ಶಾಸಕ ನಾಗೇಂದ್ರವರ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
Vishwakarma Jayanti celebrated at MLA Nagendra's office
ಬಳ್ಳಾರಿ 19: ರಂದು ಮಾಜಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಬಿ.ನಾಗೇಂದ್ರವರ ಕಛೇರಿಯಲ್ಲಿ "ವಿಶ್ವಕರ್ಮ " ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಬಿ.ನಾಗೇಂದ್ರವರ ಆಪ್ತರು, ಕಾಂಗ್ರೇಸ್ ಪಕ್ಷದ ಮುಖಂಡರುಗಳು ಹಾಗೂ ವಿಶ್ವ ಕರ್ಮ ಸಮುದಾಯದ ಮುಖಂಡರು ಸೇರಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಶಾಸಕರ ಕಚೇರಿಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವದ ನಿಮಿತ್ತ ವಿಶ್ವಕರ್ಮ ಮಹಿಳಾ ಅಧ್ಯಕ್ಷರಾದ ತ್ರಿವೇಣಿ ಪತ್ತಾರ್ ಅವರಿಗೆ, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಶ್ರೀಧರಗಡ್ಡೆ ಚಂದ್ರಶೇಖರ ಆಚಾರ್, ವಿಶ್ವಕರ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕಪ್ಪಾಗಲ್ ಚಂದ್ರಶೇಖರ ಆಚಾರ್, ವೀರಶ್ ಶಿಲ್ಪಿ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿಗಳ ಅಧ್ಯಕ್ಷರಾದ ಕೆಇ.ಚಿದಾನಂದಪ್ಪ, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಪಿ.ಜಗನ್, ಪಕ್ಷದ ಮುಖಂಡರುಗಳಾದ ಕೊಳಗಲ್ ಎರ್ರಿಸ್ವಾಮಿ, ಎರಗುಡಿ ಮಲ್ಲಯ್ಯ, ನಾಗಲಕೆರೆ ಗೋವಿಂದ, ಶ್ರೀನಾಥ್, ಸಂಗನಕಲ್ಲು ವಿಜಯ ಕುಮಾರ್, ಎಪಿಎಂಸಿ ಸದಸ್ಯ ಕುದನ್ ಸಾಬ್, ಇಂಟೆಕ್ ಜಿಲ್ಲಾಧ್ಯಕ್ಷ ರೂಪನಗುಡಿ ರಾಮಂಜಿನಿ, ಧನಂಜಯ ಹಮಾಲ್, ಚಾಗನೂರು ರಾಮಕೃಷ್ಣ, ನರೇಂದ್ರ, ಅಥವುಲ್ಲ, ಬಿ.ಎ.ಮಲ್ಲೇಶ್ವರಿ ಸೇರಿದಂತೆ ಶಾಸಕರ ಅಭಿಮಾನಿ ಬಳಗದವರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 