ವಿಶ್ವಕರ್ಮ ಬ್ರಾಹ್ಮಣರ ಮೂಲ ಆರಾಧ್ಯ ದೇವನಾಗಿದ್ದಾನೆ: ಚಿಕ್ಕುಂಬಿಯ ಅಭಿನವ ನಾಗಲಿಂಗ ಮಹಾಸ್ವಾಮಿ

ರಾಣಿಬೆನ್ನೂರ,19: ವೇದಗಳಲ್ಲಿರುವ ನಿರಾಕಾರ ಪರಬ್ರಹ್ಮನೇ ವಿಶ್ವದ ನಿರ್ಮಾಣಕ್ಕಾಗಿ ಸಗುಣ ರೂಪವನ್ನು ತಾಳಿ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನಗಳೆಂಬ  ಪಂಚವಕ್ತ್ರನಾಗಿ ಅವಿರ್ಭಸಿದನು. ಇವನೇ ಸ್ವಯಂಭೂ ವಿಶ್ವಕರ್ಮ ಪರಬ್ರಹ್ಮನು. ವಿಶ್ವಕರ್ಮ ಬ್ರಾಹ್ಮಣರ ಮೂಲ ಆರಾಧ್ಯ ದೇವನಾಗಿದ್ದಾನೆ ಎಂದು  ಚಿಕ್ಕುಂಬಿಯ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಹೇಳಿದರು. 

ನಗರದ ಮೌನೇಶ್ವರ ದೇವಸ್ಥಾನ  ಸಮುದಾಯ ಭವನದಲ್ಲಿ ಮಂಗಳವಾರ ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ಭಗವಾನ ವಿಶ್ವಕರ್ಮ ಜಯಂತೋತ್ಸವದಲ್ಲಿ ಭಗವಾನ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತಾಡಿದರು. ಪಂಚ ಮುಖಗಳಿಂದ ಮನು, ಮಯ, ತ್ವಷ್ಟೃ, ಶಿಲ್ಪಿ ಮತ್ತು ವಿಶ್ವಜ್ಞರೆಂಬ ಪಂಚ ಬ್ರಹ್ಮರ್ಷಿಗಳು ಉದ್ಭವಿಸಿದರು. ಇವರಿಗೆ ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಮತ್ತು ಪ್ರಣವವೇದಗಳೆಂಬ ಪಂಚವೇದಗಳನ್ನು ಬೋಧಿಸಿದನು ಎಂದು ನುಡಿದರು. 

  ಇವರ ಪುತ್ರರೇ ಸಾನಗ, ಸನಾತನ, ಅಹಭೂನ, ಪ್ರತ್ನ ಮತ್ತು ಸುಪರ್ಣರೆಂಬ ಪಂಚ ಶಿಲ್ಪರ್ಷಿಗಳು. ಇವರೇ ಈಗಿನ ವಿಶ್ವಕರ್ಮ ಬ್ರಾಹ್ಮಣರ ಮೂಲ ಪುರುಷರು, ವಿಶ್ವಕರ್ಮ ಬ್ರಾಹ್ಮಣರು ಸ್ವಯಂಭೂ ವಿಶ್ವಕರ್ಮನ  ಈ  ಪಂಚ ಬ್ರಹ್ಮರ್ಷಿಗಳ ಪಂಚ ಶಿಲ್ಪರ್ಷಿಗಳ ವಂಶ ಪರಂಪರೆಯಿಂದ ಬಂದವರಾದುದರಿಂದ ಇವರನ್ನು ಪಂಚಾರ್ಷೇಯ ಬ್ರಾಹ್ಮಣರೆಂತಲೂ, ಪಂಚಾಲ ಬ್ರ್ರಾಹ್ಮಣರೆಂತಲೂ, ದೇವ ಬ್ರಾಹ್ಮಣರೆಂತಲೂ ವಿಶ್ವ ಬ್ರ್ರಾಹ್ಮಣರಂತಲೂ ಕರೆಯುತ್ತಾರೆ ಎಂದರು.   

ಸ್ವಯಂಭೂ ವಿಶ್ವಕರ್ಮನ ಅಘೋರ ಮುಖದಿಂದ ಉದ್ಭವಿಸಿದ ತ್ವಷ್ಟೃ ಬ್ರಹ್ಮರ್ಷಿ ಪಂಚ ಬ್ರಹ್ಮಷಿಗಳಲ್ಲಿ ಮೂರನೆಯರು. ಇವರ  ಪುತ್ರನೇ ಅಗ್ನಿದೇವ, ಈ ಅಗ್ನಿಯಿಂದ ಜನಿಸಿದವರೇ ಮಹರ್ಷಿ ಅಂಗೀರಸರು, ಪ್ರಾಚೀನ ಬ್ರಹ್ಮರ್ಷಿಗಳಲ್ಲಿ ಅಂಗೀರಸರು ಅಗ್ರಗಣ್ಯರಾಗಿದ್ದಾರೆ. ತ್ವಷ್ಟೃ ಬ್ರಹ್ಮನ ವಂಶಜರು. ಅಲ್ಲದೇ ಪುರಾಣಗಳಲ್ಲೂ ಅಂಗೀರಸರ ಜನ್ಮದ ಕುರಿತು ವಿವರಣೆ ಇದೆ. ಬ್ರಹ್ಮರ್ಷಿ ಅಂಗೀರಸರು ಅರಣಿಯಲ್ಲಿ ನಿಹಿತವಾಗಿರುವ ಅಗ್ನಿಯನ್ನು ​‍್ರ​ಪ್ರಪ್ರಥಮವಾಗಿ ಸಾಕ್ಷಾತ್ಕರಿಸಿಕೊಂಡು ಪ್ರಕೃತಿಯ ರಹಸ್ಯಗಳನ್ನು ಅರಿತುಕೊಂಡವರು ವಿಶ್ವಕರ್ಮ ಎಂದರು. 

ಪ್ರಕೃತಿಯಲ್ಲಿಯ ಪ್ರಕೋಪ-ವಿಕೋಪಗಳನ್ನು, ಮಾಲಿನ್ಯವನ್ನು ಹೋಗಲಾಡಿಸಲು, ಸಕಲ ಜೀವಿಗಳೂ ಸುಖ ಶಾಂತಿಯಿಂದ ಜೀವಿಸಲು ಯಜ್ಞದಿಂದ ಮಾತ್ರ ಸಾಧ್ಯವೆಂದರಿತು ಯಜ್ಞವಿಧಾನವನ್ನು ​‍್ರ​‍್ರಥಮವಾಗಿ ಅಸ್ತಿತ್ವಕ್ಕೆ ತಂದವರು. ಈ ವಿಧಾನವನ್ನು ಇತರರಿಗೂ ಭೋದಿಸಿ ಪ್ರಸಾರ ಮಾಡಿದರು. ಇದರಿಂದಾಗಿ ಅಂದಿನ ಪ್ರಜೆಗಳು ರೋಗ ರುಜಿನುಗಳಿಗೆ ತುತ್ತಾಗದೇ ದೀರ್ಘಾಯುಸ್ಸನ್ನು ಪಡೆದು ನೆಮ್ಮದಿಯಿಂದ ಇರುತ್ತಿದ್ದರು. ಇಂಹ ಉಚ್ಚಕುಲದಲ್ಲಿ ಜನಿಸಿದ ನೀವು ಆಚಾರವಂತರಾಗಿ ಬದುಕು ಸಾಗಿಸಿದರೆ ಮಾತ್ರ ಈ ಜಯಂತಿಗೆ ಅರ್ಥಬರಲಿದೆ ಎಂದು  ಶ್ರೀಗಳು ತಿಳಿಸಿದರು.   

ಮೌನೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಓಂಕಾರ​‍್ಪ ಅರ್ಕಾಚಾರಿ, ಉಪಾಧ್ಯಕ್ಷ ವೀರಣ್ಣ ಅರ್ಕಾಚಾರಿ, ರಾಘವೇಂದ್ರ ಕಮ್ಮಾರ, ಬಸವರಾಜ  ಬಡಿಗೇರ, ಗೀರೀಶ ಕಮ್ಮಾರ, ಬ್ರಹ್ಮಚಾರಿ ಕಮ್ಮಾರ, ಎಂ.ಎಫ್‌. ಸುಧಾಕರ, ಮೌನೇಶ ಬಡಿಗೇರ, ರಮೇಶ ಮೈದೂರು, ನಾಗರಾಜ ಬಡಿಗೇರ, ಚಿದಾನಂದ ಕಮ್ಮಾರ, ಕೃಷ್ಣಾ ಕಮ್ಮಾರ, ಚಂದ್ರು ಹುಲ್ಲತ್ತಿ, ಹೇಮಾಚಾರ ಬಡಿಗೇರ, ಪರಮೇಶ್ವರ ಬಡಿಗೇರ, ಖಂಡೇಶ, ಮಾನಪ್ಪ ಬಡಿಗೇರ, ಗಣಪತಾಚಾರ್, ಸುರೇಶಾಚಾರ್, ಕೇಶವಾಚಾರ್ ಸೇರಿದಂತೆ ವಿಶ್ವಕರ್ಮ ಸಮಾಜದ ಮಹಿಳೆಯರು ಮತ್ತಿತರರು ಉಪಸ್ಥಿತರಿರವರು.