ವೈದ್ಯ ವಿಜ್ಞಾನ ವಸ್ತುಪ್ರದರ್ಶನಕ್ಕೆ ಭೇಟಿ
Visit to the Medical Science Exhibition
ಗದಗ 27 : ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ಮೆಡಿವಿಜನ್-2025’ ವೈದ್ಯ ವಿಜ್ಞಾನ ವಸ್ತುಪ್ರದರ್ಶನಕ್ಕೆ ನಗರದ ರೋಟರಿ ಗದಗ ಸೆಂಟ್ರಲ್ ಸದಸ್ಯರು ಭೇಟಿ ನೀಡಿ ಮಾಹಿತಿಯನ್ನು ಪಡೆದರು.
ಜಿಲ್ಲೆಯಲ್ಲಿ ನಡೆದ ಮೊಟ್ಟಮೊದಲ ಬೃಹತ್ ವೈದ್ಯಕೀಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಾನವ ದೇಹದ ರಚನೆ ಮತ್ತು ಕಾರ್ಯ ವೈಖರಿಗಳನ್ನು ಕಣ್ಣಾರೆ ಕಂಡು ನಮ್ಮ ಕಣ್ಣು,ಕಿವಿ,ಮೂಗು,ಬಾಯಿ ಸೇರಿದಂತೆ ಇಡೀ ದೇಹದಲ್ಲಿನ ಅಂಗರಚನೆಗಳ ಸೂಕ್ಮವಿಷಯಗಳನ್ನು ಪರಿಚಯಿಸುವ ಮತ್ತು ಸಂಶಯದ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವಂತಹ ಅವಕಾಶವನ್ನು ಇದು ಒದಗಿಸಿದ್ದು ಆರೋಗ್ಯ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸುವಂತಹ ಸ್ತುತ್ಯ ಕಾರ್ಯವನ್ನು ಈ ವಸ್ತುಪ್ರದರ್ಶನ ಮಾಡಿದೆ. ನಿರ್ದೇಶಕರಾದ ಡಾ.ಬಸವರಾಜ ಬೊಮ್ಮನಹಳ್ಳಿ ಮತ್ತು ಎಲ್ಲ ಸಿಬ್ಬಂದಿಗಳ ಈ ಕಾರ್ಯ ಮೆಚ್ಚುಗೆಗೆ ಕಾರಣವಾಗಿದೆ ಎಂದು ಅಧ್ಯಕ್ಷ ಚೇತನ ಅಂಗಡಿ ಹೇಳಿದರು. ಜನರಲ್ ಮೆಡಿಸಿನ್, ಮನೋವೈದ್ಯಕೀಯ, ಇಎನ್,ಟಿ,ಸರ್ಜರಿ, ರಕ್ತ, ಕರಳು, ಕಿಡ್ನಿ, ಮೂಳೆ, ಎಲುಬು, ಪ್ರಸೂತಿ , ಹೆರಿಗೆ ಕುರಿತು ಸ್ಟಾಲ್ಗಳಿಗೆ ಭೇಟಿ ನೀಡಿ ರೋಟರಿ ಗದಗ ಸೆಂಟ್ರಲ್ ಪದಾಧಿಕಾರಿಗಳು ಸದಸ್ಯರು ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ವಸ್ತು ಪ್ರದರ್ಶನದ ಸಮಗ್ರ ಮಾಹಿತಿಯನ್ನು ಡಾ.ಪ್ರದೀಪ ಕಡಿವಾಲ್ ನೀಡಿದರು. ಕಾರ್ಯದರ್ಶಿ ರಾಜು ಉಮನಾಬಾದಿ .ಖಜಾಂಚಿ ಡಾ.ಪ್ರಭು ಗಂಜಿಹಾಳ, ಅಸಿಸ್ಟಂಟ್ ಗೌರ‌್ನರ್ ವಿ,ಕೆ.ಗುರುಮಠ, ಮಾಜಿ ಅಸಿಸ್ಟಂಟ್ ಗೌರ‌್ನರ ಮಲ್ಲಿಕಾರ್ಜುನ.ಸಿ.ಐಲಿ, ಮಂಜುನಾಥ ಬೇಲೇರಿ, ರಾಜು ಮುಧೋಳ, ಸುರೇಶ ಅಬ್ಬಿಗೇರಿ, ಸಿ.ಎಫ್.ಪಾಟೀಲ, ಗುರುಶಾಂತಗೌಡ .ಚನ್ನಪ್ಪಗೌಡರ, ಮಂಜುನಾಥ ಕಬಾಡಿ, ಶಶಿಧರ ದಿಂಡೂರ, ಎಂ.ಬಿ.ರಮಣಿ, ಸಿದ್ದಲಿಂಗೇಶ ಉಮಚಗಿ, ಸುರೇಶ ನಿಡಗುಂದಿ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 