20ರಂದು ವಿಶ್ವಗುರು ಬಸವೇಶ್ವರ ಜಯಂತಿ: ಶಿವಾನುಭವ ಗೋಷ್ಠಿ

20ರಂದು ವಿಶ್ವಗುರು ಬಸವೇಶ್ವರ ಜಯಂತಿ: ಶಿವಾನುಭವ ಗೋಷ್ಠಿ  Vishwaguru Basaveshwara Jayanti on the 20th: Shiva experience gathering

ಪಾಲಬಾವಿ 16: ರಾಯಬಾಗ ತಾಲೂಕು ಮರಾಕುಡಿ ಪುಟ್ಟ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ 12ನೇ ಶತಮಾನದ ಮಹಾಪುರುಷ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ದಿ.20ರಂದು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.  

ಸೋಮವಾರ ದಿ.21 ಮುಂಜಾನೆ 6 ಗಂಟೆಗೆ ಬಸವೇಶ್ವರ ದೇವಸ್ಥಾನದಲ್ಲಿರುವ ನಂದಿ ವಿಗ್ರಹಕ್ಕೆ ಪಂಚಾಕ್ಷರಿ ಮಹಾಮಂತ್ರದೊಂದಿಗೆ, ರುದ್ರಾಭಿಷೇಕ, ಹಾಗೂ ಮಹಾಪೂಜೆ ನೆರವೇರುವುದು. 9 ಗಂಟೆಗೆ ಮಾರುತಿ ದೇವರ ದೇವಸ್ಥಾನದಿಂದ ಸುಮಂಗಲರಿಂದ ಕುಂಭ,ಆರತಿಯೊಂದಿಗೆ ಬಸವೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಎತ್ತುಗಳ ಭವ್ಯ ಮೆರವಣಿಗೆ ಜರುಗುವುದು. ಮಧ್ಯಾಹ್ನ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರೆ​‍್ಣ ನೆರವೇರುವುದು.  

ಮುಂಜಾನೆ 11ಗಂಟೆಗೆ ದೇವಸ್ಥಾನದ ವೇದಿಕೆಯಲ್ಲಿ ಯರಗಟ್ಟಿ ಗ್ರಾಮದ ಸದಾಶಿವ ಚೌಡಕಿ ಗಾಯನ ಸಂಘ ಹಾಗೂ ನಿಂಗಾಪುರದ ದುರ್ಗಾದೇವಿ ಚೌಡಕಿ ಗಾಯನ ಸಂಘ ಕಲಾವಿದರಿಂದ ಹರದೇಶಿ -ನಾಗೇಶಿ ತುರಸಾ ತುರುಸಿನ ಚೌಡಕಿ ಪದಗಳ ಹಾಡುಗಾರಿಕೆ ಜರುಗುವುದು.  

ಸಂಜೆ 4ಗಂಟೆಯಿಂದ 7ಗಂಟೆಯ ವರೆಗೆ ಶಿವಯ್ಯ ಮಠಪತಿ ಯವರ ನೇತೃತ್ವದಲ್ಲಿ ಬಲಭೀಮ ಭಜನಾ ಮಂಡಳ, ನೀರಲಕುಡಿ ಇವರಿಂದ ಮಧ್ಯಾಹ್ನ ಭಜನಾ ಕಾರ್ಯಕ್ರಮವು ಜರಗುವವು. ಸಂಜೆ 7ಗಂಟೆಗೆ ಮಹಾತ್ಮರಿಂದ ಶಿವಾನುಭವ ಗೋಷ್ಠಿ ಕಾರ್ಯಕ್ರಮವು ಜರುಗುವುದು. "ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ  ಚನ್ನಬಸವಣ್ಣನವರ ವಚನವನ್ನು ಆಧಾರವಾಗಿಟ್ಟುಕೊಂಡು ಸಕಲ ಪೂಜ್ಯರು ಶಿವಾನುಭವಗೋಷ್ಠಿಯಲ್ಲಿ ಅನುಭವ ಹಂಚಿಕೊಳ್ಳುವವರು.  

ಇಂಚಗೇರಿ ಮಠದ ಸಮರ್ಥ ಸದ್ಗುರು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷರು ಶಶಿಕಾಂತ ಗುರೂಜಿ ಪಾವನ ಸಾನಿಧ್ಯವಹಿಸುವರು. ರನ್ನಬೆಳಗಲಿಯ ಮಾತುಶ್ರೀ ಕಾಶಿಬಾಯಿ ಪುರಾಣಿಕ, ಮಾರಾಪುರದ ಶರಣ ಶ್ರೀಮಂತ ಮಹಾರಾಜರು ಪ್ರವಚನ ನೀಡುವರು. ರನ್ನಬೆಳಗಲಿಯ ಶಂಭುಲಿಂಗ ಆಶ್ರಮದ ಮುಖ್ಯಸ್ಥರು ಶರಣ ಬಸವರಾಜ ಪುರಾಣಿಕ ಕಾರ್ಯಕ್ರಮವನ್ನು ನಿರ್ವಹಿಸುವರು ಎಂದು ಬಸವೇಶ್ವರ ದೇವಸ್ಥಾನ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.