ವಿಜಯಪುರ ಘಟಕ ಧರಣಿ ಸ್ಥಳಕ್ಕೆ ಭೇಟಿ

ವಿಜಯಪುರ ಘಟಕ ಧರಣಿ ಸ್ಥಳಕ್ಕೆ ಭೇಟಿ Visit to the Vijayapura unit protest site

ವಿಜಯಪುರ ಘಟಕ ಧರಣಿ ಸ್ಥಳಕ್ಕೆ ಭೇಟಿ 

 ವಿಜಯಪುರ  02: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟಕ್ಕೆ ಸಂಪೂರ್ಣ ಬೆಂಬಲ    ವಿಜಯಪುರ ಘಟಕ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಕಳೆದ 45 ದಿನಗಳಿಂದ ಡಾ: ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಹೋರಾಟಕ್ಕೆ ಎಸ.ಡಿ.ಪಿ.ಐ (ಸೋಷಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ವಿಜಯಪುರ ಘಟಕವು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಎಸ್‌.ಡಿ.ಪಿ.ಐ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಅತಾವುಲ್ಲಾ ದ್ರಾಕ್ಷಿ ಮಾತನಾಡಿ "ನಮ್ಮ ಜಿಲ್ಲಾ ಆಸ್ಪತ್ರೆ 150 ಎಕರೆ ಜಾಗದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ಇದ್ದರೂ ನಮ್ಮ ಜಿಲ್ಲೆ ರಾಜಕಾರಣಿಗಳು ಇದನ್ನ ಖಾಸಗಿದವರಿಗೆ ಕೊಟ್ಟು ಲೂಟಿ ಹೊಡೆಯೋ ಪ್ರಯತ್ನ ಮಾಡ್ತಾ ಇದಾರೆ. ಎರಡು ಖಾಸಗಿ ವೈದ್ಯಕೀಯ ಕಾಲೇಜು ಇದ್ದರೂ ಬಡವರ ಪರಿಸ್ಥಿತಿ ಹೇಗೆ ಇದೆ ಅಂತಾ ಎಲ್ಲರಿಗೂ ಗೊತ್ತಿದೆ. ಈ ಎರಡರಲ್ಲಿ ಯಾವ ಕಾಲೇಜಿನಲ್ಲಿ ಉಚಿತ ಅಥವಾ ಕಡಿಮೆ ಶುಲ್ಕ ತಗೊತ್ತಾರೆ ಅಂತ ತೋರಿಸಲಿ. ದುಡ್ಡು ಹೊಡೆದು ಕೋಟ್ಯಂತರ ರೂಪಾಯಿ ಗಳಿಸಿ ಧನ್ಯರಾಗಿದ್ದಾರೆ. ಎಂ.ಬಿ.ಪಾಟೀಲರು ಹಾಗೂ ಯತ್ನಾಳ್ ಅವರು ಯಾಕೆ ಇದಕ್ಕೆ ಸ್ಪಂದಿಸುತ್ತಿಲ್ಲ. ಇಲ್ಲಿ ಕೂತಂತಾ ಹೋರಾಟಗಾರರು ನಿಮಗೆ ಕಾಣುತ್ತಿಲ್ಲವೇ. ಸರ್ಕಾರಿ ವೈದ್ಯಕೀಯ ಕಾಲೇಜು ಆಗೋಕೆ ನೀವು ಅಡ್ಡ ಬರ್ತಾ ಇದೀರಿ ಅಂತ ಹೇಳಿದರು.ಮಹಿಳಾ ಘಟಕದ ಜಿಲ್ಲಾಧ್ಯಕ್ಷೇ ಆಯೇಷಾ ಮುಲ್ಲಾ ಮಾತನಾಡಿ ಕೆಲವು ದಿನಗಳ ಹಿಂದೆ ನಮ್ಮ ಜಿಲ್ಲೆಯ ಎಲ್ಲಾ ದೊಡ್ಡ ದೊಡ್ಡ ನಾಯಕರು ಬಂದು ಹೋಗಿದ್ದಾರೆ. ಹೋರಾಟಗಾರರು ರಕ್ತ ಸಹಿ ಚಳುವಳಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಕಳುಹಿಸಿದರು ಕೂಡ ಜಿಲ್ಲೆಯ ದೊಡ್ಡ ನಾಯಕರಿಗೆ ಆ ರಕ್ತದ ಮಹತ್ವನ್ನು ಅವರಿಗೆ ಅರಿವಾಗಲಿಲ್ಲ. ಇಷ್ಟೆಲ್ಲ ಆದ್ರೂ ದೊಡ್ಡ ದೊಡ್ಡ ನಾಯಕರು ಇವರ ಹತ್ತಿರ ಬಂದು ಮಾತಾಡುವ ಪ್ರಯತ್ನ ಕೂಡ ಮಾಡಲಿಲ್ಲ ಎಂದು ಅವರು ಹೇಳಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ "45 ದಿನದಿಂದ ನಡೆತಾ ಇರುವ ಹೋರಾಟ ಯೋಗ್ಯವಾದದ್ದು ಆದರೆ ಸರ್ಕಾರ ಇವರ ಹೋರಾಟ ಕಡೆಗಣಿಸುತ್ತಿದ್ದಾರೆ. ನಮ್ಮ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕಾಗಿದೆ, ಪಿಪಿಪಿ ಹೆಸರಿನಲ್ಲಿ ಬ್ಯುಸಿನೆಸ್ ಮಾಡುವಂತ ಕಾಲೇಜು ನಮಗೆ ಬೇಡ. ನಮಗೆ ಹಿಂತಾ ಕಾಲೇಜು ಬೇಕು ಎಲ್ಲಿ ಬಡವರ ಮಕ್ಕಳು ಕಲಿಯಲು ಸಾಧ್ಯ, ಡಾಕ್ಟರ್ ಆಗಲು ಸಾಧ್ಯ. ಪಿಪಿಪಿ ತಗೊಂಡು ಬಂದು ಬಡ ಮಕ್ಕಳಿಗೆ ಡಾಕ್ಟರ್ ಆಗಬಾರದೆಂದು ಸರ್ಕಾರ ಕೆಲಸ ಮಾಡ್ತಾ ಇದೆ. ಇಷ್ಟೆಲ್ಲ ಸರ್ಕಾರಿ ಜಾಗ ಇದ್ದರು ಯಾಕೆ ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸ್ತಾ ಇಲ್ಲ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಎಸ್‌.ಡಿ.ಪಿ.ಐ ಪದಾಧಿಕಾರಿಗಳಾದ ಬಂದೆನವಾಜ್ ಬಗಲಿ, ಮಶಾಕ್ ವಾಲಿಕಾರ್, ಮೆಹಬೂಬ್ ಕೋಲಾರ, ಅಬ್ದುಲ್ ಇನಾಮದಾರ್, ಮೊಹಮ್ಮದ್ ರಫೀಕ್ ನಾಯದರ್, ಜಮಾಲ್ ಅಹ್ಮದ್ ಮುಲ್ಲಾ, ಅರ್ಬಾರ್ ರಿಸಲ್ದಾರ್, ಶಯಬಾಜ್ ವಾಲಿಕಾರ್, ಯೂಸುಫ್ ಬಿಜಾಪುರ, ಇಮ್ರಾನ್, ಎಂ.ಎಂ. ಪುಣೆಕಾರ್, ಅಬ್ದುಲ್ ಹಮೀದ್ ಶೈಖ್, ಅರಬಜ್ ಚೌಧರಿ, ಜುನೈದ್ ಜಮದರ್, ಬಂದೆನವಾಜ್, ಮುನಾಫ್ ಪಠಾಣ್, ಮಹಿಳಾ ಸದಸ್ಯರಾದ ನಾಜಿಯಾ ಮುಲ್ಲಾ, ನಗ್ಮಾ ಮುಲ್ಲಾ, ಸೀತಾರಾ ತಾಳಿಕೋಟಿ, ಅಸ್ಮಾ ಕಲಾದಗಿ, ರುಮಾನಾ ಮುಲ್ಲಾ, ಕೈನಾತ್ ಮುಲ್ಲಾ, ಮಜನ್ ಗಳಿವಳೇ, ತಬಸ್ಸುಮ್ ಜಹಾಗಿರದಾರ್, ಯಸ್ಮಿನ್ ಮುಲ್ಲಾ, ವಿದ್ಯಾರ್ಥಿಗಳಾದ ಅಂಜನಾ ಚವ್ಹಾಣ್, ಸುಶ್ಮಿತಾ ರಾಥೋಡ್, ಶಿಲ್ಪಾ ರಾಥೋಡ್, ಗಂಗೂಬಾಯಿ ರಾಥೋಡ್, ಪ್ರಿಯಾಂಕಾ ರಾಥೋಡ್ ಹಾಗೂ ಅನೇಕ ಹೋರಾಟದ ಸದಸ್ಯರು ಉಪಸ್ಥಿತರಿದ್ದರು.