣ್ಣನವರ, ಶಿವಯೋಗಿ ಬೆನಕೊಪ್ಪ, ಬಿ.ಬಸವರಾಜ ಮತ್ತಿತರರು ಉಪಸ್ಥಿರಿದ್ದರು. ಶಿವರುದ್ರಯ್ಯ ಗೌಡಗಾಂವ್ ಪ್ರಾರ್ಥಿಸಿದರು. ತಮ್ಮಣ್ಣ ಮುದ್ದಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಸೋಮಶೇಖರ ಯಾದವಾಡ ವಂದಿಸಿದರು.