ಮಹಿಳೆಯರ ಹೋರಾಟಕ್ಕೆ ಮಣಿದು ತಲ್ಲೂರು ಗ್ರಾಮದ ವಿರೇಶ ವೈನ್ ಶಾಪ್ ಸ್ಥಳಾಂತರ
Viresha Wine Shop in Tallur village shifted after women's struggle
ಯರಗಟ್ಟಿ 05 : ಮಹಿಳೆಯರ ಹೋರಾಟಕ್ಕೆ ಮಣಿದು ತಲ್ಲೂರು ಗ್ರಾಮದ ವಿರೇಶ ವೈನ್ ಶಾಪ್ ಸ್ಥಳಾಂತರಕ್ಕೆ ಮುಂದಾದ ಅಬಕಾರಿ ಇಲಾಖೆ ಸಮೀಪದ ತಲ್ಲೂರ ಗ್ರಾಮದಲ್ಲಿ ನಡೆದ ನಿರಂತರ ಹೋರಾಟದ ಸ್ಥಳಕ್ಕೆ ಅಬಕಾರಿ ಸಿಪಿಐ ಡಿ ಡಿ ಶಿಂಧೋಗಿ ಭೇಟಿ ನೀಡಿ ಪರೀಶೀಲನೆ ನಡೆಸಿ ಮಾಹಿತಿ ಪಡೆದು ಇಲ್ಲಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಂಡು ಬಂದಿದೆ. ಚಟಗಾರರು ಮನೆಯಲ್ಲಿ ಪಾತ್ರೆ ಮತ್ತು ಅಕ್ಕಿ, ಜೋಳ ಮಾರಾಟಮಾಡಿ ಕುಡಿತಕ್ಕೆ ದಾಸರಾಗಿದ್ದು ಹಾಗೂ ಅನೇಕರು ಸಾವು ಅಪ್ಪಿರು ಘಟನೆಗಳು ನಡೆದಿವೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡರು. ವೀರೆಶ ವೈನ್ಸ ಮಾಲಕರಿಗೆ ಹಾಗೂ ಸಿಬ್ಬಂದಿಗೆ ಅಬಕಾರಿ ಸಿಪಿಐ ಡಿಡಿ ಶಿಂಧೋಗಿ 15 ದಿನಗಳಲ್ಲಿ ನಿಮ್ಮ ವೈನ್ ಶಾಪ್ ಬೇರೆಡೆ ಸ್ಥಾಳಾತಂರ ಮಾಡಲು ಸೂಚಿಸಿದರು.
ಈ ವೇಳೆಗ್ರಾಮದ ಹಿರಿಯರಾದ ವಿಕ್ರಮ ದೇಸಾಯಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ಯುವಜನತೆ ಹಾಳಾಗಲು ಹಲವರ ಸಾವಿಗೆ ಕಾರಣವಾದ ವೀರೆಶ ವೈನ್ಸ ಶಾಪ ಸ್ಥಾಳಾಂತ ಮಾಡಲು ಮುಂದಾದ ಇಲಾಖೆ ಅಭಿನಂದನೆ ಸಲ್ಲಿಸಿ ಶೀಘ್ರ ಸ್ಥಳಾಂತರಿಸುವಂತೆ ಮನವಿ ಮಾಡಿದರು. ಈ ವೇಳೆ ಅಬಕಾರಿ ಪಿಎಸ್‌ಐಗಳಾದ ಮಹಾದೇವ ಕಟಗೇನ್ನವರ, ಎಸ್.ಎಸ್. ಕಾರಜೋಳ, ಪಿಎಸ್‌ಐ ಡೆಬ್ಲೂ. ಎಚ್. ಯಾದವಾಡ, ಪೊಲೀಸ್ ಸಿಬ್ಬಂದಿ ಎಸ್. ಎಸ್. ಹುಂಬಿ, ಬಿ.ಡಿ. ಕುದರಿ, ಸಂಜೀವಿನಿ ವಕ್ಕೂಟದ ಸದಸ್ಯರು ಹುಸೇನಬಿ ಕುದರಿ, ಲಕ್ಷ್ಮಿ ಪಾಟೀಲ, ಯಶೋದಾ ಕಾಶಪ್ಪನವರ, ಪವಿತ್ರಾ ಈಟಿ, ಕಸ್ತೂರಿ ಹೊಸೂರ, ರೇಣುಕಾ ದೊಡವಾಡ, ಮಾಬುಬಿ ಭಾಗವನ ಸುನಂದಾ ಉಪ್ಪಾರ, ಶಿವಪ್ಪ ಕಡಬಿ, ವಿಠ್ಠಲ ಮಾದರ, ಬಸವರಾಜ ಮುದ್ದಣ್ಣವರ, ಮಂಜುನಾಥ್ ಬಂದಕನವರ, ಮಾರುತಿ ವನ್ನೂರ್, ಪರಮೇಶ್ ಮಾದರ, ಪಕ್ಕೀರ್ಪ ಭಜಂತ್ರಿ, ರತ್ನವ್ವ ಮಾದರ, ರಮಜವ್ವ ಬೆಟಗೇರಿ, ಶಾಂತವ್ವ ಉಪ್ಪಾರ, ಗೌರವ್ವ ಉಪ್ಪಾರ, ದ್ರವಪದಿ ಪಾಟೀಲ, ನಾಗತೇವ್ವಾ ಮಣ್ಣಿಕೇರಿ ಮತ್ತಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 