ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿರೂಪಾಕ್ಷಪ್ಪ ಚಾಲನೆ

ಬ್ಯಾಡಗಿ೦೮: ದೇಶದ ಆರ್ಥಿಕ  ಪ್ರಗತಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕರ್ಾರ ಉತ್ತಮ ಬಜೆಟ್ನ್ನು ನೀಡಿದ್ದು ಕಾಂಗ್ರೆಸ್ಸೇತರ ಸರ್ಕಾರ ರವೊಂದು ಇಷ್ಟೊಂದು ದೊಡ್ಡ ಮೊತ್ತದ ಬಜೆಟ್ ಪ್ರಕಟಿಸುವ ಮೂಲಕ ದೇಶವನ್ನು ವಿಶ್ವದ ನಂ.1 ಮಾಡುವ ನಿಟ್ಟಿನಲ್ಲಿ ದಾಪು ಗಾಲಿಡುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು. 

        ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಬಾಬು ಜಗಜೀವನರಾಮ್ ಜನ್ಮದಿನಾಚರಣೆ ಕಾರ್ಯಕ್ರಮ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಜೆಟ್ ಎಂದರೆ ಜಾತಿವಾರು ಸಮುದಾಯಕ್ಕೆ ಕೇವಲ ಪುಕ್ಕಟೆ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲ, ದೇಶ ಪ್ರಗತಿಯನ್ನು ಕಾಣಬೇಕಾದಲ್ಲಿ ಎಲ್ಲ ಸಮುದಾಯಗಳ ಸಾರ್ವತ್ರಿಕ ಏಳಿಗೆಯನ್ನು ನೋಡಬೇಕಾಗುತ್ತದೆ ಎಂದರು.

       ಆರ್ಥಿಕವಾಗಿ ಸುಸ್ಥಿತಿ ಕಾಣಬೇಕಾಗಿದೆ: ಯಾವುದೇ ಸಕರ್ಾರವಿರಲಿ ದೇಶ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾಗ ಮಾತ್ರ ಪ್ರಗತಿಯನ್ನು ಕಾಣಲು ಸಾಧ್ಯ, ಇದಕ್ಕಾಗಿ ಸಾಕಷ್ಟು ಹೋರಾಟಗಳನ್ನು ಮಾಡುವ ಮೂಲಕ ಇಂತಹದ್ದೊಂದು ಬೃಹತ್ ಕನಸನ್ನು ಹೊತ್ತುಕೊಂಡು ಬಿಜೆಪಿ ಪಕ್ಷದೊಂದಿಗೆ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ನರೇಂದ್ರ ಮೋದಿಯವರ ಕನಸು ನನಸಾಗುವ ದಿನಗಳು ಸಮೀಪಿಸುತ್ತಿವೆ ಎಂದರು. 

      ವರ್ಚಸ್ಸು ಕಳೆದುಕೊಂಡ ಕಾಂಗ್ರೆಸ್: ಬಾಬು ಜನಜೀವನ್ರಾಮ್ ಅವರಂತಹ ದೂರದೃಷ್ಟಿ ಹಾಗೂ ನಿಸ್ವಾಥರ್ಿ ರಾಜಕಾರಣಿಯನ್ನು ಕಂಡಿಲ್ಲ, ಅವರು ಮಾಡಿದಂತಹ ಹಸಿರುಕ್ರಾಂತಿಯಿಂದ ದೇಶ ಎದುರಿಸಿದ್ದ ಆಹಾರ ಕ್ಷಾಮಕ್ಕೆ ಶಾಶ್ವತ ಪರಿಹಾರ ಕಂಡುಕೊಂಡರು, ಆದರೆ ಅಂತಹವರ ನಿಸ್ವಾರ್ಥ ಸೇವೆಯನ್ನು ಬಳಸಿಕೊಳ್ಳಲಾಗದೇ ಹೋಗಿದ್ದು ದುದರ್ೈವದ ಸಂಗತಿ, ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿ ಕಳೆದಾರು ದಶಕಗಳಿಂದ ದೇಶವನ್ನು ಲೂಟಿ ಮಾಡಿದ ಕಾಂಗ್ರೆಸ್ ಅವನತಿಯ ಕೊನೆಯ ಹಂತವನ್ನು ತಲುಪಿದೆ ಎಂದರು.

     ಸದಸ್ಯತ್ವ ಪಡೆದು ದೇಶವನ್ನು ಸುಭದ್ರಗೊಳಿಸಿ: ಪುರಸಭೆ ಸದಸ್ಯ ಬಿ.ಎಂ.ಛತ್ರದ ಮಾತನಾಡಿ, ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮಖಪಾತ್ರ ವಹಿಸಿದ ದೇಶದ ಜನರು ಇದೀಗ ಬಿಜೆಪಿಯ ಸದಸ್ಯತ್ವನ್ನು ಪಡೆದುಕೊಳ್ಳುವ ಮೂಲಕ ದೇಶವನ್ನು ಮತ್ತಷ್ಟು ರಾಜಕೀಯವಾಗಿ, ಆಥರ್ಿಕವಾಗಿ, ಸಾಮಾಜಿಕವಾಗಿ ಸುಭದ್ರಗೊಳಿಸುವಂತೆ ಮನವಿ ಮಾಡಿದರು.

  ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ಕಾರ್ಯದರ್ಶ  ವಿರೇಂದ್ರ ಶೆಟ್ಟರ, ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ಸುಭಾಸ್ ಮಾಳಗಿ, ಈರಣ್ಣ ಬಣಕಾರ, ಫಕ್ಕೀರಮ್ಮ ಛಲವಾದಿ, ಹನುಮಂತ ಮ್ಯಾಗೇರಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರ ಎಪಿಎಂಸಿ ನಿದರ್ೇಶಕ ವಿಜಯ ಮಾಳಗಿ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ವಿ.ವಿ.ಹಿರೇಮಠ, ಜೆ.ಸಿ.ಚಿಲ್ಲೂರಮಠ, ಸುರೇಶ ಅಸಾದಿ, ನಾಗರಾಜ ಹಾವನೂರ, ಮೋಹನ ಕತ್ತಿ, ಅರಣ ಪಾಟೀಲ, ಜಯಣ್ಣ ಬೋವಿ, ವಿದ್ಯಾಶೆಟ್ಟಿ, ಸುಭಾಸ್ ಗಂಗಮ್ಮನವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.