ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರೊಂದಿಗೆ ಪಶುವೈಧ್ಯೆ ಡಾ ಸಮೀಕ್ಷಾ ರೆಡ್ಡಿ ಅವರ ಮನೆಗೆ ಬೇಟಿ
Visit to the house of veterinarian Dr. Sameeksha Reddy along with Forest Minister Eeshwar Khandre
ಲೋಕದರ್ಶನ ವರದಿ
ಸಿಂದಗಿ 27 : ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರೊಂದಿಗೆ ಪಶುವೈಧ್ಯೆ ಡಾ ಸಮೀಕ್ಷಾ ರೆಡ್ಡಿ ಅವರ ಮನೆಗೆ ಬೇಟಿ ನೀಡಿ ಕುಟುಂಭಕ್ಕೆ ಸಾಂತ್ವನ ನೀಡಿ ಸಾವಿನ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು, ಸಾವಿಗೆ ಕಾರಣೀಭೂತರಾದವರನ್ನು ತಕ್ಷಣ ಅಮಾನತ್ತು ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಕನಿಷ್ಠ್ಠ 1 ಕೋಟಿ ಪರಿಹಾರ ಕೊಡಬೇಕು ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ ಸೇರಿದಂತೆ ಅನೇಕ ಸಚಿವರಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಶಿವಶರಣ ಯಲಗೋಡ ಮಾತನಾಡಿ, ಡಾ. ಸಮೀಕ್ಷಾ ರಡ್ಡಿ ಅವರು ಸಾವನ್ನಪ್ಪಿದ್ದು ಇದ್ದರಲ್ಲಿ ಡಿಸಿಎಫ್ ಅವರದ್ದು ಸಂಫೂರ್ಣ ತಪ್ಪಿದೆ ಏಕೆಂದರೆ ಡಾ ಸಮೀಕ್ಷೆ ಅವರನ್ನು ರಾತ್ರೋ ರಾತ್ರಿ ಏಕಾಎಕಿಯಾಗಿ ಕರೆದುಕೊಂಡು ಹೋಗಿ ಯಾವುದು ರಕ್ಷಣೆಯಿಲ್ಲೆ ವನ್ಯಜೀವಿಯ ಚಿಕಿತ್ಸೆ ಕೊಡಿಸಿದ್ದು ಮೊದಲು ತಪ್ಪು ಆ ಕಾರಣಕ್ಕೆ ಅವರನ್ನು ರಕ್ಷಣೆದಿಂದಲೆ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳೀಸಿ ತನಿಖೆಗೆ ಒಳಪಡಿಸಬೇಕು
ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಅಲ್ಲದೆ ಪಶುಪಾಲನಾ ಇಲಾಖೆಯಿಂದ ಪಶುವೈದ್ಯರನ್ನು ನಿಯೋಜನೆ ಮೇಲೆ ಅರಣ್ಯ ಇಲಾಖೆ ಪಡೆಯುವ ಬದಲು ಅರಣ್ಯ ಇಲಾಖೆಯಿಂದಲೇ ತಜ್ಞ ಪಶುವೈದ್ಯರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲು ಮಾನ್ಯ ಸಚಿವರನ್ನು ಕೋರಿಕೊಂಡಿದ್ದೇವೆ ಮತ್ತು ಈ ರೀತಿ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಜಾರಿ ಮಾಡಲು ಮನವಿ ಮಾಡಿದ್ದೇವೆ ಈ ವಿಷಯದ ಕುರಿತು 24 ರಂದು ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ ಅವರು ಶೂನ್ಯ ವೇಳೆಯಲ್ಲಿ ಡಾ ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ಪ್ರಸ್ತಾಪ ಮಾಡಿದ ನಂತರ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ವಿಧಾನಸಬೆಯಲ್ಲಿ ಮಾತನಾಡಿದ್ದು. ನಾವು ಕೂಡಾ ಅಂದು ಅವರನ್ನು ಡಾ ಸಮೀಕ್ಷಾ ರೆಡ್ಡಿ ಅವರ ಮನೆಯಲ್ಲಿ ಭೇಟಿಯಾಗಿ ಅರಣ್ಯ ಇಲಾಖೆಗೆ ಪಶುವೈದ್ಯರನ್ನು ಪಶುಪಾಲನಾ ಇಲಾಖೆಯಿಂದ ನಿಯೋಜನೆ ಮೇಲೆ ಪಡೆಯದೆ ಅರಣ್ಯ ಇಲಾಖೆಯಿಂದಲೇ ನೇರ ನೇಮಕಾತಿ ಮಾಡಿಕೊಳ್ಳಬೇಕು
ಅನ್ನುವುದನ್ನು ಅವರ ಗಮನಕ್ಕೆ ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ತರಲಾಗಿತ್ತು. ಸಚಿವರು ನೇರ ನೇಮಕಾತಿ ಮಾಡಿಕೊಳ್ಳುವ ವಿಷಯ ಪ್ರಸ್ತಾಪ ಮಾಡಿದ್ದಾರೆ ಮತ್ತು ಮೃಗಾಲಯಗಳಲ್ಲಿ ಎಸ್‌ಓಪಿ ಜಾರಿ ಮಾಡುವುದಾಗಿ ಕೂಡಾ ಹೇಳಿದ್ದಾರೆ. ಆದ್ದರಿಂದ ಸನ್ಮಾನ್ಯ ಸಚಿವರಿಗೆ ಮತ್ತು ಶಿವಮೊಗ್ಗಾ ಶಾಸಕರಿಗೆ ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಅದೇ ರೀತಿ ಡಾ ಸಮೀಕ್ಷಾ ರೆಡ್ಡಿ ಅವರ ಸಾವಿನ ತನಿಖೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಿ ತಪ್ಪಿತಸ್ಥರ ವಿರುದ್ಧ ಸನ್ಮಾನ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಕ್ರಮ ಜರುಗಿಸುತ್ತಾರೆ ಅನ್ನುವ ನಂಬಿಕೆ ಕರ್ನಾಟಕ ಪಶುವೈದ್ಯಕೀಯ ಸಂಘಕ್ಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ ರಾಮಚಂದ್ರಯ್ಯ ಸೇರಿದಂತೆ ಅನೇಕರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 