ಬಸವ ಭವನದಲ್ಲಿ ನಡೆದ ವಿಶ್ವ ಹಿಂದೂ ಪರಿಷತ, ಮಹಾ ಸಂತ ಸಮಾವೇಶ
Vishwa Hindu Parishad, Maha Sant Samavesha held at Basava Bhavan
ಜಮಖಂಡಿ 24: ಸಮಾಜದಲ್ಲಿ ಯಾರು ಸದಾಕಾಲ ಸ್ವಾಸ್ಥ್ಯವನ್ನು ಬಯಸುತ್ತಾರೆ ಅವರುಗಳು ಹಿಂದುಗಳಾಗಿದ್ದಾರೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸಮಾನತೆಯನ್ನು ಕಾಣುವದೇ ನಮ್ಮ ಸನಾತನ ಹಿಂದೂ ಧರ್ಮವಾಗಿದೆ ಎಂದು ಕನೇರಿ ಕಾಡಸಿದ್ದೇಶ್ವರಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.ನಗರದ ಬಸವ ಭವನದಲ್ಲಿ ನಡೆದ ವಿಶ್ವ ಹಿಂದೂ ಪರಿಷತ, ಭಜರಂಗದಳ ಸಹಯೋಗದಲ್ಲಿ ಮಹಾ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಪ್ರತಿಸುವದನ್ನು ಕಲಿಸಿದೆ, ದ್ವೇಶ ಬಾವನೆಯನ್ನು ಎಂದಿಗೂ ಕಲಿಸಿಲ್ಲ. ಚೊಟುದ್ದ ಧರ್ಮದವರು ಎಲ್ಲಿಂದಲೋ ಬಂದು ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಅವರಿಗೆ ತಕ್ಕ ಉತ್ತರ ನೀಡಬೇಕಾದರೆ ನಾವೆಲ್ಲ ಒಂದಾಗಬೇಕು ಎಂದರು.
ಇಂದು ನಾವು ಎಚ್ಚರಗೊಳ್ಳಬೇಕಿದೆ. ಏಕೆಂದರೆ ದೇಶದಲ್ಲಿ 7,24 ಲಕ್ಷ ಮದರಸಾಗಳಿವೆ. ಆದರೆ ಅಲ್ಲಿ ಕಲಿಸುವದು ಅತೀ ಭಯಂಕರವಾದ ಮತಾಂತರ, ಮೂರ್ತಿ ಪೂಜಕರನ್ನು ಕೊಲೆ ಮಾಡುವ, ದೇಶದಲ್ಲಿ ಓರ್ವ ಹಿಂದೂ ಕೂಡಾ ಉಳಿಯಬಾರದು ಎಂದು ಬೋಧನೆ ಮಾಡುತ್ತಾರೆ. ಜಮಾತ ಹೆಸರಿನಲ್ಲಿ ಅಮಾಯಕ ಮುಸ್ಲಿಮರನ್ನೂ ತಪ್ಪು ದಾರಿಗೆ ತರುವ ಪ್ರಯತ್ನ ಅವ್ಯಾಹತವಾಗಿ ನಡೆದಿದೆ ಎಂದರು.ದೇಶವನ್ನು 2047 ರ ಒಳಗಾಗಿ ಸಂಪೂರ್ಣ ಇಸ್ಲಾಮೀಕರಣ ಮಾಡುವ ಉದ್ದೇಶದಿಂದ ಲವ್ಹ ಜಿಹಾದಂತಹ ವಿಕೃತ ಕಾರ್ಯಕ್ಕೆ ಕೈಹಾಕಿ ಹಿಂದು ಯುವತಿಯರ ಮನಸ್ಸು ಕೆಡಿಸಿ ಮತಾಂತರ ಮಾಡಿ ಅವರನ್ನು ಹೆರುವ ಯಂತ್ರಗಲಕನ್ನಾಗಿಸಿದ್ದಾರೆ. ಈಗಲೂ ನಾವು ಎಚ್ಚರಗೊಳ್ಳದಿದ್ದರೆ ಮುಂದೆ ಭಯಂಕರ ದಿನ ನೋಡಬೇಕಾಗುತ್ತದೆ. ಈಗಾಗಲೇ ಭಾರತದಲ್ಲಿ ಸುಮಾರು 10 ಕೋಟಿ ಜನರು ನುಸುಳುಕೋರರು ಬಂದಿದ್ದಾರೆ. ಅವರಿಗೆ ಎಲ್ಲ ಸೌಲಭ್ಯವನ್ನು ಅಲ್ಲಿಯ ಸರಕಾರಗಳು ನೀಡಿದ್ದಾರೆ. ಅವರೆಲ್ಲರೂ ಐದಾರು ಮದುವೆಯಾಗಿ ಹತ್ತಾರು ಮಕ್ಕಳನ್ನು ಹೆತ್ತು ತಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡುತ್ತಲಿದ್ದಾರೆ. ಅಂತ ನುಸುಳು ಕೋರರನ್ನು ಹೊರಗಟ್ಟುವ ಕಾರ್ಯವಾಗಬೇಕು ಎಂದರು.ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಸಂಘವು ಅನೇಕ ಕ್ಷೇತ್ರಗಳಲ್ಲಿ ತನ್ನ ಕಾರ್ಯವನ್ನು ಮಾಡುತ್ತಿದೆ. ಇದೇ ಸಂಘವು ಶತಮಾನದ ಹೊಸ್ತಿಲಲ್ಲಿ ಬಂದು ನಿಂತಿದೆ. ಸಂಘದಿಂದಲೇ ಹಿಂದೂ ಧರ್ಮವು ಉಳಿಯಲಿದೆ ಅದರ ಜೊತೆಗೆ ನಾವೆಲ್ಲ ಮಹಾಸ್ವಾಮಿಗಳು ಕೈಜೋಡಿಸಬೇಕು ಎಂದರು.ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು, ಪ್ರಭು ಬೆನ್ನಾಳೆ ಮಹಾರಾಜರು ಮಾತನಾಡಿದರು,
ಇದೇ ಸಂದರ್ಭದಲ್ಲಿ ನೂರಾರು ವಿವಿಧ ಮಠಾಧೀಶರುಗಳು ವೇದಿಕೆಯಲ್ಲಿ ಉಪಸ್ಥಿತರಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 