ನವದೆಹಲಿ, ಮೇ 26, ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್ಐ ಸುದ್ದಿಸಂಸ್ಥೆ)ಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ವಿಶ್ವಾಸ್ ತ್ರಿಪಾಠಿ ಅವರು ಪುನರಾಯ್ಕೆಗೊಂಡಿದ್ದಾರೆ. ಅವರ ಅಧಿಕಾರಾವಧಿ ಎರಡು ವರ್ಷಗಳು.ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ತ್ರಿಪಾಠಿ ಅವರು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಚೇಂಬರ್ ಆಫ್ ಕಾಮರ್ಸ್ ಆಂಡರ್ ಇಂಡಸ್ಟ್ರಿ (ಬ್ರಿಕ್ಸ್ ಸಿಸಿಐ)ಯ ಅಧ್ಯಕ್ಷರೂ ಆಗಿದ್ದಾರೆ. ಈ ಸಂಸ್ಥೆಯು, ಬ್ರಿಕ್ಸ್ ನ ನೆರೆಯ ಮತ್ತು ಸ್ನೇಹ ಸಂಬಂಧ ಇರುವ ರಾಷ್ಟ್ರಗಳೊಂದಿಗೆ ವಾಣಿಜ್ಯ ಮತ್ತು ಉದ್ಯಮವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.
ತ್ರಿಪಾಠಿ ಅವರು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸ್ಟೇರ್ಸ್ ಫೌಂಡೇಶನ್‌ನ ಮಂಡಳಿಗೂ ಆಯ್ಕೆಯಾಗಿದ್ದರು. ಸ್ಟೇರ್ಸ್ ಫೌಂಡೇಶನ್ ಎಂಬುದು ಹೆಚ್ಚಿನ ಸಂಯೋಜಿತ ಪ್ರಯತ್ನ ಮತ್ತು ಭಾರತದಾದ್ಯಂತ ವಿಶಾಲ-ಆಧಾರಿತ ಕ್ರೀಡೆಗಳಿಗಾಗಿ ಅದರ ಕ್ರಾಂತಿಕಾರಿ ಕಾರ್ಯಕ್ರಮಗಳಿಗೆ ನಿರ್ದೇಶನ ನೀಡಲು ಪ್ರಾರಂಭಿಸಲಾಗಿರುವ ಒಂದು ಎನ್‌ಜಿಒ ಆಗಿದೆ.ತ್ರಿಪಾಠಿ ಅವರು ದೆಹಲಿ ಫ್ಲೈಯಿಂಗ್ ಕ್ಲಬ್‌ನ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ. ಭಾರತದ ಪ್ರತಿಷ್ಠಿತ ಸಿ.ಎ. ಸಂಸ್ಥೆಯಾದ 'ವಿ ಸಹಾಯಿ ತ್ರಿಪಾಠಿ ಆಂಡ್ ಕೋ' ನಲ್ಲಿ ಪಾಲುದಾರರಾಗಿರುವ ತ್ರಿಪಾಠಿ ಅವರು, ಇ-ಆಡಳಿತ, ಇ-ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಮಾರ್ಕೆಟಿಂಗ್ ಕುರಿತು ಅನೇಕ ಕೃತಿಗಳನ್ನು ಬರೆದಿದ್ದಾರೆ.ಉರ್ವಾರಾ ಆಗ್ರೋ ಬಯೋಟೆಕ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿರುವ ಅವರು, ಫೌಂಡೇಶನ್ ಫಾರ್ ಆರ್ಗನೈಸೇಷನಲ್ ರೀಸರ್ಚ್ ಆಂಡ್ ಎಜುಕೇಶನ್ (FORE)ನ ಸದಸ್ಯರಾಗಿದ್ದಾರೆ. ಮಾತ್ರವಲ್ಲ ಇಂಟರ್ ನ್ಯಾಷನಲ್ ಜರ್ನಲಿಸ್ಟ್ ಸೆಂಟರ್‌ನ ಜೀವಮಾನ ಸದಸ್ಯರೂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಶ್ರೇಷ್ಠ ವೃತ್ತಿಜೀವನದಲ್ಲಿ, ಅವರು ಹಲವಾರು ಸಂಸ್ಥೆಗಳು ಲಾಭದಾಯಕ ಮತ್ತು ಸುಸ್ಥಿರ ಉದ್ಯಮಗಳಾಗಿ ರೂಪುಗೊಳ್ಳಲು ನೆರವು ನೀಡಿದ್ದಾರೆ.ತ್ರಿಪಾಠಿ ಅವರು ಇಎನ್‌ಆರ್‌ಐ ಓಮ್ನಿಕೇರ್ ಸಂಸ್ಥೆಗೆ ಹಣಕಾಸು ಮತ್ತು ಕಾರ್ಯಾಚರಣೆಗಳಲ್ಲಿ ಕಾರ್ಯತಂತ್ರದ ನಿರ್ದೇಶನವನ್ನು ಸಹ ಒದಗಿಸುತ್ತಿದ್ದಾರೆ. ತ್ರಿಪಾಠಿ ಅವರು, ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ರೋಸ್ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದಾರೆ.ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಪದವಿ ಪಡೆದಿರುವ ತ್ರಿಪಾಠಿ ಅವರು, 1988 ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದಿಂದ (ಐಸಿಎಐ) ತಮ್ಮ ಚಾರ್ಟರ್ಡ್ ಅಕೌಂಟೆಂಟ್ ಪದವಿಯನ್ನು ಪಡೆದಿದ್ದಾರೆ.ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ, ಕಾರ್ಪೊರೇಟ್ ಸಲಹೆ, ಲೆಕ್ಕಪರಿಶೋಧನೆ, ತೆರಿಗೆ ಮತ್ತು ಹೂಡಿಕೆ ಯೋಜನೆ, ವ್ಯವಹಾರ ಸಲಹಾ ಸೇವೆಗಳು, ವ್ಯವಹಾರ ಅಭಿವೃದ್ಧಿ ಮತ್ತು ವ್ಯವಹಾರ ತಂತ್ರಗಳನ್ನು ಸ್ಥಾಪಿಸುವುದು ಅವರ ಪ್ರಮುಖ ಅನುಭವದ ಕ್ಷೇತ್ರಗಳಾಗಿವೆ.ಅವರು ಜ್ಯೋತಿಷ್ಯದಲ್ಲಿ 'ಜ್ಯೋತಿಶ್ ಪ್ರವೀಣ್' ಬಿರುದು ಪಡೆದಿದ್ದು, ಜ್ಯೋತಿಷ್ಯ ವಿಜ್ಞಾನವನ್ನು ಹವ್ಯಾಸವಾಗಿ ಅಧ್ಯಯನ ಮಾಡಲು ತೀವ್ರ ಆಸಕ್ತಿ ಹೊಂದಿದ್ದಾರೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಯೂ ಆಗಿರುವ ತ್ರಿಪಾಠಿ ಅವರು, ಹಲವಾರು ಸಾಮಾಜಿಕ ಉದ್ಯಮಗಳನ್ನು ತೊಡಗಿಸಿಕೊಳ್ಳಲು ಮತ್ತು ಬೆಂಬಲಿಸಲು ಇಷ್ಟ ಪಡುತ್ತಾರೆ.